Monday, June 8, 2026
spot_imgspot_img
spot_imgspot_img

ವರದಕ್ಷಿಣೆ ಕಿರುಕುಳ ಆರೋಪ; ತಾಯಿ, ಮಗು ಆತ್ಮಹತ್ಯೆ

- Advertisement -
- Advertisement -

ಕೆರೆಗೆ ಹಾರಿ ತಾಯಿ-ಮಗು ಆತ್ಮಹತ್ಯೆ ಮಾಡಿಕೊಂಡ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನಲ್ಲಿ ನಡೆದಿದೆ. ತಾಯಿ ತನ್ನ ಮಗುವನ್ನು ವೇಲ್ ನಲ್ಲಿ ಸೊಂಟಕ್ಕೆ ಕಟ್ಟಿಕೊಂಡು ಶಾಂತಿಸಾಗರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮೃತರನ್ನು ಕವಿತಾ (27) ನಿಹಾರಿಕಾ (5) ಎಂದು ಗುರುತಿಸಲಾಗಿದೆ. ಚನ್ನಗಿರಿ ತಾಲೂಕಿನ ಹೊನ್ನೆಬಾಗಿ ಮಂಜುನಾಥ್ ಅವರ ಪತ್ನಿ ಕವಿತಾ ಮೊನ್ನೆ ರಾತ್ರಿಯಿಂದ ಮನೆಯಿಂದ ಕಾಣೆಯಾಗಿದ್ದರು. ಈ ಬಗ್ಗೆ ಪತಿ ಮಂಜುನಾಥ್ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದರು. ಇದೀಗ ತಾಯಿ, ಮಗಳ ಶವ ಶಾಂತಿಸಾಗರ ಕೆರೆಯಲ್ಲಿ ಪತ್ತೆಯಾಗಿದೆ.

ಕವಿತಾ ಸಾವಿಗೆ ಪತಿ ಮಂಜುನಾಥ್ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಕವಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

- Advertisement -

Related news

error: Content is protected !!