Sunday, June 29, 2025
spot_imgspot_img
spot_imgspot_img

ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಎರಡು ದಿನ ಕೂಡಿಟ್ಟು ಸಾಮೂಹಿಕ ಅತ್ಯಾಚಾರ; 14 ಮಂದಿ ಅರೆಸ್ಟ್!

- Advertisement -
- Advertisement -
driving

ಮುಂಬೈ: ಅಪ್ರಾಪ್ತ ಬಾಲಕಿಯನ್ನು 15ಕ್ಕೂ ಹೆಚ್ಚು ಕಾಮುಕರು ಸೇರಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಪುಣೆಯಲ್ಲಿ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಪೊಲೀಸರು 14 ಮಂದಿಯನ್ನು ಬಂಧಿಸಿದ್ದಾರೆ.

13 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ಗೆಳೆಯ ರೈಲಿನಲ್ಲಿ ಬರುತ್ತಾನೆಂದು ಪುಣೆ ರೈಲ್ವೇ ಸ್ಟೇಶನಿಗೆ ರಾತ್ರಿ ವೇಳೆ ತೆರಳಿದ್ದಳು. ಗೆಳೆಯ ನಿಗದಿತ ರೈಲಿನಲ್ಲಿ ಬರದೇ ಇದ್ದುದರಿಂದ ರೈಲ್ವೇ ಪ್ಲಾಟ್ ಫಾರಂನಲ್ಲಿ ನಿಂತುಕೊಂಡಿದ್ದ ಅಪ್ರಾಪ್ತ ಬಾಲಕಿಯನ್ನು ಆಟೋ ಚಾಲಕರಿಬ್ಬರು ನಿನ್ನನ್ನು ಮನೆಗೆ ಬಿಡುತ್ತೇವೆಂದು ಹೇಳಿ ಹತ್ತಿಸಿಕೊಂಡಿದ್ದಾರೆ. ಬಳಿಕ ಆಕೆಯನ್ನು ಬೇರೆಯದೇ ಜಾಗಕ್ಕೆ ಕೊಂಡೊಯ್ದು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.

ಎರಡು ದಿನಗಳ ಬಳಿಕ ಅಪ್ರಾಪ್ತ ಬಾಲಕಿಯನ್ನು ಮುಂಬೈ ಗೆ ತೆರಳುವ ಬಸ್ಸಿನಲ್ಲಿ ಬಿಟ್ಟು ಈ ಬಗ್ಗೆ ಯಾರಿಗಾದರೂ ಹೇಳಿದರೆ ನಿನ್ನ ಪೋಷಕರನ್ನು ಸಾಯಿಸುತ್ತೇವೆಂದು ಬೆದರಿಸಿದ್ದಾರೆ. ಅಪ್ರಾಪ್ತ ಬಾಲಕಿ ಈ ವಿಷಯವನ್ನು ತನ್ನ ಗೆಳೆಯನಿಗೆ ಫೋನ್ ಮೂಲಕ ತಿಳಿಸಿದ್ದಲ್ಲದೆ, ಪೊಲೀಸರಿಗೆ ದೂರು ನೀಡಿದ್ದಾರೆ. ಆಕೆ ನೀಡಿದ ಸುಳಿವು ಆಧರಿಸಿ, ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಆರೋಪಿಗಳ ಪೈಕಿ ಆರು ಮಂದಿ ಆಟೋ ಚಾಲಕರಾಗಿದ್ದು, ನಾಲ್ವರು ರೈಲ್ವೇ ಸ್ಟೇಶನ್ ಸಿಬ್ಬಂದಿಯಾಗಿದ್ದರು. ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!