Monday, May 6, 2024
spot_imgspot_img
spot_imgspot_img

MLC Election Results: ಇಂದು ವಿಧಾನ ಪರಿಷತ್ ಚುನಾವಣೆ ಫಲಿತಾಂಶ; 4 ಸ್ಥಾನ, 49 ಅಭ್ಯರ್ಥಿಗಳು

- Advertisement -G L Acharya panikkar
- Advertisement -

ಕರ್ನಾಟಕ ವಿಧಾನ ಪರಿಷತ್ತಿನ ನಾಲ್ಕು ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ ಸೋಮವಾರ ನಡೆದಿದ್ದು, ಇಂದು ಫಲಿತಾಂಶಪ್ರಕಟವಾಗಲಿದೆ. ನಾಲ್ಕು ಕ್ಷೇತ್ರಗಳಲ್ಲಿ ಶೇ.73ರಷ್ಟು ಮತದಾನವಾಗಿದೆ. ಇಂದು ಬೆಳಗ್ಗೆ ಮತ ಎಣಿಕೆ ಆರಂಭವಾಗಿದೆ. ಪಶ್ಚಿಮ ಶಿಕ್ಷಕರ ಕ್ಷೇತ್ರ ಶೇ.84 ರಷ್ಟು ಅತಿ ಹೆಚ್ಚು ಮತದಾನವಾಗಿದೆ. ವಾಯುವ್ಯ ಶಿಕ್ಷಕರ ಕ್ಷೇತ್ರ ಶೇ.80 ಮತ್ತು ದಕ್ಷಿಣ ಪದವೀಧರರ ಕ್ಷೇತ್ರ ಶೇ.70 ಮತ್ತು ವಾಯವ್ಯ ಪದವೀಧರರ ಕ್ಷೇತ್ರದಲ್ಲಿ ಶೇ.59ರಷ್ಟು ಮತದಾನವಾಗಿದೆ. ಮತಪತ್ರಗಳ ಎಣಿಕೆ ಜೊತೆ ಪ್ರಾಶಸ್ತ್ರ ಮತಗಳ ಎಣಿಕೆ ನಡೆಯೋದರಿಂದ ಇಂದು ಸಂಜೆ ಅಥವಾ ಗುರುವಾರ ಬೆಳಗ್ಗೆ ಫಲಿತಾಂಶ ಪ್ರಕಟವಾಗುವ ಸಾಧ್ಯತೆಗಳಿವೆ.

ಒಟ್ಟು ನಾಲ್ಕು ಸ್ಥಾನಗಳ 607 ಬೂತ್‌ ಗಳಲ್ಲಿ ಮತದಾನ ಶಾಂತಿಯುತವಾಗಿ ನಡೆದಿತ್ತು. ನಾಲ್ವರು ಮಹಿಳೆಯರು ಸೇರಿದಂತೆ 49 ಅಭ್ಯರ್ಥಿಗಳು ಕಣದಕಲ್ಲಿದ್ದಾರೆ. ನಾಲ್ಕು ಕ್ಷೇತ್ರಗಳಲ್ಲಿ ಒಟ್ಟು 2,84,922 ಮತದಾರರಿದ್ದಾರೆ. 75 ಸದಸ್ಯರ ಮೇಲ್ಮನೆಯಲ್ಲಿನ ಮೂರು ಪಕ್ಷಗಳ ಮೇಲೆ ಈ ಚುನಾವಣೆ ಅಷ್ಟೇನೂ ಬದಲಾವಣೆ ತರದಿದ್ರೂ, ಆಡಳಿತರೂಢ ಬಿಜೆಪಿಗೆ ವಿಧಾನ ಪರಿಷತ್ತಿನಲ್ಲಿ ಸ್ಪಷ್ಟ ಬಹುಮತವನ್ನು ಪಡೆಯಲು ಸಹಾಯ ಮಾಡಲಿದೆ.

ಬಿಜೆಪಿ ಮತ್ತು ಕಾಂಗ್ರೆಸ್ ಎಲ್ಲಾ ನಾಲ್ಕು ಕ್ಷೇತ್ರಗಳಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಆದ್ರೆ ಜೆಡಿಎಸ್ ವಾಯುವ್ಯ ಶಿಕ್ಷಕರ ವಿಭಾಗದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಬಿಜೆಪಿಯಿಂದ ಎಂಟನೇ ಬಾರಿಗೆ ಬಸವರಾಜ್ ಹೊರಟ್ಟಿ ಪುನರಾಯ್ಕೆ ಬಯಸಿರೋದರಿಂದ ಪಶ್ಚಿಮ ಶಿಕ್ಷಕರ ಕ್ಷೇತ್ರದ ಫಲಿತಾಂಶ ವಿಶೇಷ ಕುತೂಹಲ ಮೂಡಿಸಿದೆ. ಕಳೆದ ತಿಂಗಳು ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು.

ಯಾವ ಜಿಲ್ಲೆಗಳಲ್ಲಿ ಚುನಾವಣೆ.?

*ಕರ್ನಾಟಕ ವಾಯುವ್ಯ ಪದವೀಧರರ ಕ್ಷೇತ್ರ: ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ

*ಕರ್ನಾಟಕ ದಕ್ಷಿಣ ಪದವೀಧರ ಕ್ಷೇತ್ರ: ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ಹಾಸನ

*ಕರ್ನಾಟಕ ವಾಯುವ್ಯ ಶಿಕ್ಷಕರ ಕ್ಷೇತ್ರ: ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ

*ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರ: ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ

ವಾಯವ್ಯ ಶಿಕ್ಷಕ ಕ್ಷೇತ್ರದ ಚುನಾವಣಾ ಕಣದಲ್ಲಿ ಅರುಣ ಶಹಪುರ (ಬಿಜೆಪಿ), ಪ್ರಕಾಶ್ ಹುಕ್ಕೇರಿ (ಕಾಂಗ್ರೆಸ್) ಮತ್ತು ಚಂದ್ರಶೇಖರ್ ಲೋಣ (ಜೆಡಿಎಸ್) ಇದ್ದಾರೆ. ಪಕ್ಷೇತರ ಅಭ್ಯರ್ಥಿಗಳಾಗಿ ನಿಂಗಪ್ಪ ಬನ್ನೂರು,. ಶ್ರೀಕಾಂತ್ ಪಾಟೀಲ್, ಬಸಪ್ಪ ಮನಿಗಾರ, ಜಯಪಾಲ್ ದೇಸಾಯಿ, ಅಪ್ಪಾಸಾಹೇಬ್ ಕರುಣೆ, ಚಂದ್ರಶೇಖರ್ ಗಡಸಿ, ಸಂಗಮೇಶ್ ಚಿಕ್ಕನರಗುಂದ ಮತ್ತು ಶ್ರೇಣೀಕ್ ಜಾಂಗಟೆ ಕಣದಲ್ಲಿದ್ದಾರೆ.

- Advertisement -

Related news

error: Content is protected !!