Wednesday, April 24, 2024
spot_imgspot_img
spot_imgspot_img

ಬಾಲಸೋರ್ ನಲ್ಲಿ “ಶೌರ್ಯ”ನ ಪ್ರಯೋಗ ಯಶಸ್ವಿ

- Advertisement -G L Acharya panikkar
- Advertisement -

ಒಡಿಶಾ : ಚೀನಾ ಮತ್ತು ಭಾರತದ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾರತ ತನ್ನ ಮೊಟ್ಟಮೊದಲ ಬಳಕೆ ಪ್ರಯೋಗ ದೇಸೀ ನಿರ್ಮಿತ ಶಬ್ದಾತೀತ ಪರಮಾಣು ಸಾಮರ್ಥ್ಯದ ಕ್ಷಿಪಣಿ ಶೌರ್ಯವನ್ನು ಶನಿವಾರ ಒಡಿಶಾ ತೀರದಿಂದ ಉಡಾಯಿಸಿದೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ ಡಿಒ) ಅಭಿವೃದ್ಧಿಪಡಿಸಿರುವ ಈ ಉಡಾವಣಾ ಕ್ಷಿಪಣಿ, ಡಮ್ಮಿ ಪೇಲೋಡ್‌ನೊಂದಿಗೆ ಭೂ-ಆಧಾರಿತ ಮೂಲದಿಂದ ಪೂರ್ಣ ಕಾರ್ಯಾಚರಣೆಯ ಸಂರಚನೆಯಲ್ಲಿ ಪರೀಕ್ಷೆ ನಡೆಸಲಾಗುತ್ತಿದ್ದು ಬಳಕೆದಾರ ಸರಣಿಯಲ್ಲಿ ಮೊದಲ ಪ್ರಯೋಗವಾಗಿದೆ.
ಜಲಾಂತರ್ಗಾಮಿ ಉಡಾವಣೆಯ ಬ್ಯಾಲಿಸ್ಟಿಕ್ ಕ್ಷಿಪಣಿ (ಎಸ್‌ಎಲ್‌ಬಿಎಂ) ಕೆ -15,ಅದರ ಅಭಿವೃದ್ಧಿ ಪ್ರಯೋಗವನ್ನು 2011ರಲ್ಲಿ ಪೂರ್ಣಗೊಳಿಸಿತ್ತು. ಇದೀಗ ಉಡಾವಣೆ ಯಶಸ್ವಿಯಾಗಿದೆ.

ಶೌರ್ಯ ಕ್ಷಿಪಣಿ ಹಲವು ವಿಶಿಷ್ಟ ಸಾಮರ್ಥ್ಯಗಳನ್ನು ಹೊಂದಿದೆ. ಇದನ್ನು ಶತ್ರುಗಳ ಕಣ್ಗಾವಲಿನಿಂದ ಭೂಗತವಾಗಿ ಕಾಣಿಸದಂತೆ ಇರಿಸಬಹುದು ಮತ್ತು ಅದನ್ನು ಹಾರಿಸುವವರೆಗೂ ಶತ್ರುಗಳಿಗೆ ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ. ಶೌರ್ಯ ಕ್ಷಿಪಣಿಯ ತೂಕ ಕಡಿಮೆಯಿದ್ದು ಸುಲಭವಾಗಿ ಸಾಗಿಸಬಹುದು. ಸ್ಯಾಟಲೈಟ್ ಚಿತ್ರಣದಿಂದ ಇದನ್ನು ಕಂಡುಹಿಡಿಯಲಾಗುವುದಿಲ್ಲ, ಕ್ಷಿಪಣಿಯನ್ನು ಭೂಮಿ ಮತ್ತು ನೀರೊಳಗಿನ ಜಲಾಂತರ್ಗಾಮಿ ಉಡಾವಣಾ ವಾಹನಗಳಿಂದ ಹಾರಿಸಬಹುದು ಎಂಬುವುದು ವಿಜ್ಞಾನಿಗಳ ಅಂಬೋಣ. ಶೌರ್ಯ ಕ್ಷಿಪಣಿ ಭಾರತೀಯ ಸೈನಿಕರ ಮನೋಬಲ ಮತ್ತು ಶೌರ್ಯವನ್ನು ಹೆಚ್ಚಿಸುವುದರಲ್ಲಿ ಎರಡು ಮಾತಿಲ್ಲ.

- Advertisement -

Related news

error: Content is protected !!