Saturday, June 20, 2026
spot_imgspot_img
spot_imgspot_img

ವಿಟ್ಲ: ಟೆರೇಸ್ ನಿಂದ ಬಿದ್ದು ಮೃತ ಪಟ್ಟ 28ರ ಯುವಕ

- Advertisement -
- Advertisement -

ವಿಟ್ಲ: ಬೆಳ್ತಂಗಡಿ ನಿವಾಸಿ ಪ್ರಸಾದ್ ಆಚಾರ್ಯ(28) ಟೆರೇಸ್ ನಿಂದ ಬಿದ್ದು ಮೃತಪಟ್ಟಿದ್ದಾರೆ.ಈತ ವಿಟ್ಲ ಕೇಪುವಿನಲ್ಲಿ ಸಂಬಂಧಿಕರ ಮನೆಯಲ್ಲಿದ್ದು ನಿನ್ನೆ ತಡರಾತ್ರಿ ಟೆರೇಸ್ ನಿಂದ ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ವಿಟ್ಲದ ಕಡೆಗೆ ಬರುತ್ತಿದ್ದಾಗ ದಾರಿ ಮಧ್ಯೆ ಸಾವನ್ನಪ್ಪಿದರು.

ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ಗಾಗಿ ದೇರಳಕಟ್ಟೆ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದೆ. ಬೆಳ್ತಂಗಡಿ ನಿವಾಸಿಯಾದ ಪ್ರಸಾದ್ ಆಚಾರ್ಯ ಕೇಪು ಕುಕ್ಕೆಬೆಟ್ಟುವಿನಲ್ಲಿ ಸಂಬಂಧಿಕರ ಮನೆಯಲ್ಲಿ ಚಿನ್ನದ ಕೆಲಸವನ್ನು ಮಾಡುತ್ತಿದ್ದರು. ವಿಟ್ಲ ಪೋಲೀಸರು ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!