Thursday, July 23, 2026
spot_imgspot_img
spot_imgspot_img

ಮನೆ ಪಕ್ಕ ಬೆಳೆದಿದ್ದ ತರಕಾರಿ ಗಿಡಗಳನ್ನ ದನ ಬಿಟ್ಟು ಮೇಯಿಸಿದ್ದಕ್ಕೆ ಗಲಾಟೆ – ಕೊಲೆಯಲ್ಲಿ ಅಂತ್ಯ

- Advertisement -
- Advertisement -

ರಾಮನಗರ: ಮನೆ ಪಕ್ಕ ಬೆಳೆದಿದ್ದ ತರಕಾರಿ ಗಿಡಗಳನ್ನ ದನ ಬಿಟ್ಟು ಮೇಯಿಸಿದ್ದಕ್ಕೆ ಗಲಾಟೆ ನಡೆದು ಮಹಿಳೆ ಮೇಲೆ ಹಲ್ಲೆ ನಡಿಸಿದ್ದ ಹಿನ್ನೆಲೆ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ರಾಮನಗರ ಟೌನ್ ವ್ಯಾಪ್ತಿಯ ಬಾಲಗೇರಿಯಲ್ಲಿ ನಡೆದಿದೆ.

ಜಯಮ್ಮ (55) ಮೃತ ಮಹಿಳೆ ಪಕ್ಕದ ಮನೆಯ ಶ್ರೀನಿವಾಸ್ ಎಂಬಾತನಿಂದ ಹಲ್ಲೆ ಆರೋಪ. ಜಯಮ್ಮ ಮತ್ತು ಶ್ರೀನಿವಾಸ್ ಅಕ್ಕಪಕ್ಕದ ನಿವಾಸಿಗಳು. ಮನೆ ಪಕ್ಕ ಜಯಮ್ಮ ಬೆಳೆದಿದ್ದ ಗಿಡಗಳನ್ನ ಶ್ರೀನಿವಾಸ್‌ಗೆ ಸೇರಿದ ಹಸು ಮೇಯ್ದಿತ್ತು ಎಂಬ ವಿಚಾರಕ್ಕೆ ಎರಡೂ ಕುಟುಂಬಗಳಿಗೂ ಗಲಾಟೆ ನಡೆದಿತ್ತು. ಗಲಾಟೆ ವೇಳೆ ಶ್ರೀನಿವಾಸ್ ಜಯಮ್ಮಗೆ ಕಪಾಳಕ್ಕೆ ಹೊಡೆದಿದ್ದ.

ಈ ವೇಳೆ ಪ್ರಜ್ಞೆ ತಪ್ಪಿ ಬಿದ್ದಿದ್ದ ಜಯಮ್ಮರನ್ನ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಜಯಮ್ಮ ಸಾವನ್ನಪ್ಪಿದ್ದು, ಆರೋಪಿ ಶ್ರೀನಿವಾಸ್‌ನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!