Thursday, April 18, 2024
spot_imgspot_img
spot_imgspot_img

ದೇಶ ಕಾಯುವ ಯೋಧರಿಗಾಗಿ ಕಡಿಮೆ ತೂಕದ ಹಗುರವಾದ ಬುಲೆಟ್ ಪ್ರೂಫ್ ಜಾಕೆಟ್​ ಅಭಿವೃದ್ಧಿಪಡಿಸಿದ ಡಿಆರ್‌ಡಿಒ

- Advertisement -G L Acharya panikkar
- Advertisement -

ನವದೆಹಲಿ: ಹಗಲು-ರಾತ್ರಿ, ಚಳಿ, ಬಿಸಿಲು, ಗಾಳಿ ಮಳೆ ಎನ್ನದೆ ದೇಶ ಕಾಯೋ ಯೋಧರಿಗಾಗಿ ಲೈಟ್​​ ವೆಯ್ಟ್​ ಬುಲೆಟ್ ಪ್ರೂಫ್​ ಜಾಕೆಟ್​ಗಳು ಬರಲಿವೆ. ಆತ್ಮನಿರ್ಭರ್ ಯೋಜನೆಯಡಿ ಹಗುರ ಬುಲೆಟ್ ಪ್ರೂಫ್ ಜಾಕೆಟ್​ಗಳನ್ನ ತಯಾರಿಸಲಾಗಿದೆ.

ಮೊದಲು 10.4 ಕೆ.ಜಿ ಇರೋ ಬುಲೆಟ್ ಪ್ರೂಫ್ ಜಾಕೆಟ್​ಗಳನ್ನ ಯೋಧರಿಗೆ ಕೊಡಲಾಗ್ತಿತ್ತು. ಇದೀಗ 9 ಕೆ.ಜಿ ತೂಕದ ಬುಲೆಟ್ ಪ್ರೂಫ್ ಜಾಕೆಟ್​ಗಳನ್ನ ತಯಾರಿಸಲಾಗಿದೆ. ಕಾನ್​ಪುರ್​ನಲ್ಲಿರೋ ಡಿಆರ್‌ಡಿಒ ಲ್ಯಾಬ್ ಡಿಎಂಎಸ್ಆರ್ ಡಿಇ ನಲ್ಲಿ ಈ ಬುಲೆಟ್ ಪ್ರೂಫ್ ಜಾಕೆಟ್‍ಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಈ ಫ್ರಂಟ್​ ಹಾರ್ಡ್​ ಆರ್ಮರ್​ ಪ್ಯಾನೆಲ್​ ಜಾಕೆಟನ್ನು ಚಂಡೀಘಡದ ಟಿಬಿಆರ್​​ಎಲ್​​ನಲ್ಲಿ ಪರೀಕ್ಷಿಸಲಾಗಿದ್ದು, ಯಶಸ್ವಿಯಾಗಿದೆ. ಬಿಐಎಸ್​ ಮಾನದಂಡಗಳಿಗೆ ಈ ಜಾಕೆಟ್​​ ಅನುಗುಣವಾಗಿದೆ ಎಂದು ಡಿಆರ್​​ಡಿಓ ಮಾಹಿತಿ ನೀಡಿದೆ.

ಹಗುರವಾದ ಗುಂಡು ನಿರೋಧಕ ಜಾಕೆಟ್ ತಯಾರಿಸುವ ಮೂಲಕ ಸೈನಿಕರಿಗೆ ಹೆಚ್ಚು ಅನುಕೂಲ ಮಾಡಿಕೊಟ್ಟ ಡಿಆರ್‌ಡಿಓ ವಿಜ್ಞಾನಿಗಳನ್ನ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶ್ಲಾಘಿಸಿದ್ದಾರೆ.

- Advertisement -

Related news

error: Content is protected !!