Thursday, April 25, 2024
spot_imgspot_img
spot_imgspot_img

ಮೂಡುಬಿದಿರೆ: ಮಹಿಳೆಯ ನಗ್ನ ಚಿತ್ರಗಳನ್ನು ಮುಂದಿಟ್ಟು ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಬ್ಲಾಕ್‌ಮೇಲ್; ಯುವಕ ಅಂದರ್!

- Advertisement -G L Acharya panikkar
- Advertisement -

ಮೂಡುಬಿದಿರೆ: ಮಹಿಳೆಯೊಬ್ಬಳ ನಗ್ನ ಚಿತ್ರಗಳನ್ನು ಮುಂದಿಟ್ಟು ಬ್ಲಾಕ್‌ಮೇಲ್ ಮಾಡುತ್ತಿದ್ದ ಯುವಕನನ್ನು ಮೂಡುಬಿದ್ರೆ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಬಂಧಿತ ಆರೋಪಿಯನ್ನು ಪುತ್ತಿಗೆ ಗ್ರಾಮ ನಿವಾಸಿ ವಿಜಯ್ ಗೌಡ(33) ಎನ್ನಲಾಗಿದೆ.

ಮನೆಗೆ ಕೂಲಿ ಕೆಲಸಕ್ಕೆಂದು ಬರುತ್ತಿದ್ದ ಮಹಿಳೆಯ ಮೊಬೈಲ್ ನಂಬರ್‌ನ್ನು ವಿಜಯ್ ಗೌಡ ಪಡೆದುಕೊಂಡು ಸಲುಗೆ ಬೆಳೆಸಿದ್ದು, ಆನಂತರ ಕರೆ ಮಾಡಿ, ತನಗೆ ವಾಟ್ಸಪ್ ನಲ್ಲಿ ನಗ್ನ ಚಿತ್ರಗಳನ್ನು ಕಳುಹಿಸುವಂತೆ ಆರೋಪಿಯು ಒತ್ತಡ ಹೇರಿದಲ್ಲದೇ ತನಗೆ ನಿನ್ನ ಜೊತೆ ಸಂಬಂಧ ಇದೆಯೆಂದು ಸುದ್ದಿ ಹಬ್ಬಿಸುವುದಾಗಿ ಬೆದರಿಕೆ ಒಡ್ಡಿದ್ದಾನೆ ಇದರ ಒತ್ತಡಕ್ಕೆ ಬಿದ್ದ ಮಹಿಳೆ ಆತನಿಗೆ ನಗ್ನಚಿತ್ರಗಳನ್ನು ಕಳುಹಿಸಿದ್ದಾರೆ. ಅದೇ ಫೋಟೋಗಳನ್ನು ಮುಂದಿಟ್ಟು ಯುವಕ ಬ್ಲಾಕ್ ಮೇಲ್ ಮಾಡಿದ್ದಾನೆ.

ಆನಂತರ ತನ್ನೊಂದಿಗೆ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಬೇಡಿಕೆ ಇಟ್ಟಿದ್ದು, ಅಲ್ಲದೆ, ಫೋಟೋಗಳನ್ನು ಜಾಲತಾಣದಲ್ಲಿ ಹಾಕಿ, ಮನೆಯವರಿಗೂ ನಿನ್ನ ಬೆತ್ತಲೆ ಫೋಟೋಗಳನ್ನು ಕಳುಹಿಸುವುದಾಗಿ ಬೆದರಿಸಿ ಹಣ ನೀಡುವಂತೆ ಪೀಡಿಸಿ ಆಗಸ್ಟ್ 19ರಂದು ಎರಡು ಸಾವಿರ ರೂಪಾಯಿ ತೆಗೆದುಕೊಂಡಿದ್ದಾನೆ. ಆಗಸ್ಟ್ 28ರಂದು ಮಹಿಳೆಯ ಮನೆಗೆ ತೆರಳಿ, ಮತ್ತೆ ಹಣ ನೀಡುವಂತೆ ಪೀಡಿಸಿದ್ದು, ನಿರಾಕರಿಸಿದಾಗ ನಗ್ನಚಿತ್ರಗಳನ್ನು ತನ್ನ ಗೆಳೆಯರಿಗೆ ಕಳುಹಿಸಿ ಮಾನ ಹರಾಜು ಮಾಡಿರಿವುದಾಗಿ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪೊಲೀಸರು ಆರೋಪಿ ವಿಜಯ್.ಗೌಡನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!