Tuesday, June 23, 2026
spot_imgspot_img
spot_imgspot_img

ಮುಲ್ಕಿ: ಅಕ್ರಮ ಗಾಂಜಾ ಮಾರಾಟ; ಆರೋಪಿಯ ಬಂಧನ

- Advertisement -
- Advertisement -

ಮುಲ್ಕಿಯ ಕೊಲ್ನಾಡು ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿಯಿಂದ ಮಂಗಳೂರು ಕಡೆಗೆ ಹಾದು ಹೋಗುವ ರಸ್ತೆಯ ಬಳಿ ಪೊಲೀಸರು ವ್ಯಕ್ತಿಯೋರ್ವನಿಂದ ಸುಮಾರು 1 ಕೆ.ಜಿ 160 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಂಧಿತ ಆರೋಪಿಯನ್ನು ಮಂಗಳೂರು ಕೋಡಿಕಲ್ ನಿವಾಸಿ ಧನೇಶ್ ಎಸ್. ಕುಮಾರ್ (35) ಎಂದು ಗುರುತಿಸಲಾಗಿದೆ.

ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಮುಲ್ಕಿ ಪೊಲೀಸ್ ನಿರೀಕ್ಷಕರಾದ ಮಂಜುನಾಥ್, ಬಿ.ಎಸ್ ರವರು ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿದ್ದು, ಮೊಬೈಲ್ ಫೋನ್ ಹಾಗೂ ಗಾಂಜಾ ತೂಕ ಮಾಡುವ ಯಂತ್ರ ಮತ್ತು ಇತರೆ ವಸ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

- Advertisement -

Related news

error: Content is protected !!