- Advertisement -
- Advertisement -


ಮುಲ್ಕಿ; ಮಂಗಳೂರು: ಮೂಲ್ಕಿ ಕಾರ್ನಾಡ್ ಬಳಿ ಆಟೋ ರಿಕ್ಷಾದಲ್ಲಿ ಬಂದು ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಸುರತ್ಕಲ್‌ನ ಕಾಟಿಪಳ್ಳ ಕೃಷ್ಣಾಪುರ ನಿವಾಸಿ ಯತಿರಾಜ್ (27) ಎಂಬಾತನನ್ನು ಮೂಲ್ಕಿ ಪೊಲೀಸರು ಶನಿವಾರ ಬಂಧಿಸಿದ್ದಾರೆ
ಮುಲ್ಕಿ ಕಾರ್ನಾಡ್ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಯತಿರಾಜ್‌ನನ್ನು ಮುಲ್ಕಿ ಪೊಲೀಸರು ಬಂಧಿಸಿ ಆತನಿಂದ 1ಕೆಜಿ 200ಗ್ರಾಂ ಗಾಂಜಾ, ಒಂದು ಆಟೋ ರಿಕ್ಷಾವನ್ನು ಗಾಂಜಾ ಮಾರಾಟದಿಂದ ಬಂದ ರೂಪಾಯಿ 300 ವನ್ನು ವಶಕ್ಕೆ ಪಡೆದು ಕೊಂಡು ಪ್ರಕರಣ ದಾಖಲಿಸಿರುತ್ತಾರೆ. ಬಂಧಿತನನ್ನು ನ್ಯಾಯಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
- Advertisement -








