Friday, March 29, 2024
spot_imgspot_img
spot_imgspot_img

ಅಂಕುಡೊಂಕಾದ ರಸ್ತೆಯಲ್ಲಿ ಚಲಿಸುತ್ತಿದ್ದ ವಾಹನ ಪ್ರಪಾತಕ್ಕೆ! – 6 ಮಂದಿ ಸಾವು, 18 ಮಂದಿಗೆ ಗಂಭೀರ ಗಾಯ

- Advertisement -G L Acharya panikkar
- Advertisement -

ಮುಂಬೈ: ಅಂಕುಡೊಂಕಾದ ರಸ್ತೆಯಲ್ಲಿ ಚಲಿಸುತ್ತಿದ್ದ ವಾಹನವೊಂದು ಪ್ರಪಾತಕ್ಕೆ ಬಿದ್ದು, 6 ಮಂದಿ ಸಾವನ್ನಪ್ಪಿ 18 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ನಂದರ್‍ಬಾರ್ ನಲ್ಲಿ ನಡೆದಿದೆ.

ಅಫಘಾತದಲ್ಲಿ ಸಾವನ್ನಪ್ಪಿದ 6 ಮಂದಿ ಝಾಪಿ ಫಲಾಯಿ ಗ್ರಾಮದವರಾಗಿದ್ದಾರೆ. 18 ಜನ ಗಾಯಾಳುಗಳಲ್ಲಿ 7 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ.ಅಪಘಾತಕ್ಕಿಡಾದ ವಾಹನದಲ್ಲಿ ಸುಮಾರು 24 ಮಂದಿ ಕಾರ್ಮಿಕರು ಮಹೀಂದ್ರಾ ಮ್ಯಾಕ್ಸ್ ವಾಹನದಲ್ಲಿ ತೋರನ್ಮಾಲ್‍ರೆ ಹೋಗುತ್ತಿದ್ದರು.

ಏಕಾಏಕಿ ವಾಹನವು ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದ ಪರಿಣಾಮ ಈ ಅಪಘಾತ ಸಂಭವಿಸಿದೆ. 400 ಅಡಿ ಆಳದ ಪ್ರಪಾತಕ್ಕೆ ವಾಹನ ಬಿದ್ದಿದೆ. ವಾಹನದಲ್ಲಿ ಐವರು ಮಹಿಳೆಯರಿದ್ದರು. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅಂಕುಡೊಂಕಾದ ಬೆಟ್ಟದ ಮಾರ್ಗದಲ್ಲಿ ವಾಹನ ಚಲಿಸುತ್ತಿರುವಾಗ ವಾಹನ ಚಾಲಕನ ನಿಯಂತ್ರಣವನ್ನು ಕಳೆದುಕೊಂಡು ಪ್ರಪಾತಕ್ಕೆ ಬಿದ್ದಿದೆ. ಇದರಿಂದ ಸಾವು ನೋವು ಸಂಭವಿಸಿದೆ. ಗಾಯಾಳುಗಳನ್ನು ನಂದರ್‍ಬಾರ್ ಸಿವಿಲ್ ಆಸ್ಪತ್ರೆ ಮತ್ತು ತೋರನ್ಮಲ್ ಗ್ರಾಮೀಣ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ನಂದರ್‍ಬಾರ್ ಪೊಲೀಸ್ ವರಿಷ್ಠಾಧಿಕಾರಿ ಮಹೇಂದ್ರ ಪಂಡಿತ್ ಹೇಳಿದ್ದಾರೆ.

- Advertisement -

Related news

error: Content is protected !!