Tuesday, June 16, 2026
spot_imgspot_img
spot_imgspot_img

ಬೆಳ್ತಂಗಡಿ: ಕೊಯ್ಯೂರಿನ ಯುವತಿ ನಾಪತ್ತೆ- ಮಾಹಿತಿ ಲಭ್ಯವಾದಲ್ಲಿ ಪೊಲೀಸ್ ಠಾಣೆಗೆ ತಿಳಿಸುವಂತೆ ಮನವಿ

- Advertisement -
- Advertisement -

ಬೆಳ್ತಂಗಡಿಯ ಕೊಯ್ಯುರು ಮಲೆಬೆಟ್ಟು ನಿವಾಸಿ ರಝೀನ(24) ಎಂಬವರು ನಾಪತ್ತೆಯಾಗಿದ್ದು, ಬಿ.ಸಿ.ರೋಡಿನ ಕಾರಿಂಜದ ಮಹಮ್ಮದ್ ಸಲೀಂ ಎಂಬವರ ಪತ್ನಿಯಾದ ರಝೀನರ 2ವರ್ಷದ ಮಗ 40 ದಿನಗಳ ಹಿಂದೆ ಸಾವನ್ನಪ್ಪಿದ್ದರು. ಬಳಿಕ ಕೊಯ್ಯರಿನ ತಾಯಿ ಮನೆಯಲ್ಲಿದ್ದ ರಝೀನ 22-06-2025ರಂದು ಸಂಜೆ 4.00ಗಂಟೆಗೆ ಗಂಡನ ಮನೆಗೆ ಹೋಗುತ್ತೇನೆಂದು ಹೇಳಿ ಹೋಗಿದ್ದು, ಗಂಡನ ಮನೆಗೆ ಹೋಗದಿರುವುದರಿಂದ ಸಂಬಂಧಿಕರು,ಸ್ನೇಹಿತರ ಮನೆಯಲ್ಲಿ ಹುಡುಕಾಡಿದರೂ ಎಲ್ಲೂ ಪತ್ತೆಯಾಗಿಲ್ಲ. ಈ ಹಿನ್ನಲೆಯಲ್ಲಿ ರಝೀನ ಮನೆಯವರು ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದರಿಂದಾಗಿ ರಝೀನ ಕಾಣೆಯಾಗಿದ್ದಾರೆಂದು ಪೊಲೀಸ್‌ ಪ್ರಕಟಣೆ ಹೊರಡಿಸಿದ್ದು, ದುಂಡುಮುಖ,ಅಗಲ ಹಣೆ, ತಲೆಯಲ್ಲಿ ಕಪ್ಪು ಕೂದಲು,ಸಾಧಾರಣ ಮೈಕಟ್ಟು, ಗೋದಿ ಮೈಬಣ್ಣ, ಅಂದಾಜು 4.9ಅಡಿ ಎತ್ತರ, ಬುರ್ಖಾ ಧರಿಸಿದ್ದು ಕಪ್ಪು ಬಣ್ಣದ ಸ್ಕ್ಯಾಪ್ ಧರಿಸಿದ್ದಾರೆ. ಕನ್ನಡ,ತುಳು, ಬ್ಯಾರಿ ಭಾಷೆ ಬಲ್ಲವರಾಗಿದ್ದಾರೆ. ಇವರ ಚಹರೆ ಗುರುತು ಪತ್ತೆಯಾದರೆ ಬೆಳ್ತಂಗಡಿ ಪೊಲೀಸ್‌ ಠಾಣೆಗೆ ತಿಳಿಸಲು ಕೋರಲಾಗಿದೆ. ಬೆಳ್ತಂಗಡಿ ಪೊಲೀಸ್ ಠಾಣೆ 08256-232093, ಪಿಐ ಬೆಳ್ತಂಗಡಿ ಪೊಲೀಸ್ ಠಾಣೆ 9480805370, ಪಿಎಸ್‌ಐ ಬೆಳ್ತಂಗಡಿ ಪೊಲೀಸ್ ಠಾಣೆ-8277986367, ಕಂಟ್ರೋಲ್ ರೂಂ ದ.ಕ.ಜಿಲ್ಲೆ 9480805300 ನಂಬ‌ರ್ ಗೆ ಸಂಪರ್ಕಿಸಲು ಕೋರಲಾಗಿದೆ.

- Advertisement -

Related news

error: Content is protected !!