Saturday, May 18, 2024
spot_imgspot_img
spot_imgspot_img

ಬಸ್ ಬೈಕ್ ನಡುವೆ ಅಪಘಾತ; ಇಬ್ಬರು ಮೃತ್ಯು..!

- Advertisement -G L Acharya panikkar
- Advertisement -

ಬಸ್ ಮತ್ತು ಬೈಕ್ ನಡುವೆ ಡಿಕ್ಕಿಯಾದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ಕಲಬುರಗಿಯ ಆಳಂದ- ಹಿರೊಳ್ಳಿ ಮಾರ್ಗದಲ್ಲಿ ನಡೆದಿದೆ.

ಮೃತಪಟ್ಟವರನ್ನು ಸಿದ್ದಲಿಂಗಯ್ಯ ಹಿರೇಮಠ (40) ಮತ್ತು ಸಂಕೇತ (8) ಎಂದು ಗುರುತಿಸಲಾಗಿದೆ.

ಆಳಂದದಿಂದ ಹಿರೊಳ್ಳಿಗೆ ತೆರಳುತ್ತಿದ್ದಾಗ ಎದುರುಗಡೆಯಿಂದ ಬರುತ್ತಿದ್ದ ಸಾರಿಗೆ ಬಸ್ ಡಿಕ್ಕಿ ಹೊಡೆದಿದೆ. ಆಳಂದ ಪಟ್ಟಣದ ಆಡಳಿತ ಸೌಧದ ಬಳಿ ದುರ್ಘಟನೆ ಸಂಭವಿಸಿದೆ. ನಾಗಮ್ಮ ಮತ್ತು ಅಂಕಿತಾ ಎನ್ನುವ ಇನ್ನಿಬ್ಬರಿಗೆ ತೀವ್ರ ಗಾಯವಾಗಿದ್ದು, ಆಳಂದ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!