- Advertisement -
- Advertisement -
ಬೆಂಗಳೂರು: ಲಾಕ್ ಡೌನ್ ನಿಂದಾಗಿ ಸಾರ್ವಜನಿಕ ಕೆಲ ಸೇವೆಗಳು ಸ್ಥಗಿತಗೊಂಡಿದೆ. ಅದರಲ್ಲಿ ದೀರ್ಘಕಾಲ ಸ್ಥಗಿತಗೊಂಡಿರುವ ಸೇವೆಗಳಲ್ಲಿ ಮೆಟ್ರೋ ಕೂಡ ಒಂದು. ಟ್ರಾಫಿಕ್ ಸಮಸ್ಯೆಯಿಂದ ಮುಕ್ತಿ ಪಡೆಯಲು ಹಾಗೂ ಅತೀ ವೇಗದ ಚಾಲನೆಗೆ ಸಿಲಿಕಾನ್ ಸಿಟಿಯಲ್ಲಿ ಜನರು ಹೆಚ್ಚಾಗಿ ಮೆಟ್ರೋ ಸೇವೆಯನ್ನು ಬಳಸುತ್ತಿದ್ದರು. ಆದರೆ ಕೊರೊನಾ ಸೋಂಕು ವ್ಯಾಪಾಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮೆಟ್ರೋ ಸಂಚಾರವನ್ನು ಬಿಎಂಆರ್ ಸಿಎಲ್ ಮೆಟ್ರೋ ಸಂಚಾರ ಸ್ಥಗಿತ ಮಾಡಿ 4 ತಿಂಗಳುಗಳೇ ಕಳೆದಿದೆ. ಆದ್ರೆ ಇದರಿಂದ ಕೋಟ್ಯಾಂತರ ರೂ.ನಷ್ಟವಾಗಿದೆ.

ಬಿಎಂಆರ್ ಸಿಎಲ್ ಗೆ 130 ಕೋಟಿ ರೂ.ನಷ್ಟ..!
ಕಳೆದ ಮಾರ್ಚ್ ನಿಂದ ಮೆಟ್ರೋ ಸೇವೆ ಸ್ಥಗಿತಗೊಂಡಿದ್ದರಿಂದ ಬಿಎಂಆರ್ ಸಿಎಲ್ ಗೆ 130 ಕೋಟಿ ರೂ. ನಷ್ಟವಾಗಿದೆ. ಇಲ್ಲದಿದ್ದರೆ ಪ್ರತಿ ತಿಂಗಳು ಸರಾಸರಿ 34 ಕೋಟಿ ಸಂಪಾದನೆ ಆಗುತ್ತಿತ್ತು. ಆದರೆ ಸಿಬ್ಬಂದಿಗೆ ಸಂಬಳ ನೀಡುತ್ತಿರುವುದು ನಷ್ಟದ ಲೆಕ್ಕಕ್ಕೆ ಸೇರಿದೆ. ಇಷ್ಟಾದರೂ ಯಾವಾಗ ಮೆಟ್ರೋ ಸೇವೆ ಆರಂಭವಾಗುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದಿಲ್ಲ.

- Advertisement -