Wednesday, July 22, 2026
spot_imgspot_img
spot_imgspot_img

ಮುಂಬೈ: ವೈದ್ಯಕೀಯ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ; ಗೆಳೆಯನ ವಿರುದ್ಧ ಮಾನಸಿಕ ಕಿರುಕುಳ ಆರೋಪ

- Advertisement -
- Advertisement -

ಮುಂಬೈ: ಗೆಳೆಯನ ಕಿರುಕುಳಕ್ಕೆ ಬೇಸತ್ತ ದಂತ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮುಂಬೈಯಲ್ಲಿ ನಡೆದಿದೆ. ತನ್ನ ಆರು ಪುಟಗಳ ಆತ್ಮಹತ್ಯೆ ಪತ್ರದಲ್ಲಿ ಗೆಳೆಯ ಮಾನಸಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದಾಳೆ.

ಮಾಸ್ಟರ್ ಆಫ್ ಡೆಂಟಲ್ ಸರ್ಜರಿ ವಿದ್ಯಾರ್ಥಿನಿ, ಸ್ತುತಿ ಸೋನಾವಾನೆ(24) ಮೃತಳು. ಫಜಲ್ ಮೊಹಮ್ಮದ್ ಖಾನ್ ಬಂಧಿತ ಆರೋಪಿ.

ಮೃತ ಸ್ತುತಿ ಮುಂಬೈನ ಆಂಟೋಪ್ ಹಿಲ್ ನೆರೆಹೊರೆಯಲ್ಲಿ ತನ್ನ ಪೋಷಕರ ಜೊತೆ ವಾಸವಿದ್ದಳು. ನಿನ್ನೆ ಬೆಳಿಗ್ಗೆ 11 ಗಂಟೆಯವರೆಗೆ ಆಕೆ ಕೋಣೆಯಿಂದ ಹೊರಬಾರದಿದ್ದಾಗ, ಪೋಷಕರು ಆಕೆಗೆ ಕರೆ ಮಾಡಿದ್ದಾರೆ. ಅದಕ್ಕೂ ಸ್ಪಂದಿಸದೇ ಇದ್ದಾಗ ಕೋಣೆ ಬಾಗಿಲು ಒಡೆದು ಒಳನುಗ್ಗಿದಾಗ, ಆಕೆ ಸೀಲಿಂಗ್‌ನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾಳೆ.

ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮೃತ ಸ್ತುತಿ ತನ್ನ ಕೋಣೆಯಲ್ಲಿ ಆರು ಪುಟದ ಆತ್ಮಹತ್ಯೆ ಪತ್ರ ಬರೆದಿಟ್ಟಿದ್ದು, ಅದರಲ್ಲಿ ಖಾನ್ ಹೆಸರು ಮತ್ತು ಆತ ನಿರಂತರ ಕಿರುಕುಳ ನೀಡುತ್ತಿದ್ದ ಎಂದು ಬರೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮೃತ ಯುವತಿಯ ಪೋಷಕರು ನೀಡಿದ ದೂರಿನ ಅನ್ವಯ, ಆಂಟೋಪ್ ಹಿಲ್ ಪೊಲೀಸರು ಭಾರತೀಯ ದಂಡ ಸಂಹಿತೆ 108 ಸೇರಿದಂತೆ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ, ಪೊಲೀಸರು ಆರೋಪಿ ಯುವಕನನ್ನು ಬಂಧಿಸಿದ್ದಾರೆ. ತನಿಖೆಯ ಸಮಯದಲ್ಲಿ ಮೃತ ಯುವತಿ ಹಾಗೂ ಆರೋಪಿ ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿದ್ದರು, ಕಳೆದ ಒಂದು ವರ್ಷದಿಂದ ಸಂಬಂಧದಲ್ಲಿದ್ದರು ಎಂಬುದು ತಿಳಿದುಬಂದಿದೆ.

- Advertisement -

Related news

error: Content is protected !!