Monday, August 31, 2026
spot_imgspot_img
spot_imgspot_img

ಡಿಕೆ ದಾಟಲಿಲ್ಲ, ಮೇಕೆಯಾದರೂ ದಾಟಲಿ..! ಬಿಜೆಪಿ ಟೀಕೆ

- Advertisement -
- Advertisement -
vtv vitla
vtv vitla

ಬೆಂಗಳೂರು: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಇಂದು ಜನವರಿ 9ರಿಂದ ಹಮ್ಮಿಕೊಂಡಿರುವ ಪಾದಯಾತ್ರೆ ಆರಂಭದಲ್ಲಿ ಕನಕಪುರ ತಾಲ್ಲೂಕಿನ ಸಂಗಮದಲ್ಲಿ ಬೆಳ್ಳಂಬೆಳಗ್ಗೆಯೇ ಕಾವೇರಿ ನದಿಗೆ ತೆಪ್ಪದ ಮೂಲಕ ಸಾಗಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸ್ನಾನ ಮಾಡಿ ಪೂಜೆ ಸಲ್ಲಿಸಿದ್ದರು.

ಈ ಹೊತ್ತಿನಲ್ಲಿ ತೆಪ್ಪದಿಂದ ಇಳಿಯುವಾಗ ಜಾರಿದ ಡಿ ಕೆ ಶಿವಕುಮಾರ್ ಮೈ ವಾಲಿತ್ತು. ವಿಡಿಯೊ ಮಾಧ್ಯಮಗಳಲ್ಲಿ ಪ್ರಸಾರವಾದ ಕೂಡಲೇ ಅದನ್ನು ತನ್ನ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಹಾಕಿ ಬಿಜೆಪಿ ಪಕ್ಷ ಅಣಕವಾಡಿದೆ. ಡಿ ಕೆ ಶಿವಕುಮಾರ್ ದಾಟಲಿಲ್ಲ, ಮೇಕೆಯಾದರೂ ದಾಟಲಿ ಎಂದು ಅಣಕವಾಡಿದೆ. ಕಾಂಗ್ರೆಸ್ ಮಾಡುತ್ತಿರುವ ಮೇಕೆದಾಟು ಪಾದಯಾತ್ರೆ ಸುಳ್ಳಿನ ಜಾತ್ರೆ ಎಂದು ಕೂಡ ಬಿಜೆಪಿ ಟೀಕಿಸಿದೆ.

- Advertisement -

Related news

error: Content is protected !!