- Advertisement -
- Advertisement -
ವರದಿ: ನ್ಯೂಸ್ ಡೆಸ್ಕ್, ವಿ ಟಿವಿ
ಔಷಧಿ ಖರೀದಿ ಮಾಡಿದ ಗ್ರಾಹಕರ ಮಾಹಿತಿ ನೀಡದ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಸುಮಾರು 110 ಮೆಡಿಕಲ್ ಶಾಪ್ ಗಳ ಲೈಸನ್ಸ್ ರದ್ದು ಮಾಡಲಾಗಿದೆ. ರಾಜ್ಯ ಔಷಧ ನಿಯಂತ್ರಣ ಇಲಾಖೆ 110 ಮೆಡಿಕಲ್ ಶಾಪ್ ಗಳ ಲೈಸನ್ಸ್ ರದ್ದು ಮಾಡಿ ಆದೇಶ ಹೊರಡಿಸಿದೆ.ಕೊರೊನಾ ಭೀತಿ ತಡೆಗಟ್ಟುವ ಹಿನ್ನಲೆಯಲ್ಲಿ ರಾಜ್ಯ ಔಷಧ ನಿಯಂತ್ರಣ ಇಲಾಖೆ, ಎಲ್ಲ ಮೆಡಿಕಲ್ ಶಾಪ್ ಗಳಲ್ಲಿ ಮಾಹಿತಿ ಕೇಳಿತ್ತು. ಕೆಮ್ಮು, ನೆಗಡಿ, ಜ್ವರಕ್ಕೆ ಸಂಬಂಧಿಸಿ ಔಷಧಿ ಖರೀದಿಸಿದವರ ವಿವರ ನೀಡಿ ಎಂದು ಇಲಾಖೆ ಸೂಚನೆ ನೀಡಿತ್ತು. ಆದರೆ ಇಲಾಖೆಯ ಆದೇಶಕ್ಕೆ ಉತ್ತರ ನೀಡದ ರಾಜ್ಯದ 110 ಮೆಡಿಕಲ್ ಶಾಪ್ ಗಳ ಲೈಸನ್ಸ್ ರದ್ದು ಮಾಡಲಾಗಿದೆ.

ಹೀಗಾಗಿ ಕಲಬುರಗಿ 70, ಬೆಂಗಳೂರು 3, ಬೀದರ್ 4, ಮೈಸೂರು 4, ವಿಜಯಪುರ 15, ರಾಯಚೂರು 9 ಹಾಗೂ ಬಾಗಲಕೋಟೆಯ 5 ಮೆಡಿಕಲ್ ಶಾಪ್ ಗಳ ಲೈಸನ್ಸ್ ಅನ್ನು ರದ್ದು ಮಾಡಿ ಆದೇಶ ಹೊರಡಿಸಲಾಗಿದೆ.


- Advertisement -