Thursday, November 30, 2023
spot_imgspot_img
spot_imgspot_img

ಚಂದನವನದ ನಟ ಮಯೂರ್ ಪಟೇಲ್ ಗೆ ಜೀವ ಬೆದರಿಕೆ

- Advertisement -G L Acharya panikkar
- Advertisement -

ಬೆಂಗಳೂರು: ಚಂದನವನದ ನಟ ಮಯೂರ್ ಪಟೇಲ್ ಗೆ ಜೀವ ಬೆದರಿಕೆ ಹಾಕಲಾಗಿದೆ. ಸೈಟ್ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ಈ ಬೆದರಿಕೆ ಹಾಕಲಾಗಿದೆ. ಸುಬ್ರಹ್ಮಣ್ಯಂ ಎಂಬವರಿಂದ ಮಯೂರ್ ಅವರು ಬೆಂಗಳೂರು ಹೊರವಲಯ ಬೇಗೂರು ಬಳಿಯ ಪರಂಗಿಪಾಳ್ಯದಲ್ಲಿ ಸೈಟ್ ಖರೀದಿಗೆ ಮುಂದಾಗಿದ್ದರು.


ಜನವರಿ 22 ರಂದು ಗೆಳೆಯನೊಂದಿಗೆ ಮಯೂರ್ ಸೈಟ್ ನೋಡಲು ಹೋಗಿದ್ದರು. ಆಗ ಮಯೂರ್ ಕರಾರು ಮಾಡಿಕೊಂಡಿದ್ದ ಸೈಟ್‍ನಲ್ಲಿ ಕಾಂಪೌಂಡ್ ಇತ್ತು. ಈ ಸೈಟ್ ಅನಂತರಾಮರೆಡ್ಡಿ ಹಾಗೂ ಗನ್ ಮಂಜಣ್ಣ ಎಂಬವರಿಗೆ ಸೇರಿದ್ದಾಗಿದ್ದು, ನೀವು ಇಲ್ಲಿಗೆ ಬಂದರೆ ಸುಮ್ಮನೇ ಬಿಡುವುದಿಲ್ಲ ಅಂತ ಮಯೂರ್‍ಗೆ ಆವಾಜ್ ಹಾಕಿದ್ದಾರೆ.


ಇತ್ತ ಅನಂತರಾಮರೆಡ್ಡಿಯನ್ನು ಸಂಪರ್ಕಿಸಿರೋ ಮಯೂರ್, ಆ ಜಾಗವನ್ನ ನನ್ನ ಮಗನ ಹೆಸರಿಗೆ ದಾನ ಪತ್ರ ಮಾಡಿಕೊಟ್ಟಿದ್ದೇನೆ. ಅಲ್ಲಿಗೆ ಯಾರನ್ನು ಕೂಡ ಬರಲು ಬಿಡಲ್ಲ. ನೀನು ಆ ಜಾಗಕ್ಕೆ ಬಾ ಆಮೇಲೆ ನಾವು ಯಾರು ಎಂದು ಗೊತ್ತಾಗುತ್ತದೆ ಎಂದು ಅನಂತರಾಮರೆಡ್ಡಿ, ಮಯೂರ್ ಪಟೇಲ್ ಗೆ ಅವಾಜ್ ಹಾಕಿ ಜೀವಬೆದರಿಕೆ ಒಡ್ಡಿದ್ದಾರೆ.


ನಾನು ಅಗ್ರಿಮೆಂಟ್ ಹಾಕಿಕೊಂಡಿರೋ ಸೈಟಿಗೆ ಅಕ್ರಮವಾಗಿ ಕಂಪೌಂಡ್ ನಿರ್ಮಿಸಿದ್ದಾರೆ. ನಕಲಿ ದಾಖಲಾತಿಗಳನ್ನ ಸೃಷ್ಟಿಸಿಕೊಂಡು ಅನಂತರಾಮರೆಡ್ಡಿ ನಿಜ ದಾಖಲಾತಿ ಅಂತ ಬೆದರಿಕೆ ಹಾಕ್ತಿದ್ದಾರೆ ಎಂದು ಮಯೂರ್ ದೂರಿದ್ದಾರೆ. ಅಲ್ಲದೆ ಅನಂತರಾಮರೆಡ್ಡಿ, ಆತನ ಮಗ ಮಂಜುನಾಥ್ ರೆಡ್ಡಿ ಹಾಗೂ ನಾಲ್ವರ ವಿರುದ್ಧ ಹೆಚ್.ಎಸ್.ಆರ್ ಲೇಔಟ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

- Advertisement -

Related news

error: Content is protected !!