Wednesday, May 8, 2024
spot_imgspot_img
spot_imgspot_img

ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ಮಹಾಸಭೆ

- Advertisement -G L Acharya panikkar
- Advertisement -

ವಿಟ್ಲ: ವಿಟ್ಲ ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘ ೨೦೧೯ ಮತ್ತು ೨೦೨೦ ನೇ ಸಾಲಿನಲ್ಲಿ ೪೫,೮೪, ೭೮,೬೩೪ ರೂ.ಗಳ ವ್ಯವಹಾರ ದಾಖಲಿಸಿ ೧೪,೨೬,೯೮೭ ರೂ. ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ

ಸಂಜೀವ ಪೂಜಾರಿ ಎನ್ ತಿಳಿಸಿದರು.

ಅವರು ಸೋಮವಾರ ವಿಟ್ಲದ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಮ್ಮ ಸಂಘ ೫ ವರ್ಷ ಪೂರ್ಣಗೊಳಿಸಿದ್ದು, ಸದಸ್ಯರ ಹಾಗೂ ಠೇವಣಿದಾರರ, ಮತ್ತು ಸಾಲಗಾರರ ಸಹಕಾರದಲ್ಲಿ ಸಂಘ ಉತ್ತಮ ಸಾಧನೆ ಮಾಡಿದೆ. ಪುಣಚ ಶಾಖೆ ಯಶಸ್ಸಿ ಒಂದು ವರ್ಷ ಪೂರ್ತಿಗೊಳಿಸಿದೆ. ಮುಂದಿನ ದಿನಗಳಲ್ಲಿ ಬೆಳ್ತಂಗಡಿ, ಬಂಟ್ವಾಳ ಹಾಗೂ ಪುತ್ತೂರು ತಾಲೂಕು ಕಾರ್ಯ ವ್ಯಾಪ್ತಿಯನ್ನು ಹೊಂದಿದ್ದು, ಕಾರ್ಯವ್ಯಾಪ್ತಿಯಲ್ಲಿ ಶಾಖೆ ತೆರೆಯುವ ಯೋಜನೆ ಹಾಕಿಕೊಂಡಿದೆ. ಮುಂದೆ ೮.೫೦ ಕೋಟಿ ಠೇವಣಿ ಸಂಗ್ರಹಿಸುವ, ೮.೨೫ ಕೋಟಿ ಸಾಲ ನೀಡುವ ಹಾಗೂ ಸ್ವಂತ ಕಟ್ಟಡ ಹೊಂದುವ ಗುರಿ ಹೊಂದಿದೆ ಎಂದು ಹೇಳಿದರು.

ಸಂಘದ ಉಪಾಧ್ಯಕ್ಷ ಬಾಬು ಕೆ.ವಿ, ನಿರ್ದೇಶಕರಾದ ಡಾ. ಗೀತಾಪ್ರಕಾಶ್, ರಮೇಶ್ ಕುಮಾರ್ ಪಿ, ರಾಘವ ಪೂಜಾರಿ, ಅಭಿಜಿತ್ ಜೆ, ಜಗದೀಶ ವಿ, ಸಂಜೀವ ಪೂಜಾರಿ ಎಂ, ರವಿ ಬಿ.ಕೆ, ಶ್ರೀಧರ್ ಬಿ, ಮಾಧವ ಪೂಜಾರಿ, ವನಿತಾ ಚಂದ್ರಹಾಸ್, ಪುಷ್ಪ ಸುಂದರ ಪೂಜಾರಿ ಉಪಸ್ಥಿತರಿದ್ದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಂತ್ ವರದಿ ಮಂಡಿಸಿದರು. ಸರಿತಾ ರೂಪಾರಾಜ್ ನಿರೂಪಿಸಿದರು. ಬಾಬು ಕೆ.ವಿ ವಂದಿಸಿದರು.

- Advertisement -

Related news

error: Content is protected !!