Tuesday, June 16, 2026
spot_imgspot_img
spot_imgspot_img

ಮಂಗಳೂರು: ಎಂಡಿಎಂಎ ಮಾದಕವಸ್ತು ಸಾಗಾಟ; ಮೂವರು ಅರೆಸ್ಟ್…!

- Advertisement -
- Advertisement -

ಮಂಗಳೂರು: ಸಾರ್ವಜನಿಕರಿಗೆ ಮಾದಕವಸ್ತು ಎಂಡಿಎಂಎ ಕ್ರಿಸ್ಟಲ್‌ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದ ಮೇಲೆ ಮೂವರನ್ನು ಬಜಪೆ ಪೊಲೀಸರು ಬಂಧಿಸಿ ಆರೋಪಿಗಳಿಂದ 30 ಸಾವಿರ ರೂ. ಮೌಲ್ಯದ 6.27 ಗ್ರಾಂ ಎಂಡಿಎಂಎ ಕ್ರಿಸ್ಟಲ್‌, ಒಂದು ಬೈಕ್‌ ಮತ್ತು ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಹೊಸಬೆಟ್ಟುವಿನ ಅಣ್ಣಪ್ಪಸ್ವಾಮಿ ಯಾನೆ ಮನು (23), ಮಂಜೇಶ್ವರದ ಮೊಹಮ್ಮದ್ ಜುನೈದ್ ಯಾನೆ ಜುನ್ನಿ (29) ಮತ್ತು ಕುಳಾಯಿಯ ಎಂ.ಕೆ. ಆಕಾಶ ಯಾನೆ ಮಾದವ ಕೌಶಲ್ಯ ಆಕಾಶ (24) ಬಂಧಿತರು. ಅವರನ್ನು ವಿಚಾರಣೆ ನಡೆಸಿದಾಗ ಮಾದಕವಸ್ತು ಎಂಡಿಎಂಎ ಕ್ರಿಸ್ಟಲ್ ಅನ್ನು ಗಿರಾಕಿಗಳಿಗೆ ಮಾರಾಟ ಮಾಡಲು ಹೋಗುತ್ತಿರುವುದಾಗಿ ತಿಳಿಸಿದ್ದಾರೆ. ಆರೋಪಿಗಳಿಂದ 30 ಸಾವಿರ ರೂ. ಮೌಲ್ಯದ 6.27 ಗ್ರಾಂ ಎಂಡಿಎಂಎ ಕ್ರಿಸ್ಟಲ್, ಬೈಕ್ ಮತ್ತು ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

- Advertisement -

Related news

error: Content is protected !!