Monday, April 29, 2024
spot_imgspot_img
spot_imgspot_img

ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆ: ದೇಶವನ್ನು ಲಾಕ್​ಡೌನ್​ನಿಂದ ರಕ್ಷಿಸಬೇಕಿದೆ, ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ- ಪ್ರಧಾನಿ ಮೋದಿ

- Advertisement -G L Acharya panikkar
- Advertisement -

ನವದೆಹಲಿ: ಕೊರೊನಾ ಸೋಂಕು ಏರುತ್ತಿರುವ ಹಿನ್ನೆಲೆ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ. ದೇಶವನ್ನು ಲಾಕ್​ಡೌನ್​ನಿಂದ ರಕ್ಷಿಸಬೇಕಿದೆ. ದಯವಿಟ್ಟು ಎಲ್ಲರೂ ಕಟ್ಟುನಿಟ್ಟಿನಿಂದ ಕೊರೊನಾ ನಿಯಮಗಳನ್ನು ಪಾಲಿಸಿ ಎಂದರು.

ಮೋದಿ ಭಾಷಣದ ಮುಖ್ಯಾಂಶಗಳು:

ಎಲ್ಲ ಫ್ರಂಟ್ ಲೈನ್ ವರ್ಕರ್​ಗಳು ಶ್ರಮವಹಿಸಿ ಜನರ ಜೀವ ರಕ್ಷಿಸಲು ಶ್ರಮಿಸುತ್ತಿದ್ದೀರಿ. ಕಠಿಣ ಸಮಯದಲ್ಲೂ ನಾವು ಎದೆಗುಂದಬಾರದು. ಸರಿಯಾದ ನಿರ್ಣಯ ತೆಗೆದುಕೊಂಡಾಗ ನಾವು ವಿಜಯರಾಗುತ್ತೇವೆ. ಇದೇ ಮಂತ್ರವನ್ನ ಮುಂದಿಟ್ಟುಕೊಂಡು ದೇಶ ದಿನ ರಾತ್ರಿ ಶ್ರಮಿಸುತ್ತಿದೆ.

ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಪ್ರೈವೇಟ್ ಸೆಕ್ಟರ್ ಎಲ್ಲವೂ ಜನರಿಗೆ ಆಕ್ಸಿಜನ್ ಸಿಗಬೇಕೆಂದು ಬಯಸುತ್ತದೆ. ಅದಕ್ಕಾಗಿ ಹಲವು ಕ್ರಮಗಳನ್ನು ತೆಗೆದೆಕೊಳ್ಳಲಾಗಿದೆ. ಈ ಬಾರಿ ಕೊರೊನಾ ಕೇಸ್ ಹೆಚ್ಚಾದಂತೆ ದೇಶದ ಫಾರ್ಮಾ ಸೆಕ್ಟರ್ ಔಷಧಿಗಳ ಉತ್ಪಾದನೆ ಹೆಚ್ಚಿಸಿದೆ. ದೇಶದ ಪ್ರಮುಖ ಫಾರ್ಮಾ ಕಂಪನಿಗಳ ಜೊತೆಗೆ ಸಭೆ ನಡೆದಿದೆ. ವ್ಯಾಕ್ಸಿನ್ ತಯಾರಿಕೆ ಹೆಚ್ಚಿಸಲು ಎಲ್ಲರೂ ಕಟಿಬದ್ಧರಾಗಿದ್ದಾರೆ. ಇಂಥ ಬಲಾಢ್ಯ ಫಾರ್ಮಾ ಸೆಕ್ಟರ್ ಹೊಂದಿರುವುದು ದೇಶದ ಅದೃಷ್ಟ.

ಕಳೆದ ವರ್ಷ ಕೊರೊನಾ ಬಂದಾಗ ಭಾರತದಲ್ಲಿ ಕೊರೊನಾ ವ್ಯಾಕ್ಸಿನ್​ನ ಕೆಲಸ ಪ್ರಾರಂಭಿಸಿದ್ದರು. ವಿಜ್ಞಾನಿಗಳು ಹಗಲು-ರಾತ್ರಿ ದುಡಿದರು. ಭಾರತ ಅತೀ ಕಡಿಮೆ ಬೆಲೆಯ ವ್ಯಾಕ್ಸಿನ್ ಹೊಂದಿದೆ. ವ್ಯಾಕ್ಸಿನ್​ನ ವೇಗ ಹೆಚ್ಚಿಸಲು ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಭಾರತ 2 ಮೇಡ್ ಇನ್ ಇಂಡಿಯಾ ವ್ಯಾಕ್ಸಿನ್ ಉತ್ಪಾದಿಸುತ್ತಿದೆ. ಇಂದು ಈ ಹೋರಾಟದಲ್ಲಿ ಎಲ್ಲ ಆರೋಗ್ಯ ಸಿಬ್ಬಂದಿ, ಫ್ರಂಟ್ ಲೈನ್ ವರ್ಕರ್ಸ್ ಹಾಗೂ ಹಿರಿಯ ಜನರಿಗೆ ವ್ಯಾಕ್ಸಿನ್ ಸಿಗುತ್ತಿದೆ.

ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಸಿಗಲಿದೆ. ಬಡವರು, ಮಧ್ಯಮ ವರ್ಗದ ಜನರು 45 ವರ್ಷ ಮೇಲ್ಪಟ್ಟ ಜನರಿಗೆ ನೀಡುತ್ತಿರುವ ವ್ಯಾಕ್ಸಿನೇಷನ್ ಮುಂದುವರೆಯಲಿದೆ. ಇದರ ಉಪಯೋಗವನ್ನು ಎಲ್ಲರೂ ಪಡೆಯಬೇಕು. ನಮ್ಮೆಲ್ಲರ ಪ್ರಯಾಸ ಜೀವನ ಉಳಿಸುವುದೇ ಆಗಿದೆ. ಆರ್ಥಿಕ ಸ್ಥಿತಿಯನ್ನೂ ಕಾಪಾಡಬೇಕಿದೆ.

ಶ್ರಮಿಕರಿಗೂ ಕೂಡಾ ವ್ಯಾಕ್ಸಿನ್ ಲಭ್ಯವಾಗಬೇಕು. ಅವರಿಗೆ ಭರವಸೆ ನೀಡಿ. ನೀವೆಲ್ಲಿದ್ದೀರಿ ಅಲ್ಲೇ ಇರಿ ಎಂದು ಸರ್ಕಾರಗಳು ಹೇಳಬೇಕು.ಈ ಮೊದಲು ಕೊರೊನಾಗೆ ಸಿದ್ಧತೆಗಳು ಇರಲಿಲ್ಲ. ಕಡಿಮೆ ಸಮಯದಲ್ಲಿ ಈ ವ್ಯವಸ್ಥೆಗಳನ್ನು ಮಾಡಲಾಗಿದೆ. ಡಾಕ್ಟರ್​ಗಳು ಹೆಚ್ಚೆಚ್ಚು ಜನರ ಜೀವಗಳನ್ನು ಉಳಿಸುತ್ತಿದ್ದಾರೆ, ಚಿಕಿತ್ಸೆಗಳನ್ನು ನೀಡುತ್ತಿದ್ದಾರೆ.

ಇಲ್ಲಿವರೆಗೆ ಧೈರ್ಯದಿಂದ ಹೋರಾಟ ನಡೆಸಿದ್ದೇವೆ. ಅದರ ಶ್ರೇಯಸ್ಸು ಎಲ್ಲರಿಗೂ ಸಿಗುತ್ತದೆ. ನೀವು ಇಲ್ಲಿವರೆಗೆ ದೇಶವನ್ನು ತಂದಿದ್ದೀರಿ.. ನಾವು ಕೊರೊನಾದಿಂದ ಮುಕ್ತಿ ಹೊಂದುತ್ತೇವೆಂದು ನಂಬಿಕೆ ಇದೆ.

ಯುವ ಜನರಿಗೆ ನಾನು ಮನವಿ ಮಾಡುತ್ತೇವೆ. ಸಣ್ಣ ಸಣ್ಣ ಕಮಿಟಿ ಮಾಡಿಕೊಂಡು ಕೊರೊನಾ ನಿಯಮಗಳನ್ನು ಪಾಲಿಸುವಂತೆ ಎಚ್ಚರಿಕೆ ವಹಿಸಿದರೆ ಕಠಿಣ ಕ್ರಮಗಳ ಅಗತ್ಯವೇ ಬೀಳುವುದಿಲ್ಲ. ಪುಟ್ಟ ಮಕ್ಕಳು ಸಹ ಮನೆಯ ಜನರಿಗೆ ಅರ್ಥ ಮಾಡಿಸಿದರು, ಸ್ವಚ್ಛತೆಯ ಸಂದೇಶ ನೀಡಿದರು. ಬಾಲಮಿತ್ರರಿಗೆ ಹೇಳುವುದೇನೆಂದರೆ ಮನೆಯವರು ಅನಿವಾರ್ಯವಲ್ಲದೇ ವಿನಾಕಾರಣ ಮನೆಯಿಂದ ಹೊರಗೆ ಹೋಗದಂತೆ ನೋಡಿಕೊಳ್ಳಿ.

ಇಂಥ ಸಂಕಷ್ಟ ಸಮಯದಲ್ಲಿ ಮಾಧ್ಯಮಗಳು ಜನರಿಗೆ ಮತ್ತಷ್ಟು ಎಚ್ಚರಿಕೆ ನೀಡಿ. ಭಯದ ವಾತಾವರಣ ಕಡಿಮೆಯಾಗುವಂತೆ ಮಾಡಿ. ದೇಶವನ್ನು ಲಾಕ್​ಡೌನ್​ನಿಂದ ಕಾಪಾಡಬೇಕಿದೆ. ಇಂದು ನವರಾತ್ರಿಯ ಮೊದಲ ದಿನ, ನಾಳೆ ರಾಮನವಮಿ ಇದೆ. ಈ ಮೂಲಕ ನಾವು ಮರ್ಯಾದಾ ಪುರುಷೋತ್ತಮನ ಆಚರಣೆಯಂದು ಮರ್ಯಾದೆಯನ್ನು ಕಾಪಾಡುತ್ತೇವೆಂಬ ಸಂದೇಶ ಕೊಡೋಣ.

ರಂಜಾನ್​ ನಮಗೆ ಧೈರ್ಯ ಆತ್ಮ ಸಂಯಮದ ಸಂದೇಶ ನೀಡುತ್ತದೆ. ಯಾವಾಗ ಜರೂರಿ ಇದೆ ಆಗಷ್ಟೇ ಹೊರಬನ್ನಿ. ನಿಮಗೆ ಕೇಳಿಕೊಳ್ಳುವುದಿಷ್ಟೇ. ನಿಮ್ಮ ಸಾಹಸ, ಧೈರ್ಯದಿಂದ ಈ ವಾತಾವರಣ ಬದಲಾಗಲಿದೆ. ನೀವೆಲ್ಲರೂ ಸ್ವಸ್ಥರಾಗಿರಿ ಪರಿವಾರವನ್ನ ಸ್ವಸ್ಥವಾಗಿರಿಸಿ.

driving
- Advertisement -

Related news

error: Content is protected !!