Friday, April 26, 2024
spot_imgspot_img
spot_imgspot_img

ಡಾರ್ಲಿಂಗ್​ ಕೃಷ್ಣ ಜೊತೆಗೆ ನಾಯಕಿಯಾಗಿ ಮಿಂಚಲಿದ್ದಾರೆ ‘ಜೊತೆ ಜೊತೆಯಲಿ’ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ

- Advertisement -G L Acharya panikkar
- Advertisement -

‘ಜೊತೆ ಜೊತೆಯಲಿ’ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ ಇತ್ತೀಚೆಗಷ್ಟೇ ‘ತ್ರಿಬಲ್​ ರೈಡಿಂಗ್​’ ಶೂಟಿಂಗ್​ ಪೂರ್ಣಗೊಳಿಸಿದ್ದರು. ಈ ವೇಳೆ ಮಾತನಾಡುವಾಗ ಹೊಸ ಸಿನಿಮಾ ಬಗ್ಗೆ ಶೀಘ್ರವೇ ಅಪ್​ಡೇಟ್​ ನೀಡುತ್ತೇನೆ ಎಂದಿದ್ದರು. ಇದೀಗ ಅವರ ಮುಂದಿನ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ. ಡಾರ್ಲಿಂಗ್​ ಕೃಷ್ಣ ಜತೆಗೆ ಮೇಘಾ ಶೆಟ್ಟಿ ನಟಿಸಲಿದ್ದಾರೆ.

‘ಜೊತೆ ಜೊತೆಯಲಿ’ ಧಾರಾವಾಹಿ ಮೇಘಾ ಶೆಟ್ಟಿ ಅವರು ಈಗ ಹಿರಿತೆರೆಯಲ್ಲೂ ಮಿಂಚೋಕೆ ರೆಡಿ ಆಗಿದ್ದಾರೆ. ‘ತ್ರಿಬಲ್​ ರೈಡಿಂಗ್​’ ಸಿನಿಮಾ ಶೂಟಿಂಗ್​ ಈಗಾಗಲೇ ಪೂರ್ಣಗೊಂಡಿದ್ದು, ಶೀಘ್ರವೇ ತೆರೆಗೆ ಬರುವ ನಿರೀಕ್ಷೆ ಇದೆ. ಹೀಗಿರುವಾಗಲೇ ಅವರು ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ.

‘ಲವ್​ ಮಾಕ್ಟೇಲ್​’ ಸಿನಿಮಾ ನಿರ್ದೇಶಿಸಿ, ನಟಿಸಿದ್ದ ಡಾರ್ಲಿಂಗ್​ ಕೃಷ್ಣ ಸ್ಯಾಂಡಲ್​ವುಡ್​ನ ಬೇಡಿಕೆಯ ನಟರಲ್ಲಿ ಒಬ್ಬರು. ಈಗ ಅವರು ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕೆ ಮೇಘಾ ಶೆಟ್ಟಿ ಹಾಗೂ ನಿಶ್ವಿಕಾ ನಾಯ್ಡು ನಾಯಕಿಯರು. ಸೆಪ್ಟೆಂಬರ್​ 27ರಂದು ದಕ್ಷ ಪೊಲೀಸ್​​ ಅಧಿಕಾರಿ ರವಿ ಡಿ. ಚೆನ್ನಣ್ಣನವರ್​ ಟೈಟಲ್​ ಲಾಂಚ್ ಮಾಡಲಿದ್ದಾರೆ.

ಪೊಲೀಸ್​ ಅಧಿಕಾರಿ ಕೈಯಲ್ಲಿ ಟೈಟಲ್​ ಲಾಂಚ್​ ಮಾಡಿಸುತ್ತಿರುವುದರಿಂದ ಸಿನಿಮಾ ಕಥೆ ಪೊಲೀಸ್​ ಕಥಾಹಂದರ ಹೊಂದಿರಲಿದೆಯೆ ಎನ್ನುವ ಕುತೂಹಲ ಮೂಡಿದೆ. ಸುಮಂತ್​ ಕ್ರಾಂತಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಶಿವ ತೇಜಸ್​ ಅವರು ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ರವಿ ವರ್ಮಾ ಅವರ ಆ್ಯಕ್ಷನ್​ ನಿರ್ದೇಶನ​ ಸಿನಿಮಾಗೆ ಇರಲಿದೆ.

‘ಸಿನಿಮಾ ಸೀರಿಯಲ್​ ಎರಡನ್ನೂ ನಾನು ನಿಭಾಯಿಸಿಕೊಂಡು ಹೋಗುತ್ತೇನೆ. ಧಾರಾವಾಹಿ ನನಗೆ ಲೈಫ್​ ಕೊಟ್ಟಿದೆ. ಅದರ ಜತೆಗಿನ ಒಡನಾಟ ಎಲ್ಲಕ್ಕಿಂತ ಹೆಚ್ಚು. ಹಾಗಾಗಿ ಎರಡನ್ನೂ ಬ್ಯಾಲೆನ್ಸ್​ ಮಾಡಿಕೊಂಡು ಹೋಗುತ್ತೇನೆ’ ಎಂದಿದ್ದರು ಮೇಘಾ ಶೆಟ್ಟಿ.

- Advertisement -

Related news

error: Content is protected !!