Saturday, April 20, 2024
spot_imgspot_img
spot_imgspot_img

ಮುತ್ತೂಟ್ ಗ್ರೂಪ್’ನ ಅಧ್ಯಕ್ಷ ಎಂ.ಜಿ.ಜಾರ್ಜ್ ಮುತ್ತೂಟ್ ನಿಧನ

- Advertisement -G L Acharya panikkar
- Advertisement -

ನವದೆಹಲಿ: ದೇಶದ ಅತಿ ದೊಡ್ಡ ಚಿನ್ನದ ಮೇಲೆ ಸಾಲ ನೀಡುವ ಕಂಪನಿ ಮುತ್ತೂಟ್ ಗ್ರೂಪ್’ನ ಅಧ್ಯಕ್ಷ ಎಂ.ಜಿ.ಜಾರ್ಜ್ ಮುತ್ತೂಟ್ (72) ನಿಧನರಾದರು. ತಮ್ಮ ಮನೆಯ ಮೆಟ್ಟಿಲುಗಳ ಮೇಲಿಂದ ಆಕಸ್ಮಿಕವಾಗಿ ಜಾರಿ ಬಿದ್ದು, ತೀವ್ರವಾಗಿ ಗಾಯಗೊಂಡು ಕೊನೆಯುಸಿರೆಳೆದರು.

ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತರಾದರು. 2020ರ ಫೋರ್ಬ್ಸ್​ ಪಟ್ಟಿಯಲ್ಲಿ ಕಾಣಿಸಿಕೊಂಡ ಆರು ಮಲೆಯಾಳಿ ಉದ್ಯಮಿಗಳ ಪಟ್ಟಿಯಲ್ಲಿ ಇವರು ಸ್ಥಾನ ಗಳಿಸಿದ್ದರು. ಅಲ್ಲದೆ ಇವರನ್ನು ದೇಶದ 26ನೇ ಶ್ರೀಮಂತ ವ್ಯಕ್ತಿ ಮತ್ತು ಮಲೆಯಾಳಿಗಳಲ್ಲಿ ನಂಬರ್ 1 ಶ್ರೀಮಂತ ವ್ಯಕ್ತಿ ಎಂದು ಫೋರ್ಬ್ಸ್ ಘೋಷಿಸಿತ್ತು.

ಇವರು ನ. 2, 1949ರಲ್ಲಿಳ ಕೇರಳದ ಪಟ್ಟಣಂತಿಟ್ಟ ಜಿಲ್ಲೆಯ ಸಣ್ಣ ನಗರದಲ್ಲಿ ಜನಿಸಿದ್ದರು. ಇವರ ನಾಯಕತ್ವಲ್ಲಿ ಮುತ್ತೂಟ್ ಗ್ರೂಪ್ ಸುಮಾರು 20 ವಿವಿಧ ಸಂಸ್ಥೆಗಳನ್ನು ಹುಟ್ಟುಹಾಕಿದೆ.ಅಷ್ಟೇ ಅಲ್ಲದೆ ವಿಶ್ವದಾದ್ಯಂತ ಸುಮಾರು 5,500 ಬ್ರಾಂಚ್​​ಗಳನ್ನು ಹೊಂದಿದ್ದು, 1 ಸಾವಿರ ಕೋಟಿ ನಿವ್ವಳ ಆದಾಯವಿರುವ ಕ್ಲಬ್​​ಗೆ ಸೇರಿದ ಮೊಟ್ಟ ಮೊದಲ ಬ್ಯಾಂಕೇತರ ಹಣಕಾಸು ಸಂಸ್ಥೆ ಎಂಬ ಹೆಗ್ಗಳಿಕೆಯಿದೆ.

- Advertisement -

Related news

error: Content is protected !!