ಭಯಂಕರ ಹಿಂದುತ್ವದ ಉದ್ದಾರಕ ಶಾಸಕರ ವಿರುದ್ಧ ಪುತ್ತೂರ ಮುತ್ತು ನಮ್ಮ ಅರುಣಣ್ಣ ಫೇಸ್ ಬುಕ್ ಖಾತೆಯಲ್ಲಿ ಗಂಭೀರ ಆರೋಪ




ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಹತ್ತೂರ ಒಡೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಭಾವಚಿತ್ರವನ್ನು ಸ್ವೀಕರಿಸುವ ಸಂದರ್ಭದಲ್ಲಿ ಕಾಲಿನಿಂದ ಶೂ ತೆಗೆಯದೇ ಪಡೆದುಕೊಂಡ ಫೋಟೊ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಹಿಂದು ಸಂಘಟನೆಗಳಿಗೆ ಪಾಠ ಮಾಡೋ ಶಾಸಕರು ಹತ್ತೂರ ಒಡೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಪೋಟೋವನ್ನು ತನ್ನ ಕೈಯಲ್ಲಿ ಸ್ವೀಕರ ಮಾಡೋ ಸಂದರ್ಭದಲ್ಲಿ ಕಾಲಿನಿಂದ ಶೂ ತೆಗೆಯದೆ ದೇವರ ಪೋಟೋ ಸ್ಮರಣಿಕೆ ತೆಗೆದುಕೊಂಡ ಈ ಭಯಂಕರ ಹಿಂದುತ್ವದ ಉದ್ದಾರಕ, ದೇವರ ಪೋಟೋ ತಕೋಳುವಾಗ ಸೌಜನ್ಯಕ್ಕೂ ಕಾಲಿನಿಂದ ಶೂ ತೆಗೆಯದವರು ,ಹಿಂದೂ ಕಾರ್ಯಕರ್ತರಿಗೆ ಹಿಂದೂ ಸಂಘಟನೆಗೆ ರಾಜಕೀಯ ವೇದಿಕೆಯಲ್ಲಿ ಬೈಯುದು, ಆ ನಾಯಕ ಈ ನಾಯಕ ಎಂತ ನಾಯಕ ಇವರೆಲ್ಲ ಎಂದು , ಇದು ಏನು ಹಾಗದ್ರೆ? ನಾನು ಭಯಂಕರ ಅಭಿವೃದ್ಧಿಯ ಹರಿಕಾರ ಎನಿಸಿಕೊಂಡು ಪ್ಲೆಕ್ಸ್ ಪೋಟೋ ಹಾಕುವ ನೀವು ಇದನ್ನು ಒಂದು ಪ್ಲೆಕ್ಸ್ ಹಾಕಿ ಇದೆ ತರದ ವಿಚಾರ ಪ್ರಚಾರ ಮಾಡಿ ಎಂದು ಪುತ್ತೂರ ಮುತ್ತು ನಮ್ಮ ಅರುಣಣ್ಣ ಎಂಬ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.








