- Advertisement -
- Advertisement -




ಮಂಗಳೂರು: ಮೆಡಿಕಲ್ ಶಾಪ್ ಮಾಲೀಕನ ಮೇಲೆ 11 ಮಂದಿಯ ತಂಡವೊದು ಹಲ್ಲೆ ನಡೆಸಿರುವ ಘಟನೆ ದೇರಳಕಟ್ಟೆಯಲ್ಲಿ ನಡೆದಿದೆ.
ಅಬ್ದುಲ್ ಜಲೀಲ್ ಹಲ್ಲೆಗೊಳಗಾದ ಮೆಡಿಕಲ್ ಶಾಪ್ ಮಾಲೀಕ ಎಂದು ತಿಳಿದು ಬಂದಿದೆ.
ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಯುವಕನೊಬ್ಬ ಇತ್ತೀಚೆಗೆ ಮಂಗಳೂರಿನ ಬಂದರ್ ಠಾಣಾ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದನು. ಈ ವಿಚಾರವಾಗಿ ಅಬ್ದುಲ್ ಜಲೀಲ್ ವಾಟ್ಸಾಪ್‌ನಲ್ಲಿ ವೈಯಕ್ತಿಕವಾಗಿ ಮೆಸೇಜ್ ಕಳುಹಿಸಿದ್ದನ್ನು ಆಕ್ಷೇಪಿಸಿ ಮೃತ ಯುವಕನ ಕಡೆಯವರು ಹಲ್ಲೆ ನಡೆಸಿದ್ದಾರೆನ್ನಲಾಗಿದೆ.
ಮೊದಲಿಗೆ ಮೃತ ಯುವಕನ ಕಡೆಯವರು ಜಲೀಲ್ ಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದು, ಈ ವೇಳೆ ಅಬ್ದುಲ್ ಜಲೀಲ್ ಕ್ಷಮೆ ಯಾಚಿಸಿದ್ದರು ಬಳಿಕ ಯುವಕನ ಕಡೆಯವರೆನ್ನಲಾದ 11 ಮಂದಿಯ ತಂಡ ಭಾನುವಾರ ಬೆಳಗ್ಗೆ ಮೂರು ಕಾರುಗಳಲ್ಲಿ ದೇರಳಕಟ್ಟೆಗೆ ಆಗಮಿಸಿ ಜಲೀಲ್‌ಗೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -








