Sunday, May 5, 2024
spot_imgspot_img
spot_imgspot_img

ಕೊರೊನಾ ನಿಯಂತ್ರಿಸಲು ಪ್ರಧಾನಿ ಮೋದಿಯವರಿಂದ 4 ಹೆಜ್ಜೆ ಸೂತ್ರ!

- Advertisement -G L Acharya panikkar
- Advertisement -

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ದಿನೇ ದಿನೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶವಾಸಿಗಳಿಗೆ ಕರೆ ನೀಡಿದ್ದು, ನಾಲ್ಕು ಹೆಜ್ಜೆಗಳ ಸೂತ್ರವೊಂದನ್ನು ಬಿಚ್ಚಿಟ್ಟಿದ್ದಾರೆ.

ದೇಶವಾಸಿಗಳಲ್ಲಿ ವ್ಯಾಕ್ಸಿನ್ ಬಗ್ಗೆ ಆಸಕ್ತಿ ಹಾಗೂ ವಿಶ್ವಾಸ ಮೂಡಿಸುವ ಉದ್ದೇಶದಿಂದ ನಾಲ್ಕು ದಿನಗಳ ಕಾಲ ಲಸಿಕೆ ಮಹೋತ್ಸವ ಆಚರಿಸಲು ಮೋದಿ ಕರೆ ನೀಡಿದ್ದರು. ಅದರಂತೆ ನಿನ್ನೆಯಿಂದ ದೇಶದಲ್ಲಿ ಲಸಿಕಾ ಮಹೋತ್ಸವ ಆರಂಭವಾಗಿದೆ. ಇದೇ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಮೋದಿ, ಈ ಕೆಳಕಂಡ ನಾಲ್ಕು ಹೆಜ್ಜೆಗಳ ಸೂತ್ರ ನೀಡಿದ್ದಾರೆ.

ವ್ಯಾಕ್ಸಿನ್ ಪಡೆಯಲು ಜನರಿಗೆ ಸಹಾಯ ಮಾಡಿ

ಕೊರೊನಾ ಚಿಕಿತ್ಸೆಗಾಗಿ ಜನರಿಗೆ ಸಹಾಯ ಮಾಡಿ

ಮಾಸ್ಕ್ ಧರಿಸಿ ಮತ್ತು ಇತರರಿಗೂ ಉತ್ತೇಜಿಸಿ

ಸೋಂಕು ಕಂಡ ಬಂದ ಪ್ರದೇಶದಲ್ಲಿ ಮೈಕ್ರೋ ಕಂಟೇನ್​ಮೆಂಟ್ ಝೋನ್ ನಿರ್ಮಿಸಿ

ನಿನ್ನೆ ಟ್ವೀಟ್ ಮಾಡಿರುವ ಮೋದಿ ಯಾರಿಗೆಲ್ಲ ವ್ಯಾಕ್ಸಿನ್ ಅಗತ್ಯತೆಯಿದೆಯೋ ಅಂಥವರಿಗೆ ವ್ಯಾಕ್ಸಿನ್ ಪಡೆಯಲು ಸಹಾಯ ಮಾಡಿ. ಜೊತೆಗೆ ಸೋಂಕಿತರ ಚಿಕಿತ್ಸೆಗೆ ನಿಮ್ಮ ಕೈಲಾದ ಸಹಾಯವನ್ನು ಮಾಡಿ. ಇದರೊಂದಿಗೆ ಮಾಸ್ಕ್ ಧರಿಸೋದನ್ನು ಮಾತ್ರ ಮರಿಯಬೇಡಿ. ನೀವಷ್ಟೇ ಅಲ್ಲ ಇತರರಿಗೂ ವ್ಯಾಕ್ಸಿನ್ ಪಡೆಯುವಂತೆ ಉತ್ತೇಜನ ನೀಡಿ. ಜೊತೆಗೆ ಎಲ್ಲಿಯಾದರೂ ಸೋಂಕು ಕಂಡು ಬಂದರೆ ಅಲ್ಲಿ ಮೈಕ್ರೋ ಕಂಟೇನ್​ಮೆಂಟ್ ಝೋನ್ ನಿರ್ಮಾಣ ಮಾಡಿ ಎಂದು ಪ್ರಧಾನಿ ಕರೆ ನೀಡಿದ್ದಾರೆ.

- Advertisement -

Related news

error: Content is protected !!