Wednesday, May 15, 2024
spot_imgspot_img
spot_imgspot_img

ಕೇರಳ ಆರೋಗ್ಯ ಕಾರ್ಯಕರ್ತರಿಗೆ ಪ್ರಧಾನಿ ಮೋದಿಯವರಿಂದ ಶ್ಲಾಘನೆ

- Advertisement -G L Acharya panikkar
- Advertisement -

ನವದೆಹಲಿ: ಕೇರಳ ರಾಜ್ಯ ಸರ್ಕಾರದ ಕೊರೊನಾ ನಿರ್ವಹಣೆ ಬಗ್ಗೆ ಪ್ರಶಂಸೆ ಕೇಳಿಬಂದ ಬೆನ್ನಲ್ಲೇ ಇದೀಗ ಅಲ್ಲಿನ ಆರೋಗ್ಯ ಕಾರ್ಯಕರ್ತರು ನರ್ಸ್​​ಗಳ ಬಗ್ಗೆಯೂ ಭಾರೀ ಮೆಚ್ಚುಗೆ ಕೇಳಿಬರ್ತಿದೆ. ಕೇರಳದಲ್ಲಿ ನರ್ಸ್​ಗಳು ಹಾಗೂ ಆರೋಗ್ಯ ಸಿಬ್ಬಂದಿಯ ಕಾರ್ಯವನ್ನು ಸ್ವತಃ ಪ್ರಧಾನಿ ಮೋದಿ ಟ್ವೀಟ್ ಮೂಲಕ ಶ್ಲಾಘಿಸಿದ್ದಾರೆ.

ಕೇರಳದಲ್ಲಿ ವ್ಯಾಕ್ಸಿನೇಷನ್​ ಪ್ರಕ್ರಿಯೆ ಯಾವುದೇ ಸಮಸ್ಯೆ ಇಲ್ಲದೇ ಮುಂದುವರೆದಿದೆ, ಅಲ್ಲಿನ ಆರೋಗ್ಯ ಸಿಬ್ಬಂದಿ ಹಾಗೂ ನರ್ಸ್​ಗಳು ವ್ಯಾಕ್ಸಿನೇಷನ್ ವೇಳೆ ಅತ್ಯಮೂಲ್ಯವಾದ ವ್ಯಾಕ್ಸಿನ್​ ವೇಸ್ಟೇಜ್ ಆಗದಂತೆ ಬಳ ಎಚ್ಚರಿಕೆಯಿಂದ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಈ ಕುರಿತು ಟ್ವೀಟ್ ಮಾಡಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವೇಸ್ಟೇಜ್ ಆಗಬೇಕಿದ್ದ ವ್ಯಾಕ್ಸಿನ್​ ಕೂಡ ಸದ್ಬಳಕೆ ಮಾಡಿಕೊಂಡು ನಿಗದಿತ ಸಂಖ್ಯೆಗಿಂತಲೂ ಹೆಚ್ಚು ಜನರಿಗೆ ವ್ಯಾಕ್ಸಿನೇಷನ್​ ಮಾಡಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.

ಇದಕ್ಕೆ ಪ್ರಶಂಸೆ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ.. ನಮ್ಮ ಆರೋಗ್ಯ ಕಾರ್ಯಕರ್ತರು ಹಾಗೂ ನರ್ಸ್​ಗಳು ವ್ಯಾಕ್ಸಿನ್ ವೇಸ್ಟೇಜ್​​ ಹೆಚ್ಚಾಗದಂತೆ ನೋಡಿಕೊಳ್ಳುವ ಮೂಲಕ ಉದಾಹರಣೆ ಸೃಷ್ಟಿಸಿದ್ದಾರೆ. ಕೊರೊನಾ ವಿರುದ್ಧದ ಹೋರಾಟ ಬಲಪಡಿಸಲು ವ್ಯಾಕ್ಸಿನ್ ವೇಸ್ಟೇಜ್​ ಕಡಿಮೆಯಾಗಿಸುವುದು ಪ್ರಮುಖವಾದುದು ಎಂದಿದ್ದಾರೆ.

driving
- Advertisement -

Related news

error: Content is protected !!