Monday, May 6, 2024
spot_imgspot_img
spot_imgspot_img

ಮೂಡುಬಿದಿರೆ: ಬೈಕ್ ಕಳವು; ಇಬ್ಬರು ಆರೋಪಿಗಳ ಬಂಧನ..!

- Advertisement -G L Acharya panikkar
- Advertisement -

ಮೂಡುಬಿದಿರೆ: ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿ ಜೊತೆಗೆ 3 ಲಕ್ಷ ರೂ. ಮೌಲ್ಯದ ಎರಡು ರೋಯಲ್‌ ಎನ್ ಫೀಲ್ಡ್‌ ಬೈಕುಗಳನ್ನು ಮೂಡುಬಿದಿರೆ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ಮೂಡುಬಿದಿರೆ ಕೋಟೆಬಾಗಿಲು ಗ್ರಾಮದ ಸಯ್ಯದ್ ಝಾಕೀರ್ (20) ಮತ್ತು ಮುಹಮ್ಮದ್ ಶಾಹೀಮ್ (24) ಬಂಧಿತ ಆರೋಪಿಗಳು.

ಮೂಡುಬಿದಿರೆಯ ಮಾರ್ಪಾಡಿ ಗ್ರಾಮದ ಸಾವಿರ ಕಂಬದ ಬಸದಿಯ ಬಳಿ ಇರುವ ಕೊಂಡೆ ಸ್ಟ್ರೀಟ್ ಎಂಬಲ್ಲಿ ಇಬ್ಬರು ಯುವಕರು ಹಾಗೂ ಅವರ ವಶದಲ್ಲಿ ನಂಬರ್ ಪ್ಲೇಟ್ ಇಲ್ಲದ ಬೈಕ್ ಇರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಮೂಡುಬಿದಿರೆ ಪೊಲೀಸರು ದಾಳಿ ನಡೆಸಿದ್ದರು. ಅಲ್ಲಿದ್ದ ಯುವಕರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಬೈಕ್ ಕಳವು ಪ್ರಕರಣ ಬೆಳಕಿಗೆ ಬಂದಿದೆ.

ಒಂದು ಬೈಕನ್ನು ಅ.25ರಂದು ಮಧ್ಯರಾತ್ರಿ ಮೂಡುಬಿದಿರೆ ಜೈನ್ ಪೇಟೆಯ ಬಡಗ ಬಸದಿ ಎದುರು ಇರುವ ದೇವಿ ಕೃಪಾ ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್ ಏರಿಯಾದಿಂದ ಹಾಗೂ ಇನ್ನೊಂದು ಬೈಕನ್ನು ಮಾರ್ಪಾಡಿ ಗ್ರಾಮದ ಎವರ್ ಪ್ರೈಸ್ ರೆಸಿಡೆನ್ಸಿ ಅಪಾರ್ಟ್ ಮೆಂಟ್‌ನ ಪಾರ್ಕಿಂಗ್ ಏರಿಯಾದಿಂದ ಕಳ್ಳತನ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಕಳವು ಮಾಡಿದ್ದ ಒಂದು ಬೈಕನ್ನು ಪೇಪರ್ ಮಿಲ್ ಬಳಿ ಇರುವ ಕೀರ್ತಿ ನಗರ ಕ್ರಾಸ್ ಬಳಿ ಪೊದೆಗಳ ಮಧ್ಯೆ ಬಚ್ಚಿಟ್ಟಿರುವ ಬಗ್ಗೆಯೂ ಆರೋಪಿಗಳು ಮಾಹಿತಿ ನೀಡಿದ ಮೇರೆಗೆ ಅದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎರಡೂ ಬೈಕ್‌ಗಳ ಮೌಲ್ಯ 3 ಲಕ್ಷ ರೂ. ಅಂದಾಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!