ಸುಳ್ಯ ತಾಲೂಕಿನ ದೇವರಗುಂಡಿ ಎಂಬ ಆ ಸ್ಥಳದಲ್ಲಿ ಸಾಕ್ಷಾತ ಶಿವನೇ ಸ್ನಾನಕ್ಕೆ ಬರುತ್ತಿದ್ದ ಎಂಬ ಪ್ರತೀತಿ ಇದೆ. ಹೀಗಾಗಿ ಸ್ಥಳೀಯರು ಆ ಜಲಪಾತದಲ್ಲಿ ಸ್ನಾನವನ್ನು ಮಾಡದೇ ಪಾವಿತ್ರ್ಯತೇ ಕಾಯ್ದುಕೊಂಡಿದ್ದರು. ಆದರೆ ಬೆಂಗಳೂರು ಮೂಲದ ಸುಂದರಿಯರು ಬಿಕನಿ ತೊಟ್ಟು ಅರೆಬೆತ್ತಲಾಗಿ ಪೋಟೋಗೆ ಪೋಸ್ ಕೊಟ್ಟಿದ್ದಾರೆ.

ಬೆಂಗಳೂರು ಮೂಲದ ಮಾಡೆಲ್ ಬೃಂಧಾ ಅರಸ್ ಹಾಗೂ ಇನ್ನಿಬ್ಬರು ಮಾಡೆಲ್ ಗಳು ಧಾರೆಯಾಗಿ ಇಳಿವ ಜಲಧಾರೆಯಲ್ಲಿ ಮೈಚಳಿ ಬಿಟ್ಟು ಅರೆಬರೆ ಬಟ್ಟೆತೊಟ್ಟು ಪೋಟೋಗೆ ಪೋಸ್ ನೀಡಿದ್ದು, ಈ ಮಾಡೆಲ್ ಗಳ ಹುಚ್ಚಾಟ ಕಂಡ ಸ್ಥಳೀಯರು ಗರಂ ಆಗಿದ್ದಾರೆ.


ಸುಳ್ಯ ತಾಲೂಕಿನ ತೋಡಿಕಾನ ಗ್ರಾಮದ ಈ ದೇವರಗುಂಡಿ ಅಲ್ಲಿನ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಸಂಬಂಧಿಸಿದ್ದಾಗಿದ್ದು, ಅತ್ಯಂತ ಪವಿತ್ರ ಸ್ಥಳವೆಂದು ಸ್ಥಳೀಯರಿಂದ ಪಾಲನೆಗೊಳಗಾಗಿದೆ. ದೇವಸ್ಥಾನದಿಂದ ಸುಮಾರು 2 ಕಿಲೋಮೀಟರ್ ದೂರದಲ್ಲಿರುವ ದೇವರಗುಂಡಿಯಲ್ಲಿ ಮಾಡೆಲ್ ಗಳು ಹೀಗೆ ಅರೆಬೆತ್ತಲಾಗಿ ಕಾಣಿಸಿಕೊಂಡು ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.


ಆದರೆ ಮಾಡೆಲ್ ಗಳು ಇಲ್ಲಿ ಪೋಟೋಶೂಟ್ ನಡೆಸೋದಿಕ್ಕೆ ದೇವಾಲಯದಿಂದಾಗಲಿ ಅಥವಾ ಯಾರಿಂದಲೂ ಅನುಮತಿ ಪಡೆದಿಲ್ಲ. ದೇವಾಲಯದ ಆಡಳಿತ ಮಂಡಳಿ ಸದಸ್ಯರು ನಾವು ಅನುಮತಿ ನೀಡಿಲ್ಲ ಎನ್ನುತ್ತಿದ್ದಾರೆ. ಆದರೆ ಮಾಡೆಲ್ ಗಳು ಮಾತ್ರ ಪವಿತ್ರ ಸ್ಥಳದಲ್ಲಿ ಅರೆಬೆತ್ತಲಾಗಿ ಅವಾಂತರ ಸೃಷ್ಟಿಸಿದ್ದು, ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
