Saturday, April 27, 2024
spot_imgspot_img
spot_imgspot_img

ಪಿಪಿಇ ಕಿಟ್ ಧರಿಸಿ 13 ಕೋಟಿ ಮೌಲ್ಯದ ಚಿನ್ನಾಭರಣ ಕಳವು – ಸಿಸಿಕ್ಯಾಮೆರಾದಲ್ಲಿ ಬಯಲಾಯ್ತು ಖದೀಮನ ಕೈಚಳಕ!

- Advertisement -G L Acharya panikkar
- Advertisement -

ನವದೆಹಲಿ: ಕೊರೊನಾ ಸಾಂಕ್ರಾಮಿಕ ರೋಗದ ಸಂದರ್ಭ ಬಳಸುತ್ತಿದ್ದ ಪಿಪಿಇ ಕಿಟ್ ಅನ್ನು ಕಳ್ಳತನಕ್ಕೆ ಬಳಸಿಕೊಂಡ ಖದೀಮನೊಬ್ಬ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದರ ಆಧಾರದ ಮೇಲೆ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಪಶ್ಚಿಮ ಬಂಗಾಳ ಮೂಲದ ಶೇಖ್ ನೂರ್ ರೆಹಮಾನ್ (25) ಎಂದು ಗುರುತಿಸಲಾಗಿದೆ. ಈತ ಪಿಪಿಇ ಕಿಟ್ ಧರಿಸಿ ಆಭರಣ ಅಂಗಡಿಯೊಂದರ ಒಳಗೆ ನುಗ್ಗಿ 20 ಕೋಟಿ ರೂಪಾಯಿ ಬೆಲೆಬಾಳುವ ಚಿನ್ನ ಹಾಗೂ ನಗದನ್ನು ಕದ್ದಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದರ ಬೆನ್ನತ್ತಿದ ಪೊಲೀಸರು ರೆಹಮಾನ್‍ನ್ನು ಘಟನೆ ನಡೆದು ಒಂದು ದಿನದ ಒಳಗಾಗಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸರು ತನಿಖೆ ನಡೆಸಿದ ವೇಳೆ ರೆಹಮಾನ್ 3ನೇ ಮಹಡಿಲ್ಲಿದ್ದ ಸ್ಟೋರ್ ರೂಮ್‍ನ ಬೀಗ ಒಡೆದು ಅದರ ಮೂಲಕ ಅಂಗಡಿ ಪ್ರವೇಶಿಸಿರುವುದು ತಿಳಿದು ಬಂದಿದೆ. ಈ ಕಳ್ಳತನದ ಹಿಂದೆ ಇದೇ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಲೆಕ್ಟ್ರಿಷನ್ ಒಬ್ಬರ ಕೈವಾಡ ಇರುವುದು ಬೆಳಕಿಗೆ ಬಂದಿದೆ. ನಂತರ ಕದ್ದ ಚಿನ್ನಾಭರಣಗಳೆಲ್ಲಾ ಕರೋಲ್ ಬಾಗ್‍ನಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶೇಖ್ ನೂರ್ ರೆಹಮಾನ್ ಹಲವು ಸಾಮಾಜಿಕ ಜಾಲತಾಣಗದಲ್ಲಿ ಖಾತೆಯನ್ನು ಹೊಂದಿದ್ದಾನೆ. ಈತ ಈ ಹಿಂದೆ ಪದವಿ ವ್ಯಾಸಂಗವನ್ನು ಅರ್ಧದಲ್ಲಿ ನಿಲ್ಲಿಸಿ ಆಭರಣ ಅಂಗಡಿಯೊಂದರಲ್ಲಿ 2 ವರ್ಷ ಕೆಲಸ ಮಾಡುತ್ತಿದ್ದ. ಹಾಗೆ ಕಳ್ಳತನಕ್ಕೆ ಬಳಸುವ ಆಯುಧಗಳಾದ ಪ್ರೆಶರ್ ಕಟ್ಟರ್, ಗ್ಯಾಸ್ ಕಟ್ಟರ್, ಅಲೆನ್ ಕೀ ಮತ್ತು ಸ್ಕ್ರೂಡ್ರೈವರ್ ಬಳಕೆಯ ಬಗ್ಗೆ ಉತ್ತಮ ತಿಳುವಳಿಕೆ ಹೊಂದಿದ್ದ ಮತ್ತು ಕಳ್ಳತನದ ಮುಂಚೆ ಸರಿಯಾದ ಸ್ಕೆಚ್ ಹಾಕಿದ್ದ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.

ಈತ ವಾಸವಿದ್ದ ಕೊಠಡಿಗೆ ತೆರಳಿ ಪೊಲೀಸರು ನೋಡಿದಾಗ ಕಳ್ಳತನಕ್ಕೆ ಬಳಸಿದ್ದ ಪ್ರೆಶರ್ ಕಟ್ಟರ್, ಗ್ಯಾಸ್ ಕಟ್ಟರ್, ಅಲೆನ್ ಕೀ ಮತ್ತು ಸ್ಕ್ರೊಡೈವರ್ ಮತ್ತು 20 ಸಾವಿರ ನಗದನ್ನು ವಶಪಡಿಸಿಕೊಂಡಿದ್ದಾರೆ.

- Advertisement -

Related news

error: Content is protected !!