ವರದಿ: ನ್ಯೂಸ್ ಡೆಸ್ಕ್, ವಿ ಟಿವಿ
ಐತಿಹಾಸಿಕ ಕ್ಷಣಕ್ಕೆ ಸಾಧು-ಸಂತರು, ಗಣ್ಯರು ಸಾಕ್ಷಿ
500 ವರ್ಷಗಳ ಭಾರತೀಯರ ಕನಸು ನನಸು
ಅಯೋಧ್ಯೆ: ಸುಮಾರು 500 ವರ್ಷಗಳ ಭಾರತೀಯರ ಕನಸು ನನಸಾಗಿದೆ. ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ರು. ಈ ಐತಿಹಾಸಿಕ ಕ್ಷಣಕ್ಕೆ ಸಾಧು-ಸಂತರು, ಗಣ್ಯರು ಸಾಕ್ಷಿಯಾದರು.
Ayodhya: #RamTemple 'Bhoomi Pujan' concludes.
— ANI (@ANI) August 5, 2020
Stage event to follow shortly. PM Modi, RSS chief Mohan Bhagwat, UP CM Yogi Adityanath, Governor Anandiben Patel & President of Ram Mandir Trust Nitya Gopal Das will be on stage for the event. #Ayodhya pic.twitter.com/cFCUHkN637

ಬೆಳಿಗ್ಗೆ 10.30ಕ್ಕೆ ಲಕ್ನೋ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿಯನ್ನು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸ್ವಾಗತಿಸಿದ್ರು. ಮೊದಲಿಗೆ ಹನುಮಾನ್ ಗುಡಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಶಿಲಾನ್ಯಾಸ ನಡೆಯುವ ಜಾಗದತ್ತ ಮೋದಿ ಪ್ರಯಾಣ ಬೆಳೆಸಿದರು. ರಾಮಲಲ್ಲಾನ ಆಶೀರ್ವಾದ ಪಡೆದ ಬಳಿಕ ಪಾರಿಜಾತ ಸಸಿ ನೆಟ್ಟರು. ನಂತರ ಮಧ್ಯಾಹ್ನ 12:30ಕ್ಕೆ ಭೂಮಿ ಪೂಜೆ ಕಾರ್ಯಕ್ರಮ ಆರಂಭಗೊಂಡಿತು. 12:40ಕ್ಕೆ ಪ್ರಧಾನಿ ಮೋದಿ ಅಡಿಗಲ್ಲು ಹಾಕಿದರು. ಈ ವೇಳೆ ಭಾರತದ ಸಂಕಷ್ಟ ನಿವಾರಣೆಗೆ ಕೂಡ ಸಂಕಲ್ಪ ಕೈಗೊಂಡಿರುವುದು ವಿಶೇಷವಾಗಿತ್ತು.

1989ರಲ್ಲಿ ವಿವಿಧ ಭಾಗಗಳಿಂದ ಭಕ್ತರು ಕಳುಹಿಸಿದ 9 ಕಲ್ಲುಗಳಿಗೆ ಪೂಜೆ:
ಮೊದಲಿಗೆ ವಿಘ್ನನಿವಾರಕನಿಗೆ ವಿಶೇಷ ಪೂಜೆ ಸಲ್ಲಿಸಲಾಯ್ತು. ನಂತರ 9 ಕಲ್ಲುಗಳನ್ನು ಇಟ್ಟು ಪೂಜೆ ಮಾಡಲಾಯ್ತು. 1989ರಲ್ಲಿ ದೇಶದ ವಿವಿಧ ಭಾಗಗಳಿಂದ ಭಕ್ತರು ಕಳುಹಿಸಿದ ಕಲ್ಲುಗಳು ಎಂದು ಪುರೋಹಿತರು ತಿಳಿಸಿದರು. ಇಂತಹ 2 ಲಕ್ಷದ 75 ಸಾವಿರ ಕಲ್ಲುಗಳಿವೆ. ಇದರಲ್ಲಿ ಜೈ ಶ್ರೀರಾಮ್ ಎಂಬ ಕೆತ್ತನೆ ಮಾಡಲಾಗಿರುವ 100 ಕಲ್ಲುಗಳನ್ನು ತೆಗೆದುಕೊಳ್ಳಳಾಗಿದೆ ಎಂದು ಮಾಹಿತಿ ನೀಡಿದರು.
