Friday, March 5, 2021

ರೂಪಾಂತರಿ ಕೊರೊನ ಮರಣ ಮೃದಂಗ ಬಾರಿಸಲಿದೆ

ಲಂಡನ್: ಬ್ರಿಟನ್‌ನಲ್ಲಿ ವೇಗವಾಗಿ ಹರಡುತ್ತಿರುವ ಕೊರೋನಾ ವೈರಸ್‌ನಿಂದಾಗಿ ಸಾವಿನ ಸಂಖ್ಯೆ ನಿರೀಕ್ಷೆ ಮೀರಿ ಹೆಚ್ಚಲಿದೆ ಎಂದು ಅಧ್ಯಯನವೊಂದು ತಿಳಿಸಿದೆ.

ಹೊಸ ಪ್ರಭೇದವು ಹೆಚ್ಚು ಸಾಂಕ್ರಾಮಿಕ ಗುಣ ಹೊಂದಿದೆ. ಇದರಿಂದಾಗಿ ಮುಂದಿನ ವರ್ಷ ಹೆಚ್ಚಿನ ಸಂಖ್ಯೆಯ ಜನರು ಆಸ್ಪತ್ರೆಗಳಿಗೆ ದಾಖಲಾಗಬೇಕಾಗುತ್ತದೆ. ಹೆಚ್ಚಿನ ಸಂಖ್ಯೆಯ ಸಾವು ಸಂಭವಿಸುತ್ತದೆ ಎಂದು ಅಧ್ಯಯನ ತಿಳಿಸಿದೆ.


ಈ ವೈರಸ್ ಪ್ರಭೇದವು ಇತರ ಪ್ರಭೇದಗಳಿಗೆ ಹೋಲಿಸಿದರೆ ಶೇ.56ರಷ್ಟು ಹೆಚ್ಚು ಸಾಂಕ್ರಾಮಿಕವಾಗಿದೆ ಎಂದು ಲಂಡನ್ ಸ್ಕೂಲ್ ಆಫ್ ಹೈಜೀನ್ ಆಂಡ್ ಟ್ರಾಪಿಕಲ್ ಮೆಡಿಸಿನ್‌ನ ಸೆಂಟರ್ ಫಾರ್ ಮ್ಯಾಥಮೆಟಿಕಲ್ ಮೋಡೆಲಿಂಗ್ ಆಫ್ ಇನ್‌ಫೆಕ್ಶಿಯಸ್ ಡಿಸೀಸಸ್ ಅಧ್ಯಯನ ತಿಳಿಸಿದೆ.

ಈ ವೈರಸ್ ರೋಗದ ತೀವ್ರತೆಯನ್ನು ಹೆಚ್ಚಿಸುತ್ತದೆ ಅಥವಾ ತಗ್ಗಿಸುತ್ತದೆ ಎನ್ನುವುದಕ್ಕೆ ಸ್ಪಷ್ಟ ಪುರಾವೆಯಿಲ್ಲ.

- Advertisement -

MOST POPULAR

HOT NEWS

Related news

error: Content is protected !!