Saturday, April 20, 2024
spot_imgspot_img
spot_imgspot_img

ಜಾತಿ ಭೇದವ ಬದಿಗಿಟ್ಟು ಮಾನವೀಯ ಮೌಲ್ಯವನ್ನು ಎತ್ತಿ ಹಿಡಿದ ದಾನಿಗಳು.

- Advertisement -G L Acharya panikkar
- Advertisement -

ಮಂಗಳೂರು: ಪುತ್ತೂರು ತಾಲೂಕಿನ ಗಿಡೆಗಲ್ಲ್ ಎಂಬ ಪುಟ್ಟ ಊರಿನ ಬಡ ದಂಪತಿಗಳ ಲವಲವಿಕೆಯಿಂದಿದ್ದ ಆರು ವರ್ಷ ಪ್ರಾಯದ ಹೆಣ್ಣು ಮಗು ಸನ್ನಿಧಿಯು ಮನೆಯಲ್ಲಿ ಆಟವಾಡುತ್ತಿದ್ದ ಸಮಯ ದಿಢೀರನೆ ಕುಸಿದು ಬಿದ್ದಿದ್ದು, ಆ ಕೂಡಲೇ ಮಗುವನ್ನು ಸ್ಥಳೀಯ ಪುತ್ತೂರು ಆಸ್ಪತ್ರೆಗೆ ಕರೆತಂದಾಗ ಅಲ್ಲಿನ ವೈದ್ಯರ ಸಲಹೆ ಮೇರೆಗೆ ಹೆಚ್ಚುವರಿ ಚಿಕಿತ್ಸೆಗಾಗಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿದ್ದರು.

ಈ ಬಗ್ಗೆ ಮಗುವಿನ ಕುಟುಂಬದ ಸದಸ್ಯರೊಬ್ಬರು ಬಡವರ ಪಾಲಿನ ಭರವಸೆಯ ಸಂಸ್ಥೆ ಮಂಗಳೂರಿನ ಎಮ್ ಎನ್ ಜಿ ಫೌಂಡೇಶನ್ ಸಂಸ್ಥೆಯನ್ನು ಸಂಪರ್ಕಿಸಿ ತಮ್ಮ ಕಷ್ಟದ ಬಗ್ಗೆ ವಿವರಿಸಿದಾಗ ಆ ಕೂಡಲೇ ಸಂಸ್ಥೆಯ ಪದಾಧಿಕಾರಿಗಳು ಆಸ್ಪತ್ರೆಗೆ ತೆರಳಿ ಮಾಹಿತಿ ಪಡೆದಾಗ ಕುಟುಂಬದ ಅಸಹಾಯಕ ಪರಿಸ್ಥಿತಿಯ ಬಗ್ಗೆ ಅರಿವಿಗೆ ಬಂದಿತ್ತು.

ಆ ನಂತರದಲ್ಲಿ ಕಳೆದ ಗುರುವಾರ ದಿನಾಂಕ 27-08-2020 ರಂದು ಪೋಲಿಯೋಗೆ ತುತ್ತಾಗಿರುವ ಪುಟ್ಟ ಬಾಲೆ ಸನ್ನಿಧಿಯ ಚಿಕಿತ್ಸೆಗಾಗಿ ನೆರವಾಗುವಿರಾ ಎಂಬ ತಲೆಬರಹದಡಿ ದಾನಿಗಳ ಸಹಾಯದ ನಿರೀಕ್ಷೆಯನ್ನಿಟ್ಟು ಎಮ್ ಎನ್ ಜಿ ಫೌಂಡೇಶನ್ ಸಂಸ್ಥೆಯು ಒಂದು ವೀಡಿಯೋ ಮತ್ತು ಲೇಖನವನ್ನು ಸಾಮಾಜಿಕ ಜಾಲತಾಣದ ಮೂಲಕ ಹರಿಯಬಟ್ಟಿತ್ತು.

ಇಂದು ದಿನಾಂಕ: 03-09-2020 ಗುರುವಾರ ಸಂಜೆ ಹೊತ್ತಿಗೆ ಜಾತಿ ಮತ ಭೇದವಿಲ್ಲದೆ ಮಾನವೀಯತೆಗೆ ಮೌಲ್ಯ ಕಲ್ಪಿಸಿದ ದಾನಿಗಳು ಎಮ್ ಎನ್ ಜಿ ಫೌಂಡೇಶನ್ ಸಂಸ್ಥೆ ಜೊತೆ ಕೈಜೋಡಿಸಿದರ ಪರಿಣಾಮ ಮಗುವಿನ ಮುಂದಿನ ಚಿಕಿತ್ಸೆಗಾಗಿ ಬೇಕಾಗಿದ್ದ ಸುಮಾರು ಮೂರು ಲಕ್ಷಕ್ಕೂ ಮಿಕ್ಕಿದ ಸುಮಾರು 3,50,786.00 ರಷ್ಟು ಮೊತ್ತವು ಮಗುವಿನ ತಾಯಿಯ ಖಾತೆಗೆ ಜಮೆಯಾಗಿರುತ್ತದೆ.

ಈ ಪ್ರಕ್ರಿಯೆಯಲ್ಲಿ ಎಮ್ ಎನ್ ಜಿ ಫೌಂಡೇಶನ್ ಜೊತೆ ವಿವಿಧ ಸಂಘ ಸಂಸ್ಥೆಗಳು ಮತ್ತು ಹಲವು ಸಮಾಜಸೇವಕರುಗಳು ಸಾಮಾಜಿಕ ಜಾಲತಾಣದ ಮೂಲಕ ದಾನಿಗಳನ್ನು ತಲುಪುವಲ್ಲಿ ನಮ್ಮ ಜೊತೆ ಕೈಜೋಡಿಸಿದ್ದರು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಹಾಗೂ ಮಗುವಿನ ತಾಯಿಯ ಬ್ಯಾಂಕ್ ಖಾತೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ಮುಂದೆ ಆ ಖಾತೆಗೆ ಹಣ ವರ್ಗಾವಣೆ ಮಾಡದಂತೆ ಮತ್ತು ಆರ್ಥಿಕವಾಗಿ ಬಹಳ ಸಂಕಷ್ಟದಲ್ಲಿರುವ ಮಗುವಿನ ಕುಟುಂಬಕ್ಕೆ ಮುಂದೆ ಸಹಾಯ ಮಾಡಲು ಇಚ್ಛಿಸಿದ ದಾನಿಗಳು ನೇರವಾಗಿ ಆಸ್ಪತ್ರೆಯಲ್ಲಿ ಕುಟುಂಬವನ್ನು ಭೇಟಿಯಾಗಿ ಸಹಾಯ ಮಾಡುವಂತೆ ಸಂಸ್ಥೆ ಕೋರಿಕೊಂಡಿದೆ.

ಜಾತಿ ಭೇದವ ಬದಿಗಿಟ್ಟು ಮಾನವೀಯ ಮೌಲ್ಯವನ್ನು ಎತ್ತಿ ಹಿಡಿದ ದಾನಿಗಳು.

#ಜಾತಿ_ಭೇದವ_ಬದಿಗಿಟ್ಟು_ಮಾನವೀಯ_ಮೌಲ್ಯವನ್ನು_ಎತ್ತಿ_ಹಿಡಿದ_ದಾನಿಗಳು.ದಿನಾಂಕ: 03-09-2020ಗುರುವಾರಮಂಗಳೂರು: ಪುತ್ತೂರು ತಾಲೂಕಿನ ಗಿಡೆಗಲ್ಲ್ ಎಂಬ ಪುಟ್ಟ ಊರಿನ ಬಡ ದಂಪತಿಗಳ ಲವಲವಿಕೆಯಿಂದಿದ್ದ ಆರು ವರ್ಷ ಪ್ರಾಯದ ಹೆಣ್ಣು ಮಗು #ಸನ್ನಿಧಿಯು ಮನೆಯಲ್ಲಿ ಆಟವಾಡುತ್ತಿದ್ದ ಸಮಯ ದಿಢೀರನೆ ಕುಸಿದು ಬಿದ್ದಿದ್ದು, ಆ ಕೂಡಲೇ ಮಗುವನ್ನು ಸ್ಥಳೀಯ ಪುತ್ತೂರು ಆಸ್ಪತ್ರೆಗೆ ಕರೆತಂದಾಗ ಅಲ್ಲಿನ ವೈದ್ಯರ ಸಲಹೆ ಮೇರೆಗೆ ಹೆಚ್ಚುವರಿ ಚಿಕಿತ್ಸೆಗಾಗಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿದ್ದರು.ಅಲ್ಲಿ ಹಲವು ಪರೀಕ್ಷೆಗಳ ಬಳಿಕ ಸೊಂಟದಿಂದ ಕೆಳಗೆ ಸಂಪೂರ್ಣ ಬಲಕಳೆದುಕೊಂಡಿದ್ದ ಮಗುವಿಗೆ ಪೋಲಿಯೊ ಬಾಧಿಸಿರುವ ಬಗ್ಗೆ ಧೃಢಪಟ್ಟಿತ್ತು.ನಂತರ ಎಂದಿನಂತೆ ಮಗುವನ್ನು ವಾಪಾಸು ಪಡೆಯಲು ವಿಶೇಷ ಚಿಕಿತ್ಸೆಗಾಗಿ ಸುಮಾರು ಮೂರು ಲಕ್ಷ ತಗುಲುವ ಬಗ್ಗೆ ವೈದ್ಯರು ಸೂಚಿಸಿದ್ದರು.ಹಾಗೂ ಇಷ್ಟು ದೊಡ್ಡ ಮೊತ್ತವನ್ನು ಕೂಡಿಸಲು ಸಾಧ್ಯವಾಗದೆ ಮಗುವಿನ ಕುಟುಂಬ ದಿಕ್ಕು ತೋಚದಂತ್ತಾಗಿತ್ತು.ಈ ಬಗ್ಗೆ ಮಗುವಿನ ಕುಟುಂಬದ ಸದಸ್ಯರೊಬ್ಬರು ಬಡವರ ಪಾಲಿನ ಭರವಸೆಯ ಸಂಸ್ಥೆ ಮಂಗಳೂರಿನ #MNG_ಫೌಂಡೇಶನ್ ಸಂಸ್ಥೆಯನ್ನು ಸಂಪರ್ಕಿಸಿ ತಮ್ಮ ಕಷ್ಟದ ಬಗ್ಗೆ ವಿವರಿಸಿದಾಗ ಆ ಕೂಡಲೇ ಸಂಸ್ಥೆಯ ಪದಾಧಿಕಾರಿಗಳು ಆಸ್ಪತ್ರೆಗೆ ತೆರಳಿ ಮಾಹಿತಿ ಪಡೆದಾಗ ಕುಟುಂಬದ ಅಸಹಾಯಕ ಪರಿಸ್ಥಿತಿಯ ಬಗ್ಗೆ ಅರಿವಿಗೆ ಬಂದಿತ್ತು.ಆ ನಂತರದಲ್ಲಿ ಕಳೆದ ಗುರುವಾರ ದಿನಾಂಕ 27-08-2020 ರಂದು #ಪೋಲಿಯೋಗೆ_ತುತ್ತಾಗಿರುವ_ಪುಟ್ಟ_ಬಾಲೆ_ಸನ್ನಿಧಿಯ_ಚಿಕಿತ್ಸೆಗಾಗಿ_ನೆರವಾಗುವಿರಾ ಎಂಬ ತಲೆಬರಹದಡಿ ದಾನಿಗಳ ಸಹಾಯದ ನಿರೀಕ್ಷೆಯನ್ನಿಟ್ಟು #MNG_ಫೌಂಡೇಶನ್ ಸಂಸ್ಥೆಯು ಒಂದು ವೀಡಿಯೋ ಮತ್ತು ಲೇಖನವನ್ನು ಸಾಮಾಜಿಕ ಜಾಲತಾಣದ ಮೂಲಕ ಹರಿಯಬಟ್ಟಿತ್ತು.ಇಂದು ದಿನಾಂಕ: 03-09-2020 ಗುರುವಾರ ಸಂಜೆ ಹೊತ್ತಿಗೆ ಜಾತಿ ಮತ ಭೇದವಿಲ್ಲದೆ ಮಾನವೀಯತೆಗೆ ಮೌಲ್ಯ ಕಲ್ಪಿಸಿದ ದಾನಿಗಳು #MNG_ಫೌಂಡೇಶನ್ ಸಂಸ್ಥೆ ಜೊತೆ ಕೈಜೋಡಿಸಿದರ ಪರಿಣಾಮ ಮಗುವಿನ ಮುಂದಿನ ಚಿಕಿತ್ಸೆಗಾಗಿ ಬೇಕಾಗಿದ್ದ ಸುಮಾರು ಮೂರುವರೆ ಲಕ್ಷಕ್ಕೂ ಮಿಕ್ಕಿದ 3,50,786.00 ರಷ್ಟು ಮೊತ್ತವು ಮಗುವಿನ ತಾಯಿಯ ಖಾತೆಗೆ ಜಮೆಯಾಗಿರುತ್ತದೆ.ಈ ಪ್ರಕ್ರಿಯೆಯಲ್ಲಿ #MNG_ಫೌಂಡೇಶನ್ ಜೊತೆ ವಿವಿಧ ಸಂಘ ಸಂಸ್ಥೆಗಳು ಮತ್ತು ಹಲವು ಸಮಾಜಸೇವಕರುಗಳು ಸಾಮಾಜಿಕ ಜಾಲತಾಣದ ಮೂಲಕ ದಾನಿಗಳನ್ನು ತಲುಪುವಲ್ಲಿ ನಮ್ಮ ಜೊತೆ ಕೈಜೋಡಿಸಿದ್ದರು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.ಹಾಗೂ ಮಗುವಿನ ತಾಯಿಯ ಬ್ಯಾಂಕ್ ಖಾತೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು,ಮುಂದೆ ಆ ಖಾತೆಗೆ ಹಣ ವರ್ಗಾವಣೆ ಮಾಡದಂತೆ ಮತ್ತು ಆರ್ಥಿಕವಾಗಿ ಬಹಳ ಸಂಕಷ್ಟದಲ್ಲಿರುವ ಮಗುವಿನ ಕುಟುಂಬಕ್ಕೆ ಮುಂದೆ ಸಹಾಯ ಮಾಡಲು ಇಚ್ಛಿಸಿದ ದಾನಿಗಳು ನೇರವಾಗಿ ಆಸ್ಪತ್ರೆಯಲ್ಲಿ ಕುಟುಂಬವನ್ನು ಭೇಟಿಯಾಗಿ ಸಹಾಯ ಮಾಡುವಂತೆ ಸಂಸ್ಥೆ ಕೋರಿಕೊಂಡಿದೆ.Media Team: #MNG_foundation

Posted by MNG Foundation on Thursday, 3 September 2020
- Advertisement -

Related news

error: Content is protected !!