Wednesday, June 17, 2026
spot_imgspot_img
spot_imgspot_img

ಮಂಗಳೂರು : ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಯ ಒಡೆತನದ ಫ್ಲ್ಯಾ ಟ್ ಮತ್ತು ಲ್ಯಾಬ್ ಮೇಲೆ ಲೋಕಾಯುಕ್ತ ದಾಳಿ

- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕ ಆಗಿದ್ದ ನಿರಂಜನ್ ಅವರ ಒಡೆತನಕ್ಕೆ ಸೇರಿದ ಮಂಗಳೂರಿನ ಫ್ಲ್ಯಾ ಟ್ ಮತ್ತು ಲ್ಯಾಬ್ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.

ನಿರಂಜನ್ ಸದ್ಯ ಬೆಂಗಳೂರಿನಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಯಾಗಿ ಕರ್ತವ್ಯದಲ್ಲಿದ್ದು, ಮಂಗಳೂರಿನಲ್ಲಿರುವ ಫ್ಲ್ಯಾಟ್ ಮತ್ತು ಲ್ಯಾಬ್ ನಲ್ಲಿ ಲೋಕಾಯುಕ್ತ ಪೊಲೀಸರು ತಪಾಸಣೆ ನಡೆಸಿದ್ದಾರೆ.

ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಿರಂಜನ್ ಇತ್ತೀಚೆಗೆ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದರು. ನಿರಂಜನ್ ಗೆ ಸೇರಿದ ಪಂಪ್ ವೆಲ್ ನಲ್ಲಿರುವ ಫ್ಲ್ಯಾಟ್ ಮತ್ತು ನಿರಂಜನ್ ಪತ್ನಿ ಒಡೆತನದ ಡಯಾಗೋಸ್ಟಿಕ್ ಲ್ಯಾಬ್ ನಲ್ಲಿ ಪರಿಶೀಲನೆ ನಡೆಸಲಾಗಿದೆ.

ಅಲ್ಲದೇ ಕೊಡಗು ಜಿಲ್ಲೆಯ ಕುಶಾಲನಗರ ಮತ್ತು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿರುವ ನಿರಂಜನ್ ನಿವಾಸಗಳಲ್ಲಿ ಕೂಡಾ ಲೋಕಾಯುಕ್ತ ಪರಿಶೀಲನೆ ನಡೆದಿದೆ.

- Advertisement -

Related news

error: Content is protected !!