Friday, June 5, 2026
spot_imgspot_img
spot_imgspot_img

ಮಂಗಳೂರು: ಒಂದು ವರ್ಷದ ಕಂದಮ್ಮನೊಂದಿಗೆ ನೇತ್ರಾವತಿ ನದಿಗೆ ಹಾರಿ ತಾಯಿ ಆತ್ಮಹತ್ಯೆ

- Advertisement -
- Advertisement -

ಮಂಗಳೂರು: ನೇತ್ರಾವತಿ ನದಿಗೆ ಒಂದು ವರ್ಷದ ಕಂದಮ್ಮನೊಂದಿಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ತಾಯಿ ಮಗುವಿನ ಮೃತ ದೇಹ ಹರೆಕಳ ಬಳಿ ನದಿಯಲ್ಲಿ ಶುಕ್ರವಾರ ಸಂಜೆ ಪತ್ತೆಯಾಗಿದೆ.

ಅಡ್ಯಾರು ಪದವಿನ ಚೈತ್ರಾ ಹಾಗೂ ಮಗು ದಿಶಾಂತ್ ಮೃತಪಟ್ಟವರು.

ಗುರುವಾರ (28-03-2024) ಮಗುವಿನ ಒಂದು ವರ್ಷದ ಹುಟ್ಟು ಹಬ್ಬವನ್ನು ದೇರಳಕಟ್ಟೆಯ ಸೇವಾಶ್ರಮದಲ್ಲಿ ಆಚರಿಸಿದ ತಾಯಿ ನಿನ್ನೆ ಮಗುವಿನೊಂದಿಗೆ ಜೀವಾಂತ್ಯಗೊಳಿಸಿದ್ದಾಳೆ. ಮಧ್ಯಾಹ್ನ ವೇಳೆ ನಾಪತ್ತೆಯಾಗಿದ್ದ ತಾಯಿ ಮಗುವಿಗಾಗಿ ಮನೆಯವರು ಹುಡುಕಾಡಿ ಸೋಷಿಯಲ್‌ ಮೀಡಿಯಾದಲ್ಲೂ ಹುಡುಕಿಕೊಡಿ ಅಂತ ಕೋರಿದ್ದಾರೆ. ಆದರೆ, ಸಂಜೆ ವೇಳೆ ತಾಯಿ ಮಗುವಿನ ಮೃತ ದೇಹ ಹರೆಕಳ ಬಳಿ ನದಿಯಲ್ಲಿ ಪತ್ತೆಯಾಗಿದೆ.

- Advertisement -

Related news

error: Content is protected !!