Monday, May 6, 2024
spot_imgspot_img
spot_imgspot_img

60ನೇ ವರ್ಷದಲ್ಲಿ 2ನೇ ಮದುವೆಯಾದ ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ..!!

- Advertisement -G L Acharya panikkar
- Advertisement -

ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ ಅವರು ಫ್ಯಾಷನ್ ಉದ್ಯಮಿ ರೂಪಾಲಿ ಬರುವಾ ಅವರನ್ನು ಗುರುವಾರ ಕೊಲ್ಕತ್ತಾ ಕ್ಲಬ್​ನಲ್ಲಿ ವಿವಾಹವಾಗಿದ್ದಾರೆ .

ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟ ಈ ಹಿಂದೆ ಶಕುಂತಲಾ ಬರುವಾ ಅವರ ಮಗಳು ರಾಜೋಶಿ ಬರುವಾ ಅವರನ್ನು ಮದುವೆಯಾಗಿದ್ದರು. ಗುವಾಹಟಿಯವರಾಗಿರುವ ರೂಪಾಲಿ ಕೊಲ್ಕತ್ತಾದ ಫ್ಯಾಷನ್ ಸ್ಟೋರ್ ಜೊತೆ ಕೆಲಸ ಮಾಡುತ್ತಾರೆ. ಆಶಿಶ್ ಹಾಗೂ ರೂಪಾಲಿ ಆಪ್ತ ಸ್ನೇಹಿತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ರಿಜಿಸ್ಟರ್ ಮದುವೆಯಾದರು.

ನಾನು ನನ್ನ ಜೀವನದ ಈ ಘಟ್ಟದಲ್ಲಿ ರೂಪಾಲಿಯನ್ನು ಮದುವೆಯಾಗುತ್ತಿರುವುದು ವಿಶೇಷವಾದ ಭಾವನೆ. ನಾವು ಇಂದು ಬೆಳಗ್ಗೆ ರಿಜಿಸ್ಟರ್ ಮದುವೆಯಾಗಿದ್ದೇವೆ. ಸಂಜೆ ಒಂದು ಸಣ್ಣ ಗೆಟ್ ಟು ಗೆದರ್ ನಡೆಯಲಿದೆ ಎಂದಿದ್ದಾರೆ.

ನಮಗಿಬ್ಬರಿಗಿಗೂ ನಮ್ಮ ಮದುವೆ ಸಿಂಪಲ್ ಆಗಿ ನಡೆಯಬೇಕೆನ್ನುವ ಆಸೆ ಇತ್ತು ಎಂದು ನಟ ರಿವೀಲ್ ಮಾಡಿದ್ದ ತಮ್ಮ ಸರಳ ವಿವಾಹದ ಬಗ್ಗೆ ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ.

- Advertisement -

Related news

error: Content is protected !!