- Advertisement -



- Advertisement -
ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ದೇಶಾದ್ಯಂತ ಸುದ್ದಿ ಮಾಡ್ತಿದೆ. ಈ ನಡುವೆ ಮುಂಬೈನಲ್ಲಿ ಮತ್ತೋರ್ವ ನಟ ಆತ್ಮಹತ್ಯೆಗೆ ಶರಣಾಗಿದ್ದಾರೆ. 44 ವರ್ಷದ ಕಿರುತೆರೆ ನಟ ಸಮೀರ್ ಶರ್ಮಾ ತಾವು ವಾಸವಿದ್ದ ಅಪಾರ್ಟ್ ಮೆಂಟ್ ನಲ್ಲಿ ನೇಣಿಗೆ ಶರಣಾಗಿದ್ದಾರೆ.

ಮಲದ್ ವೆಸ್ಟ್ ನ ಸಿಎಚ್ ಎಸ್ ಅಪಾರ್ಟ್ ಮೆಂಟ್ ನಲ್ಲಿ ಸಮೀರ್ ಶರ್ಮಾ ನೇಣಿಗೆ ಶರಣಾಗಿದ್ದಾರೆ. ರಾತ್ರಿ ಭದ್ರತೆ ಪರಿಶೀಲನೆ ವೇಳೆ ಸಮೀರ್ ಶರ್ಮಾ ನೇಣುಬಿಗಿದುಕೊಂಡಿರುವ ಸ್ಥಿತಿಯಲ್ಲಿ ವಾಚ್ ಮ್ಯಾನ್ ಗಮನಕ್ಕೆ ಬಂದಿದೆ. ಕೂಡಲೇ ಬಿಲ್ಡಿಂಗ್ ಸೂಪರ್ ವೈಸರ್ ಗೆ ವಾಚ್ ಮ್ಯಾನ್ ವಿಷಯ ತಿಳಿಸಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿಲ್ಲ. ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಸಿಕ್ಕಿಲ್ಲ. ಘಟನಾ ಸಂಬಂಧ ಮಲದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಮೀರ್ ಶರ್ಮಾ ಯೇ ರಿಷ್ತೇ ಹೈ ಪ್ಯಾರ್ ಕೇ, ಕಹಾನಿ ಘರ್ ಘರ್ ಕೀ ಸೇರಿದಂತೆ ಹಲವಾರು ಜನಪ್ರಿಯ ಧಾರವಾಹಿಗಳಲ್ಲಿ ನಟಿಸಿದ್ದಾರೆ.

- Advertisement -