Sunday, April 28, 2024
spot_imgspot_img
spot_imgspot_img

ವಿಟ್ಲ: ಬೆಂಕಿ ಹಚ್ಚಿಕೊಂಡು ಮಹಿಳೆ ಆತ್ಮಹತ್ಯೆ!

- Advertisement -G L Acharya panikkar
- Advertisement -

ವಿಟ್ಲ: ವಿಟ್ಲ ಕಸಬಾ ಗ್ರಾಮದ ನೆಕ್ಕರೆಕಾಡು ನಿವಾಸಿ ಬಾಲಕೃಷ್ಣ ನಾಯ್ಕರ ಪತ್ನಿ ವನಿತಾ(40) ಗುರುವಾರ ಮುಂಜಾನೆ ತನ್ನ ಮನೆಯೊಳಗೆ ಮೈಮೇಲೆ ಡೀಸಿಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಗೆ ಶರಣಾಗಿದ್ದಾಳೆ.

ತೀರಾ ಬಡ ಕುಟುಂಬದ ಬಾಲಕೃಷ್ಣ ನಾಯ್ಕರ ಪತ್ನಿ ವನಿತಾಗೆ ನಾಲ್ಕು ಮಕ್ಕಳಿದ್ದು ಈ ಪೈಕಿ ಇಬ್ಬರು ಹೆಣ್ಣು ಮಕ್ಕಳನ್ನು ಮೂರು ವರ್ಷಗಳ ಹಿಂದೆ ಮುರಳೀಧರ ವಿಟ್ಲ ನೇತೃತ್ವದ ಫ್ರೆಂಡ್ಸ್ ವಿಟ್ಲ ತಂಡ ಕನ್ಯಾನದ ಭಾರತ ಸೇವಾಶ್ರಮಕ್ಕೆ ದಾಖಲಿಸಿ ಮಕ್ಕಳ ಸೇವೆ ಮಾಡುತ್ತಿದೆ.

ಮೃತ ವನಿತಾ 5 ತಿಂಗಳ ಹಿಂದಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದಲ್ಲದೇ ಜೊತೆಯಲ್ಲಿ ಮೂರು ವರ್ಷದ ವಿಕಲ ಚೇತನ ಹೆಣ್ಣು ಮಗುವಿದೆ. ಕಿತ್ತು ತಿನ್ನುವ ಬಡತನದ ಜೊತೆ ಪತಿ-ಪತ್ನಿ ಇಬ್ಬರೂ ಮದ್ಯದ ಚಟ ಹೊಂದಿದ್ದು ಬುಧವಾರ ರಾತ್ರಿ ಕುಡಿತದ ಮತ್ತಿನಲ್ಲಿ ಪತಿ-ಪತ್ನಿ ಜಗಳವಾಡಿದ್ದರೆಂದು ಸ್ವತ: ಪತಿ ಬಾಲಕೃಷ್ಣ ನಾಯ್ಕ ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆ ನಡೆದ ಬಳಿಕ ಮೃತದೇಹವನ್ನು ಫ್ರೆಂಡ್ಸ್ ವಿಟ್ಲದ ತಂಡ ಪಳಿಕೆ ಹಿಂದೂ ರುದ್ರಭೂಮಿಯಲ್ಲಿ ಮನೆಯವರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿಸಿದೆ. ಘಟನೆ ಬಗ್ಗೆ ವಿಟ್ಲ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!