Monday, June 8, 2026
spot_imgspot_img
spot_imgspot_img

ಮಂಗಳೂರು: ಅಮೆರಿಕಾ ಪ್ರವಾಸದ ವೇಳೆ ಮೋದಿಗೆ ಆತಿಥ್ಯ ನೀಡಿದ ತುಳುನಾಡಿನ ಯುವತಿ

- Advertisement -
- Advertisement -

ಮಂಗಳೂರು: ಅಮೆರಿಕ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೂರು ದಿನಗಳ ಆತಿಥ್ಯ ನಿರ್ವಹಣೆ ಜವಾಬ್ದಾರಿಯನ್ನು ಮಂಗಳೂರು ಮೂಲದ ಸುಮಲ್ ಕೋಟ್ಯಾನ್ ಅಚ್ಚುಕಟ್ಟಾಗಿ ನಿರ್ವಹಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಪ್ರಧಾನಿ ಮೋದಿ ಅವರ ಆಹಾರ ಸುರಕ್ಷೆ ಸೇರಿದಂತೆ ಹಲವು ವಿಚಾರಗಳ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಈ ಹಿಂದೆಯೂ ಪ್ರಧಾನಿ ಮೋದಿ ಅವರ ಅಮೆರಿಕ ಭೇಟಿ ನೀಡಿದ್ದಾಗ ಸುಮಲ್ ಆತಿಥ್ಯ ನಿರ್ವಹಣೆ ಮಾಡಿದ ಅನುಭವವಿದೆ.

ಆತಿಥ್ಯದ ಮುಖ್ಯ ನೇತೃತ್ವವನ್ನು ಕುಂದಾಪುರದ ಆಲೂರು ಮೂಲದ ಅನಿವಾಸಿ ಭಾರತೀಯ ಹೊಟೇಲ್ ಉದ್ಯಮಿ ಆನಂದ್ ಪೂಜಾರಿ ವಹಿಸಿದ್ದರು. ಅವರ ಸಲಹೆಯ ಮೇರೆಗೆ ಸುಮಲ್ ಆತಿಥ್ಯ ನಿರ್ವಹಣೆಯ ಜವಾಬ್ದಾರಿ ನಿಭಾಯಿಸಿದ್ದಾರೆ.

ಮಂಗಳೂರಿನ ಮೇರಿಹಿಲ್ ನಿವಾಸಿಗಳಾದ ಗೋಪಾಲ್ ಪೂಜಾರಿ ಹಾಗೂ ಸುಪಲ ದಂಪತಿಯ ಪುತ್ರಿಯಾಗಿರುವ ಸುಮಲ್ 10 ವರ್ಷಗಳಿಂದ ಅಮೆರಿಕದ ಐಟಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ.

driving
- Advertisement -

Related news

error: Content is protected !!