Friday, June 5, 2026
spot_imgspot_img
spot_imgspot_img

ಪತ್ನಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ; ವಿಷ ಕುಡಿಸಿ ಕೊಂದ ಪತಿರಾಯ

- Advertisement -
- Advertisement -

ಮದುವೆಯಾಗಿ 15 ವರ್ಷವಾದರೂ ಒಮ್ಮೆಯೂ ತವರು ಮನೆಗೆ ಕಳುಹಿಸದೆ ಗೃಹಿಣಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದಲ್ಲದೇ ಆಕೆಗೆ ವಿಷ ಕುಡಿಸಿ ಕೊಲೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.

ಕಲಬುರಗಿ ತಾಲೂಕಿನ ಬಬಲಾದ್ ಗ್ರಾಮದಲ್ಲಿ ಘಟನೆ ನಡೆದಿದ್ದು, ಲಾಲ್‌ಬಿ (35) ಮೃತಪಟ್ಟ ಮಹಿಳೆ. ಲಾಲ್‌ಬಿಯನ್ನು ಬಬಲಾದ್ ಗ್ರಾಮದ ಖಾಸೀಂ ಸಾಬ್ ಜೊತೆ ಮದುವೆ ಮಾಡಿ ಕೊಡಲಾಗಿತ್ತು. ಮದುವೆಯಾದಾಗಿನಿಂದ ಲಾಲ್‌ಬಿಗೆ ಗಂಡನ ಮನೆಯವರು ನಿರಂತರ ಕಿರುಕುಳ ನೀಡುತ್ತಿದ್ದರು. ಮಾತ್ರವಲ್ಲದೇ ಕಳೆದ 15 ವರ್ಷಗಳಲ್ಲಿ ಒಮ್ಮೆಯೂ ತವರು ಮನೆಗೆ ಕಳುಹಿಸದೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದರು ಎಂದು ಲಾಲ್‌ಬಿ ಕುಟುಂಬಸ್ಥರು ಆರೋಪಿಸಿದ್ದಾರೆ.

ಕಳೆದ ರಾತ್ರಿ ಲಾಲ್‌ಬಿಗೆ ಮನೆಯಲ್ಲಿ ಹಲ್ಲೆ ಮಾಡಿ ಜಮೀನಿಗೆ ಕಳುಹಿಸಿದ್ದರು. ಈ ವೇಳೆ ಖಾಸೀಂ ಸಾಬ್ ಜಮೀನಿನಲ್ಲಿ ಲಾಲ್‌ಬಿಗೆ ವಿಷ ಕುಡಿಸಿ ಕೊಲೆ ಮಾಡಿದ್ದಾನೆ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಬಗ್ಗೆ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!