Wednesday, July 22, 2026
spot_imgspot_img
spot_imgspot_img

ಶಾಲಾ ಮಕ್ಕಳ ಮೊಬೈಲ್ ಬಳಕೆಗೆ ಕಟ್ಟುನಿಟ್ಟಿನ ನಿಯಂತ್ರಣ: ಕರಡು ನೀತಿ ಪ್ರಕಟ

- Advertisement -
- Advertisement -

ಬೆಂಗಳೂರು : ಸೋಮವಾರದಂದು ಆರೋಗ್ಯ ಇಲಾಖೆಯು ನಿಮ್ಹಾನ್ಸ್ ಹಾಗೂ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರದ ಸಹಯೋಗದೊಂದಿಗೆ ಶಾಲಾ ಮಕ್ಕಳಿಗೆ ಮೊಬೈಲ್ ಬಳಕೆ ನಿಷೇಧಿಸುವ ನಿಟ್ಟಿನಲ್ಲಿ ‘ವಿದ್ಯಾರ್ಥಿಗಳಲ್ಲಿ ಜವಾಬ್ದಾರಿಯುತ ಡಿಜಿಟಲ್ ಬಳಕೆ’ ಕರಡು ನೀತಿಯನ್ನು ಪ್ರಕಟಿಸಿದ್ದು, ಪ್ರತಿದಿನ ಶಾಲೆ ಮುಗಿದ ನಂತರವೂ ಶಾಲಾ ಮಕ್ಕಳು ಮನರಂಜನೆಗಾಗಿ ಮೊಬೈಲ್ ಬಳಸುವ ಅವಧಿಯನ್ನು ಒಂದು ಗಂಟೆಗೆ ಸೀಮಿತಗೊಳಿಸಬೇಕು ಎಂದು ಶಾಲೆಗಳಿಗೆ ನಿರ್ದೇಶನ ನೀಡಿದೆ.

ಶಾಲೆಗಳು ಡಿಜಿಟಲ್ ಯೋಗಕ್ಷೇಮ ಮತ್ತು ಸಾಮಾಜಿಕ ಮಾಧ್ಯಮ ಸಾಕ್ಷರತೆಯನ್ನು ಅಳವಡಿಸಿಕೊಳ್ಳಬೇಕು. ಜೀವನ ಕೌಶಲ್ಯಗಳು, ಮೌಲ್ಯ ಶಿಕ್ಷಣ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು ಪಠ್ಯಕ್ರಮದಲ್ಲಿ ಅಳವಡಿಕೆ ಮಾಡಿಕೊಳ್ಳಬೇಕು. ಮಕ್ಕಳಿಗೆ ಡಿಜಿಟಲ್ ಪೌರತ್ವ ಎಂದರೆ ತಂತ್ರಜ್ಞಾನ ಮತ್ತು ಇಂಟರ್ನೆಟ್ ಅನ್ನು ಜವಾಬ್ದಾರಿಯುತ, ಸುರಕ್ಷಿತ, ಕಾನೂನುಬದ್ಧ ಮತ್ತು ನೈತಿಕ ರೀತಿಯಲ್ಲಿ ಬಳಸುವ ಕೌಶಲ್ಯವನ್ನು ಪಾಠಗಳಲ್ಲಿ ಅಳವಡಿಕೆ ಮಾಡಿ ಬೋಧನೆ ಮಾಡಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯು ಕ್ರಮ ವಹಿಸಬೇಕು ಎಂದು ಸೂಚಿಸಿದೆ.

ಮಕ್ಕಳು ಇಂಟರ್ನೆಟ್ ಅನ್ನು ಅತಿಯಾಗಿ ಬಳಕೆ ಮಾಡದಂತೆ ಎಚ್ಚರಿಕೆ ವಹಿಸಲು ಶಾಲೆಗಳು ಸಮಿತಿಯನ್ನು ರಚನೆ ಮಾಡಬೇಕು. ಸೈಬರ್ ಕ್ರೈಮ್ ಪೊಲೀಸ್ ಅಧಿಕಾರಿಯನ್ನು ಒಳಗೊಂಡಂತೆ ಶಾಲೆಯ ಪ್ರಾಂಶುಪಾಲ, ಒಬ್ಬ ಮಾನಸಿಕ ಆರೋಗ್ಯ ತಜ್ಞ, ಶಿಕ್ಷಕ, ಒಬ್ಬ ಪೋಷಕ ಹಾಗೂ ವಿದ್ಯಾರ್ಥಿಯನ್ನು ಸಮಿತಿಯು ಒಳಗೊಂಡಿರಬೇಕು ಎಂದು ನೀತಿಯಲ್ಲಿ ಹೇಳಿದೆ.

ಸಂಜೆ 7 ಗಂಟೆಯ ಒಳಗಾಗಿ ಆಡಿಯೋ-ಮಾತ್ರ ಇರುವ ಫೋನ್‌ಗಳನ್ನು ಬಳಕೆ ಮಾಡುವ ರೀತಿಯಲ್ಲಿ ‘ಮಕ್ಕಳ ಯೋಜನೆ’ ಅನ್ನು ಅಭಿವೃದ್ಧಿಪಡಿಸಬೇಕು. ವಿದ್ಯಾರ್ಥಿಗಳೊಂದಿಗೆ ನೇರ ಸಂವಹನಕ್ಕಾಗಿ ವಾಟ್ಸ್ ಆಪ್ ಸಂಪರ್ಕದ ಬದಲಿಗೆ ‘ದಿನಚರಿ ಪುಸ್ತಕ ಪದ್ಧತಿ’ಯನ್ನು ಅಳವಡಿಸಿಕೊಳ್ಳಬೇಕು. ಹಾಗೆಯೇ ಪ್ರತಿ ಶಾಲೆಯು ಡಿಜಿಟಲ್ ಬಳಕೆ ನೀತಿಯ ರೂಪರೇಖೆಯನ್ನು ರೂಪಿಸಿ, ಜಾರಿಗೊಳಿಸಬೇಕು ಎಂದು ಸೂಚನೆ ನೀಡಲಾಗಿದೆ.

- Advertisement -

Related news

error: Content is protected !!