ಮಿತ್ತೂರು: ಶ್ರೀ ಆದಿಪರಾಶಕ್ತಿ ಲಕ್ಷ್ಮೀನರಸಿಂಹ ದೇವಸ್ಥಾನ ಬೀಡಿನಮಜಲು- ಮಿತ್ತೂರು , ಇಡ್ಕಿದು, ನವರಾತ್ರಿ ಉತ್ಸವ ಮತ್ತು ಶತ ಚಂಡಿಕಾಯಾಗವು ಅ. 03ನೇ ಗುರುವಾರದಿಂದ 12ನೇ ಶನಿವಾರದ ವರೆಗೆ ಶ್ರೀ ಆದಿಪರಾಶಕ್ತಿ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ನಡೆಯಲಿದೆ.
ದಿನಾಂಕ 03-10-2024ನೇ ಗುರುವಾರದಂದು ಬೆಳಿಗ್ಗೆ 5.30 ಗಂಟೆಗೆ 12 ಕಾಯಿ ಗಣಪತಿ ಹವನ ನಡೆದ ಬಳಿಕ 6.10 ಕ್ಕೆ ಪಂಚಾಂಮೃತಾಭಿಷೇಕ, ನವಕ ಕಲಶಾಭಿಷೇಕ ನಡೆಯಲಿದೆ. ನಂತರ 8.00 ಕ್ಕೆ ವಾಂಛಾಕಲ್ಪಲತಾ ಮಹಾಗಣಪತಿ ಹವನ ಮತ್ತು ಆದಿಪರಾಶಕ್ತಿ ಕಲ್ಪೋಕ್ತ ಆವರಣ ಪೂಜೆಯೊಂದಿಗೆ ಮಹಾಯಾಗ ಪ್ರಾರಂಭವಾಗಲಿದೆ. 8.30ಕ್ಕೆ ಬೆಳಗ್ಗಿನ ಪೂಜೆ ನಡೆದು 9.00ಕ್ಕೆ ಉಗ್ರಾಣ ಮುಹೂರ್ತ ನಡೆಯಲಿದೆ. ಬಳಿಕ ಮಧ್ಯಾಹ್ನ 12.30ಕ್ಕೆ ಮಹಾ ಪೂಜೆ, ಪ್ರಸಾದ, ಪ್ರಸಾದ ಭೋಜನ ನಡೆಯಲಿದೆ. ಸಂಜೆ 4:00ರಿಂದ ಆದಿಪರಾಶಕ್ತಿ ಮಹಾಯಾಗ ನಡೆದು, 4.30 ರಿಂದ ಶ್ರೀ ದುರ್ಗಾ ಉಳ್ಳಾಲ್ತಿ ಮಲರಾಯ ಪ್ರತಿಷ್ಠಾನ ಬೊಳ್ವಾರು ಪುತ್ತೂರು ಇವರಿಂದ ದಕ್ಷಯಜ್ಞ ಎಂಬ ತಾಳಮದ್ದಳೆ – ಪ್ರಸಂಗ ನಡೆಯಲಿದೆ. ರಾತ್ರಿ 7.00 ರಿಂದ ಶ್ರೀ ಮಹಾದೇವಿ ಭಜನಾ ಸಮಿತಿ ಏಮಾಜೆ ಇವರಿಂದ ಭಜನಾ ಸೇವೆ ನಡೆಯಲಿದೆ. ತದನಂತರ 8.00ಕ್ಕೆ ಮಹಾಪೂಜೆ, ಅಷ್ಟಾವಧಾನ ಸೇವೆ, ಮಹಾ ಮಂಗಳಾರತಿ, ಪ್ರಸಾದ ಭೋಜನ ನಡೆಯಲಿದೆ.
ದಿನಾಂಕ 04-10-2024ನೇ ಶುಕ್ರವಾರದಂದು ಬೆಳಿಗ್ಗೆ ಗಂಟೆ 8.00ಕ್ಕೆ ಶ್ರೀ ಆದಿಪರಾಶಕ್ತಿ ಮಹಾಯಾಗ ನಡೆದು, 8.30ಕ್ಕೆ ಬೆಳಗ್ಗಿನ ಪೂಜೆ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮಹಾ ಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಲಿದೆ. ಅಪರಾಹ್ನ 3.30 ರಿಂದ ಜಿಲ್ಲೆಯ ಪ್ರಸಿದ್ದ ಕಲಾವಿದರ ಕೂಡುವಿಕೆಯಿಂದ ಭರತಾಗಮನ ಯಕ್ಷಗಾನ ತಾಳಮದ್ದಳೆ ಪ್ರಸಂಗ ನಡೆಯಲಿದೆ. ಸಂಜೆ ಗಂಟೆ 4.00ಕ್ಕೆ ಆದಿಪರಾಶಕ್ತಿ ಮಹಾಯಾಗ ನಡೆದ ಬಳಿಕ 6.30ಕ್ಕೆ ಪೂರ್ಣಾಹುತಿ ನಡೆಯಲಿದೆ. ರಾತ್ರಿ 7.00 ರಿಂದ ಶ್ರೀ ಆದಿಪರಾಶಕ್ತಿ ಸೇವಾ ಸಮಿತಿ ಬೀಡಿನಮಜಲು ಇವರಿಂದ ಭಜನಾ ಸೇವೆ ನಡೆಯಲಿದೆ. ನಂತರ 8.00ಕ್ಕೆ ಮಹಾಪೂಜೆ, ಅಷ್ಟಾವಧಾನ ಸೇವೆ, ಪ್ರಸಾದ ಭೋಜನ ನಡೆಯಲಿದೆ.
ದಿನಾಂಕ 05-10-2024ನೇ ಶನಿವಾರದಂದು ಬೆಳಿಗ್ಗೆ ಗಂಟೆ 8.30ಕ್ಕೆ ಬೆಳಗ್ಗಿನ ಪೂಜೆ ನಡೆದು, 9.00ಕ್ಕೆ ಲಕ್ಷ್ಮೀ ನರಸಿಂಹ ದೇವರಿಗೆ ಕಲ್ಪೋಕ್ತ ಪೂಜೆ ನಡೆಯಲಿದೆ. 10:30 ಗಂಟೆಗೆ ಸಪ್ತಶತೀ ಪಾರಾಯಣ ನಡೆದ ಬಳಿಕ ಮಧ್ಯಾಹ್ನ 12.30ಕ್ಕೆ ಮಹಾ ಪೂಜೆ, ಪ್ರಸಾದ, ಪ್ರಸಾದ ಭೋಜನ ನಡೆಯಲಿದೆ. ರಾತ್ರಿ 7.00ರಿಂದ ಜಯದುರ್ಗಾಪರಮೇಶ್ವರಿ ಭಜನಾ ಸಮಿತಿ ಧರ್ಮನಗರ ಇವರಿಂದ ಭಜನಾ ಸೇವೆ ನಡೆಯಲಿದೆ. ನಂತರ 8:00 ಶ್ರೀ ದೇವಿಗೆ ರಂಗಪೂಜೆ ಅಷ್ಟಾವಧಾನ ಸೇವೆ, ಪ್ರಸಾದ ಭೋಜನ ನಡೆದ ಬಳಿಕ 9:00ಕ್ಕೆ ಶ್ರೀ ಸ್ವಾಮಿ ಕೊರಗಜ್ಜ ಕೃಪಾಪೋಷಿತ ಯಕ್ಷಗಾನ ಮಂಡಳಿ, ಶ್ರೀ ಕ್ಷೇತ್ರ ಕುಪ್ಪೆದ ಪದವು, ಕಲ್ಲಾಡಿ. ಇವರಿಂದ ಬೊಳ್ಳಿಮಲೆತ ಬೊಲ್ಪು ಖ್ಯಾತಿಯ ಜನಾರ್ಧನ ಕುಪ್ಪೆಪದವು ವಿರಚಿತ ಎಲ್.ಕೆ. ಧರಣ್ ಮಾಣಿ ಪದ್ಯರಚನೆಯ ‘ರತ್ನ ಗದ್ದಿಗೆ’ ಎಂಬ ನೂತನ ಯಕ್ಷಗಾನ ಪ್ರಸಂಗ ನಡೆಯಲಿದೆ.
ದಿನಾಂಕ 06-10-2024ನೇ ಆದಿತ್ಯವಾರದಂದು ಬೆಳಿಗ್ಗೆ ಗಂಟೆ 8.30ಕ್ಕೆ ಬೆಳಗ್ಗಿನ ಪೂಜೆ ನಡೆದು 9.30ಕ್ಕೆ ಸಪ್ತಶತೀ ಪಾರಾಯಣ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮಹಾ ಪೂಜೆ, ಪ್ರಸಾದ, ಪ್ರಸಾದ ಭೋಜನ ನಡೆಯಲಿದೆ. ಸಂಜೆ 4.30ಕ್ಕೆ ಶ್ರೀ ಲಲಿತೋಪಾಖ್ಯಾನ ಪಾರಾಯಣ ನಡೆದ ನಂತರ 6.45 ರಿಂದ ಶ್ರೀ ಆದಿಪರಾಶಕ್ತಿಗೆ ಕಲ್ಪೋಕ್ತ ಪೂಜೆ, ಸಹಸ್ರನಾಮಾರ್ಚನೆ ನಡೆಯಲಿದೆ. ರಾತ್ರಿ ಗಂಟೆ 7.00 ರಿಂದ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಮಾಣಿ ತಂಡದವರಿಂದ ಭಜನಾ ಸೇವೆ ನಡೆಯಲಿದೆ. 8.00ಕ್ಕೆ ಮಹಾಪೂಜೆ. ಅಷ್ಟಾವಧಾನ ಸೇವೆ. ಪ್ರಸಾದ ಭೋಜನ ನಡೆದ ಬಳಿಕ, 9:00ಕ್ಕೆ ವರ್ಣಕುಟೀರ ಕಲಾತಂಡ ಪುತ್ತೂರು ಇವರಿಂದ ಭಕ್ತಿ – ಭಾವ -ಲಹರಿ ಎಂಬ ಕಾರ್ಯಕ್ರಮ ನಡೆಯಲಿದೆ.
ದಿನಾಂಕ 07-10-2024ನೇ ಸೋಮವಾರದಂದು ಬೆಳಿಗ್ಗೆ ಗಂಟೆ 8.30ಕ್ಕೆ ಬೆಳಗ್ಗಿನ ಪೂಜೆ ಆದ ಬಳಿಕ 9.30ಕ್ಕೆ ಸಪ್ತಶತೀ ಪಾರಾಯಣ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮಹಾ ಪೂಜೆ, ಪ್ರಸಾದ, ಪ್ರಸಾದ ಭೋಜನ ನಡೆಯಲಿದೆ. ಸಂಜೆ 4.00ರಿಂದ ಶ್ರೀ ಚಕ್ರಪೂಜೆ ನಡೆದ ಬಳಿಕ ರಾತ್ರಿ 7.00 ರಿಂದ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಭಜನಾ ಸಮಿತಿ ಕೋಲ್ಪೆ ಇವರಿಂದ ಭಜನಾ ಸೇವೆ ನಡೆಯಲಿದೆ. ರಾತ್ರಿ 8.00ಕ್ಕೆ ಮಹಾಪೂಜೆ, ಅಷ್ಟಾವಧಾನ ಸೇವೆ, ಪ್ರಸಾದ ಭೋಜನ ನಡೆದ ನಂತರ 9:00ಕ್ಕೆ ಸ್ಥಳೀಯ ಪ್ರತಿಭೆಗಳಿಂದ ವಿವಿಧ ಮನರಂಜನಾ ಕಾರ್ಯಕ್ರಮ ನಡೆಯಲಿದೆ.
ದಿನಾಂಕ 08-10-2024ನೇ ಮಂಗಳವಾರದಂದು ಬೆಳಿಗ್ಗೆ 8.30ಕ್ಕೆ ಬೆಳಗ್ಗಿನ ಪೂಜೆ ನಡೆಯಲಿದೆ. ಬಳಿಕ 9.30ಕ್ಕೆ ಸಪ್ತಶತೀ ಪಾರಾಯಣ ನಡೆದು, ಮಧ್ಯಾಹ್ನ 12.30ಕ್ಕೆ ಮಹಾ ಪೂಜೆ, ಪ್ರಸಾದ, ಪ್ರಸಾದ ಭೋಜನ ನಡೆಯಲಿದೆ. ಸಂಜೆ 5.30ಕ್ಕೆ ದುರ್ಗಾನಮಸ್ಕಾರ ಪೂಜೆ ನಡೆದ ನಂತರ ರಾತ್ರಿ 7.00 ರಿಂದ ಸೀತಾರಾಮಾಂಜನೇಯ ಭಜನಾ ಸಮಿತಿ ರಾಮನಗರ ಇವರಿಂದ ಭಜನಾ ಸೇವೆ ನಡೆಯಲಿದೆ. ರಾತ್ರಿ 8.00 ಕ್ಕೆ ಮಹಾಪೂಜೆ, ಅಷ್ಟಾವಧಾನ ಸೇವೆ, ಪ್ರಸಾದ ಭೋಜನ ನಡೆಯಲಿದೆ.
ದಿನಾಂಕ 09-10-2024ನೇ ಬುಧವಾರದಂದು ಬೆಳಿಗ್ಗೆ ಗಂಟೆ 7 ರಿಂದ ಶತಚಂಡಿಕಾಯಾಗದ ಮಹಾಸಂಕಲ್ಪ, ಯಾಗಶಾಲಾ ಪೂಜೆ, ಕಲಶಪ್ರತಿಷ್ಠೆ, ಕಲ್ಪೋಕ್ತ ಪೂಜೆ, ಚಂಡಿಕಾ ಆವರಣ ಪೂಜೆ, ಯಾಗ ಪ್ರಾರಂಭವಾಗಲಿದೆ. ನಂತರ 8.30ಕ್ಕೆ ಬೆಳಗ್ಗಿನ ಪೂಜೆ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮಹಾ ಪೂಜೆ, ಪ್ರಸಾದ ಪ್ರಸಾದ ಭೋಜನ ನಡೆಯಲಿದೆ. ಸಾಯಂಕಾಲ 5:00ಕ್ಕೆ ಶತ ಚಂಡಿಕಾಯಾಗ ನಡೆದ ಬಳಿಕ, ರಾತ್ರಿ ಗಂಟೆ 7.00ರಿಂದ ಶ್ರೀ ವಿಷ್ಣುಮೂರ್ತಿ ಭಜನಾ ಸಮಿತಿ ವಿಷ್ಣುನಗರ ಕುಂಡಡ್ಕ ಇವರಿಂದ ಭಜನಾ ಸೇವೆ ನಡೆಯಲಿದೆ. ರಾತ್ರಿ ಗಂಟೆ 8.00ಕ್ಕೆ ಮಹಾಪೂಜೆ. ಅಷ್ಟಾವಧಾನ ಸೇವೆ, ಪ್ರಸಾದ ಭೋಜನ ನಡೆಯಲಿದೆ.
ದಿನಾಂಕ 10-10-2024ನೇ ಗುರುವಾರದಂದು ಬೆಳಿಗ್ಗೆ ಗಂಟೆ 7.00 : ಶತ ಚಂಡಿಕಾಯಾಗ ನಡೆದು, 8.30ಕ್ಕೆ ಬೆಳಗ್ಗಿನ ಪೂಜೆ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮಹಾ ಪೂಜೆ, ಪ್ರಸಾದ, ಪ್ರಸಾದ ಭೋಜನ ನಡೆಯಲಿದೆ. ಸಂಜೆ 4.00ಗಂಟೆಗೆ ಶತ ಚಂಡಿಕಾಯಾಗ ನಡೆದ ಬಳಿಕ, ರಾತ್ರಿ 7.00 ರಿಂದ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಮಹಿಳಾ ಭಜನಾಸಮಿತಿ ಕೋಲ್ಪೆ ಇವರಿಂದ ಭಜನಾ ಸೇವೆ ನಡೆಯಲಿದೆ. ರಾತ್ರಿ ಗಂಟೆ 8.00 ಕ್ಕೆ ಮಹಾಪೂಜೆ, ಅಷ್ಟಾವಧಾನ ಸೇವೆ, ಪ್ರಸಾದ ಭೋಜನ ನಡೆದ ನಂತರ, 9.00ರಿಂದ ಸತ್ಯದ ಬದ್‌ಕ್ ಎಂಬ ನಾಟಕ ಜರುಗಲಿದೆ.
ದಿನಾಂಕ 11-10-2024ನೇ ಶುಕ್ರವಾರದಂದು ಬೆಳಿಗ್ಗೆ 7:00ರಿಂದ ಚಂಡಿಕಾಯಾಗ ನಡೆದ ಬಳಿಕ, 8.30ಕ್ಕೆ ಬೆಳಗ್ಗಿನ ಪೂಜೆ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮಹಾ ಪೂಜೆ, ಪ್ರಸಾದ ಪ್ರಸಾದ ಭೋಜನ ನಡೆಯಲಿದೆ. ಸಂಜೆ 4:30 ರಿಂದ ವನದುರ್ಗಾ ಹವನ ನಡೆದ ನಂತರ ರಾತ್ರಿ 7.00 ರಿಂದ ಶ್ರೀ ಸೀತಾರಾಮಾಂಜನೇಯ ಮಹಿಳಾ ಭಜನಾ ಸಮಿತಿ ರಾಮನಗರ ಮಿತ್ತೂರು ಇವರಿಂದ ಭಜನಾ ಸೇವೆ ನಡೆದ ಬಳಿಕ 8.00ಕ್ಕೆ ಮಹಾಪೂಜೆ, ಅಷ್ಟಾವಧಾನ ಸೇವೆ, ಪ್ರಸಾದ ಭೋಜನ ನಡೆಯಲಿದೆ. ನಂತರ 9.00ಕ್ಕೆ ಆತ್ಮಶ್ರೀ ಮತ್ತು ಬಳಗದವರಿಂದ ಗಾನ ಸಂಭ್ರಮ ಕಾರ್ಯಕ್ರಮ ನಡೆಯಲಿದೆ.
ದಿನಾಂಕ 12:10:2024ನೇ ಶನಿವಾರದಂದು ಬೆಳಿಗ್ಗೆ ಗಂಟೆ 8.30ಕ್ಕೆ ಬೆಳಗ್ಗಿನ ಪೂಜೆ ನಡೆದು, 8:00ಕ್ಕೆ ಯಜ್ಞ ಮಂಟಪದಲ್ಲಿ ಶತಚಂಡಿಕಾಯಾಗ, ಕನ್ನಿಕಾಪೂಜೆ, ಸುಹಾಸಿನಿ ಪೂಜೆ, ವಟುಕ ಬೈರವ ಪೂಜೆ, ಭಕ್ಷ್ಯಹೋಮ, ಬಲಿಪ್ರಧಾನ ಚಂಡಿಕಾಯಾಗದ ಉಪಚಾರ ಪೂಜೆ, ಪೂರ್ಣಾಹುತಿ, ವರ್ಸೋದ್ಧಾರ ಕಾರ್ಯಕ್ರಮ ನಡೆಯಲಿದೆ. ಗಂಟೆ 11.00ಕ್ಕೆ ಅಕ್ಷರಭ್ಯಾಸ, ಕಿವಿ, ಮೂಗು ಚುಚ್ಚುವ ಕಾರ್ಯಕ್ರಮ ನಡೆದ ನಂತರ ಮಧ್ಯಾಹ್ನ 12.30ಕ್ಕೆ ಮಹಾ ಪೂಜೆ, ಪ್ರಸಾದ ಭೋಜನ ನಡೆಯಲಿದೆ.