ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೋ ಹತ್ಯೆ, ಗೋ ಅಕ್ರಮ ಸಾಗಾಟ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ನಿರಾಯಾಸವಾಗಿ ಸಾಗುತ್ತಿರುವುದು, ಹಿಂದೂ ಪರ ಸಂಘಟನೆಗಳ ಆಕ್ರೋಶ ಕಾರಣವಾಗಿದೆ.

ಆದರೆ ಪುತ್ತೂರಿನ ಪರಿಸ್ಥಿತಿ ಕೊಂಚ ಭಿನ್ನವಾಗಿದ್ದು ತಾಲೂಕಿನಿಂದ ನೇರ ಕೇರಳಾ ಸಂಪರ್ಕ ವಿರುವ ಕಾರಣ ನಿರಂತರವಾಗಿ ಗಡಿಭಾಗದಲ್ಲಿ ಅಕ್ರಮ ಗೋಸಾಗಾಟ ಘಟನೆಗಳು ನಡೆಯುತ್ತಿತ್ತು, ಆದರೆ, ಅದನ್ನು ತಡೆದ ಪೊಲೀಸರು ಹಾಗೂ ಹಿಂದೂ ಸಂಘಟನೆಗೆಗಳಿಗೆ ಒಂದು ತಲೆನೋವು ಕಾಡುತ್ತಿತ್ತು. ಕಾನೂನು ಉಲ್ಲಂಘಿಸಿ ಅನೇಕ ಅಕ್ರಮ ಸಾಗಾಟಗಳಿಗೆ ವೈದ್ಯಕೀಯ ಪರವಾನಿಗೆ ದೊರಕುತ್ತಿತ್ತು.


ಇದರ ಆಧಾರದಲ್ಲಿ ಒಂದು ಪಿಕ್ ಅಪ್ ವಾಹನದಲ್ಲಿ 2 ಗೋವುಗಳನ್ನು ತುಂಬಿಕೊಂಡು ಹೋಗುತ್ತಿದ್ದ ದೂರಿನ ಬಗ್ಗೆ ಮನವಿಯನ್ನು ಸ್ವೀಕರಿಸಿ, ಅದರ ಬಗ್ಗೆ ಕೂಲಂಕುಷವಾಗಿ ತನಿಖೆಯನ್ನು ನಡೆಸಿ, ತುರ್ತಾಗಿ ಸಮಸ್ಯೆಗೆ ಸ್ಪಂದಿಸಿ ಇದೀಗ ಪುತ್ತೂರು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸಂಜೀವ ಮಠಂದೂರು ಪರಿಹಾರ ಒಂದನ್ನು ನೀಡಿದ್ದು, ಹಿಂದೂ ಸಂಘಟನೆಗಳು ಸಂಜೀವಣ್ಣನಿಗೆ ಜೈ ಎನ್ನುತ್ತಿವೆ.

ನಿರಂತರವಾಗಿ ಗೋಕಳ್ಳತನ ಕೇಸ್ ಇರುವಂತಹ ವ್ಯಕ್ತಿಗಳು 2 ವಾಹನಕ್ಕೆ ದಿನನಿತ್ಯ ಕೇರಳ ಭಾಗಕ್ಕೆ ಅಕ್ರಮವಾಗಿ ದನಸಾಗಿಸಲು ಅನುಮತಿ ಕೊಡುತ್ತಿದ್ದ ಡಾ. ಧರ್ಮಪಾಲ್ ರನ್ನು ಪುತೂರು ಆಸ್ಪತ್ರೆಯಿಂದ ಕೊಯಿಲ ಫಾರ್ಮ್ ಗೆ ವರ್ಗಾವಣೆ ಮಾಡಲಾಗಿದೆ ಎಂಬ ಸುದ್ದಿ ತಾಲೂಕಿನಲ್ಲಿ ಕೇಳುತ್ತಿದ್ದಂತೆ ತಾಲೂಕಿನ ಸಂಘ ಪರಿವಾರದ ಕಾರ್ಯಕರ್ತರಲ್ಲಿ ಸಂತಸ ಮನೆ ಮಾಡಿದೆ.
ಇತ್ತೀಚೆಗೆ ಪುತ್ತೂರು ಶಾಸಕರಿಗೆ ಹಿಂದೂ ಮುಖಂಡ ಅಕ್ಷಯ್ ರಜಪೂತ್ ನೇತೃತ್ವದ ತಂಡ ಡಾ. ಧರ್ಮಪಾಲ್ ವಿರುದ್ಧ ದೂರು ನೀಡಿದ್ದರು. ಅಕ್ರಮ ಗೋ ಸಾಗಾಟಕ್ಕೆ ಇವರು ಸಹಕರಿಸಿ ಅನುಮತಿ ನೀಡುತ್ತಿದ್ದ ಮಾಹಿತಿ ಸಮೇತ ವಾಗಿ ಶಾಸಕರಿಗೆ ಮಾಹಿತಿ ನೀಡಿದ್ದರು.


ಈ ಸಂದರ್ಭದಲ್ಲಿ ಪುತ್ತೂರು ಮಂಡಲ ಬಿಜೆಪಿ ಉಪಾಧ್ಯಕ್ಷರಾದ ಹರಿ ಪ್ರಸಾದ್ ಯಾದವ್ ರವರು ಗಾಡಿಯಲ್ಲಿ ಅಕ್ರಮ ಗೋ ಸಾಗಾಟದ ಬಗ್ಗೆ ಶಾಸಕರೊಂದಿಗೆ ಚರ್ಚಿಸಿದರು.
ಗೋಕಳ್ಳರಿಗೆ ಸಾಥ್ ನೀಡುತ್ತಿದ್ದ ವೈದ್ಯನ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದು, ಸ್ವತಃ ಗೋಪಾಲಕರಾದ ಶಾಸಕರ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.









