Sunday, April 28, 2024
spot_imgspot_img
spot_imgspot_img

ಚಲಿಸುವ ರೈಲಿಗೆ ಸಿಲುಕಿ 90ಕ್ಕೂ ಹೆಚ್ಚು ಕುರಿಗಳ ಮಾರಣ ಹೋಮ.!

- Advertisement -G L Acharya panikkar
- Advertisement -

ರೈಲಿಗೆ ಸಿಲುಕಿ 92 ಕುರಿಗಳು ಸಾವಿಗೀಡಾದ ಘಟನೆ ಚಿಕ್ಕಬಳ್ಳಾಪುರ-ಶಿಡ್ಲಘಟ್ಟ ರೈಲು ಮಾರ್ಗದ ಲಕ್ಕಹಳ್ಳಿ ಗ್ರಾಮದ ಸಮೀಪ ನಡೆದಿದೆ.

ರೈಲ್ವೆ ಹಳಿಗಳ ಪಕ್ಕದಲ್ಲಿ ಕುರಿಗಳನ್ನು ಮೇಯಿಸುತ್ತಿದ್ದಾಗ, ಕುರಿಗಳ ಮೇಲೆ ನಾಯಿಗಳು ದಾಳಿ ಮಾಡಿದ್ದು, ಇದರಿಂದಾಗಿ ಕುರಿಗಳು ಹೆದರಿ ರೈಲ್ವೆ ಹಳಿಗಳ ಮೇಲೆ ಓಡಿವೆ ಎನ್ನಲಾಗಿದೆ. ಅದೇ ವೇಳೆ ಹೈಸ್ಪೀಡ್‌ನಲ್ಲಿ ರೈಲು ಬಂದಿದ್ದು, ಅದಕ್ಕೆ ಸಿಲುಕಿ 92 ಕುರಿಗಳು ಸ್ಥಳದಲ್ಲೇ ಮೃತಪಟ್ಟಿವೆ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆ ವೇಳೆ ಕುರಿಗಾಹಿ ಕೂದಲಮ್ಮ ಸಹ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!