Friday, April 26, 2024
spot_imgspot_img
spot_imgspot_img

ಮುಂಡೂರು: ಭಾರೀ ಮಳೆಗೆ ಕುಸಿದ ಮನೆ; ಪವಾಡ ಸದೃಶವಾಗಿ ಪಾರಾದ ತಾಯಿ ಮಗು

- Advertisement -G L Acharya panikkar
- Advertisement -

ಮುಂಡೂರು: ಮುಂಡೂರು ಗ್ರಾಮದ ನಡುಗುಡ್ಡೆ ಎಂಬಲ್ಲಿ ಸರಸ್ವತಿ ನಾಯ್ಕ್ ಎಂಬವರು ವಾಸವಿದ್ದ ಮನೆ ನಿನ್ನೆ ಸುರಿದ ಭಾರಿ ಮಳೆಗೆ ಕುಸಿದಿದ್ದು, ಪಕ್ಕಾಸು, ರೀಪು, ಹಂಚುಗಳು ಭೂಮಿ ಪಾಲಾಗಿದೆ.

ತಕ್ಷಣ ಸ್ಥಳಕ್ಕೆ ಧಾವಿಸಿ ಬಂದ ಪಂಚಾಯತ್ ಅಧ್ಯಕ್ಷರಾದ ಪುಷ್ಪ ಗೌಡ ಮೇಲಧಿಕಾರಿಗಳಿಗೆ ಕರೆ ಮಾಡಿ ಕಾರ್ಯ ಪ್ರವೃತ್ತರಾಗುವಂತೆ ಹಾಗು ತಹಶೀಲ್ದಾರ್ ರವರಿಗೆ ಇಂಜಿನಿಯರ್ ರವರನ್ನು ಕರೆಸಿ ಸೂಕ್ತ ಪರಿಹಾರ ಕೊಡಿಸಲು ಸೂಚಿಸಿದರು.

ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ಅಶೋಕ್ ಪುತ್ತಿಲ, ಬಾಲಕೃಷ್ಣ ಪೂಜಾರಿ. ಅರುಣಾ ಕಣ್ಣರ್ನೂಜಿ. ಊರಿನ ಪ್ರಮುಖರಾದ ಅರುಣ್ ಕುಮಾರ್ ಪುತ್ತಿಲ, ಜನಾರ್ಧನ ಪೂಜಾರಿ, ಅನಿಲ್ ಕಣ್ಣರ್ನೂಜಿ. ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಹರೀಶ್ ನಾಯ್ಕ್, ಸುಂದರ ಬಿಕೆ, ಧನಂಜಯ, ಯೋಗೀಶ್, ಹೆನ್ರಿ, ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.

ಮನೆಯಲ್ಲಿ ಸರಸ್ವತಿ ಯವರ ಮಕ್ಕಳು ಹಾಗು ಒಂದು ಅಂಗವಿಕಲ ಮಗು ಇರುತ್ತಿದ್ದು, ಕುಸಿದ ಸಂದರ್ಭದಲ್ಲಿ ಅವರೆಲ್ಲರೂ ಮನೆಯ ಹೊರಗಿನ ಕೊಟ್ಟಿಗೆ ಯಲ್ಲಿ ಇದ್ದರು. ಇದರಿಂದಾಗಿ ಪವಾಡ ಎಂಬಂತೆ ಬದುಕಿ ಉಳಿದಿದ್ದಾರೆ. ಸುಮಾರು 1ಲಕ್ಷ ನಷ್ಟ ಸಂಭವಿಸಿದೆ.

ದಿನ ಕೂಲಿ ಮಾಡುವ ಮತ್ತು ಅಂಗವಿಕಲ ಮಗು ಇರುವ ಈ ಸಂಸಾರಕ್ಕೆ ಸರ್ಕಾರದ ಸಹಾಯ ಬೇಕಾಗಿದೆ. ಕುಸಿದ ಮನೆಯ ಉಳಿದ ಹಂಚು ತೆಗೆದು ತಾತ್ಕಾಲಿಕವಾಗಿ ಜನಾರ್ಧನ ರವರು ನೀಡಿದ ಪ್ಲಾಸ್ಟಿಕ್ ಹಾಕಿ ನೀರು ಸೋರದಂತೆ ಮಾಡಲಾಯಿತು.

ಈ ಎಲ್ಲಾ ಕೆಲಸ ಕಾರ್ಯವನ್ನು ಶ್ರೀರಾಮ ಗೆಳೆಯರ ಬಳಗದ ಸದಸ್ಯರು ಮಾಡಿದ್ದು, ತಕ್ಷಣ ಧಾವಿಸಿ ಕೆಲಸ ನಿರ್ವಹಿಸಿದ ಶ್ರೀರಾಮ ಗೆಳೆಯರ ಬಳಗದ ಕೆಲಸಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ

ನರಿಮೊಗರು ಸಮೀಪದ ಕಾಳಿಂಗಹಿತ್ತಲು ಎಂಬಲ್ಲಿ ರಹಿಮಾನ್ ಎಂಬವರ ಮನೆಯ ಆವರಣ ಗೋಡೆ ಕುಸಿದು ಮಣ್ಣು ಪಾಲಾಗಿದ್ದು, ಇದರಿಂದಾಗಿ ಮನೆಯ ಜಗಲಿ ಕೂಡ ಬಿರುಕು ಬಿಟ್ಟಿದ್ದು, ಮನೆ ಕೂಡ ಕುಸಿಯುವ ಭೀತಿಯಲ್ಲಿದೆ. ಮಣ್ಣು ಹಾಗು ಕಲ್ಲು ಬಿದ್ದು ಸಂಪೂರ್ಣ ರಸ್ತೆ ಬ್ಲಾಕ್ ಆಗಿತು.

ಕಾಂಪೌಂಡ್ ಬಿದ್ದ ರಹಿಮಾನ್ ರವರ ಮಣ್ಣು ಹಾಗೂ ಕಲ್ಲು ತೆರವು ಮಾಡುವ ತಾತ್ಕಾಲಿಕ ದುರಸ್ತಿಗೆ ಶ್ರೀರಾಮ ಗೆಳೆಯರ ಬಳಗದ ಸದಸ್ಯರು ಹಾಗೂ ಹಿಂದೂ ಮುಖಂಡ ಅರುಣ್ ಪುತ್ತಿಲ, ಗ್ರಾಮ ಪಂಚಾಯತ್ ಸದಸ್ಯರಾದ ಅಶೋಕ್ ಪುತ್ತಿಲ, ಬಾಲಕೃಷ್ಣ ಪೂಜಾರಿ, ಅರುಣಾ ಕಣ್ಣರ್ನೂಜಿ, ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಹರೀಶ್, ಜನಾರ್ದನ ಪೂಜಾರಿ ಸೇರಿದಂತೆ ಗ್ರಾಮದ ಪ್ರಮುಖ ಹಿಂದೂ ಪ್ರಮುಖರು ನೆರವಾದರು.

- Advertisement -

Related news

error: Content is protected !!