Monday, July 20, 2026
spot_imgspot_img
spot_imgspot_img

ಮೈರ- ಕೇಪು: ಸಾರ್ವಜನಿಕರಿಗೆ ನೆರಳಾದ ತಾಯಿಯ ಸವಿ ನೆನಪಿನ ತಂಗುದಾಣ

- Advertisement -
- Advertisement -

ಶ್ರೀಮತಿ ಬೇಡೆಮಾರ್ ರಾಧಾ ರಾಮಣ್ಣ ಶೆಟ್ಟಿಯವರ ಸ್ಮರಣಾರ್ಥ ನಿರ್ಮಿಸಲಾದ ಪ್ರಯಾಣಿಕರ ತಂಗುದಾಣ ಉದ್ಘಾಟನೆ

ಮೈರ :-ವಿಟ್ಲ-ಕಾಸರಗೋಡು ರಾಜ್ಯ ಹೆದ್ದಾರಿ ಮೈರದಲ್ಲಿ ಶ್ರೀಮತಿ ಬೇಡೆಮಾರ್ ರಾಧಾ ರಾಮಣ್ಣ ಶೆಟ್ಟಿ ಅವರ ಸ್ಮರಣಾರ್ಥ ನಿರ್ಮಿಸಲಾದ ಪ್ರಯಾಣಿಕರ ತಂಗುದಾಣ ಉದ್ಘಾಟಿಸಲಾಯಿತು. ಮೈಸೂರು ನಿವೃತ್ತ ಉಪ ಪೊಲೀಸ್‌ ಆಯುಕ್ತ ಎಸ್ ಎಸ್ ಶೆಟ್ಟಿ ತಂಗುದಾಣ ಉದ್ಘಾಟಿಸಿದರು.

ತಾಯಿಯ ಸವಿ ನೆನಪಿಗಾಗಿ ಅವರ ಮಗ ಬೇಡೆಮಾರ್ ಜಗಜೀವನ್ ರಾಮ್ ಶೆಟ್ಟಿ ಸಾರ್ವಜನಿಕರಿಗೆ ಅನುಕೂಲಕ್ಕಾಗಿ ಈ ತಂಗುದಾಣವನ್ನು ಕಟ್ಟಿಸಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಕುಟುಂಬದ ಸದಸ್ಯರು, ನಿವೃತ್ತ ಅಧಿಕಾರಿ ಮತ್ತು ವಿವಿಧ ಸಂಘಗಳ ಪ್ರತಿನಿಧಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಗೌರವಯುತವಾಗಿ ನೆರವೇರಿಸಿದರು.

ಅತಿಥಿಗಳಾಗಿ ಶಶಿಕಲಾ ಎಸ್ ಶೆಟ್ಟಿ, ಮ್ಯಾನೇಜರ್ ವಿಜಯ ಬ್ಯಾಂಕ್ (Rtd) , ಕೆ ಪಿ ಶೆಟ್ಟಿ ಬೆಡೆಮಾರ್, ಸೀನಿಯರ್ ಮ್ಯಾನೇಜರ್ (rtd) ವಿಜಯ ಬ್ಯಾಂಕ್ , ಡಾ.ಜಯಪ್ರಕಾಶ್ ಶೆಟ್ಟಿ, ಅಸಿಸ್ಟೆಂಟ್ ಡೈರೆಕ್ಟರ್ (rtd),ರಾಧಾಕೃಷ್ಣ ಶೆಟ್ಟಿ ಚಲ್ಲಡ್ಕ, ಬಾಲಕೃಷ್ಣ ಶೆಟ್ಟಿ ಬೆಂಗ್ರೊಡಿ, ಪ್ರಭಾಕರ್ ಶೆಟ್ಟಿ ದಂಬೆಕಾನ, ಪುರುಷೋತ್ತಮ ಕಲ್ಲಂಗಳ, ಸತ್ಯನಾರಾಯಣ ಭಟ್, ಬಾಲಕೃಷ್ಣ ಕಾರಂತ, ಜನಾರ್ದನ ಭಟ್ ಅಮೈ, ಯಶಸ್ವಿನಿ ಶಾಸ್ತ್ರಿ, ರಾಜೇಶ್ ಕರವೀರ, ಸುಧಾಕರ ಬಡಕೋಡಿ, ಜಗಜೀವನ್ ರಾಮ್ ಶೆಟ್ಟಿ ಬೆಡೆಮಾರ್, ಸಂಚಿತಾ ಜಗಜೀವನ್ ಶೆಟ್ಟಿ, ರಕ್ಷ ರೂಪಿತ್ ರೈ, ಬಾಲಚಂದ್ರ ನಾಯಕ್, ರಮಾನಾಥ್ ವಿಟ್ಲ , ಅಬ್ದುಲ್ ಕರೀಮ್, ಸುಜಾತಾ ರೈ ಉಪಸ್ಥಿತರಿದ್ದರು.

ಈ ತಂಗುದಾಣವು ಸ್ಥಳೀಯ ಪ್ರಯಾಣಿಕರಿಗೆ ಅನುಕೂಲವಾಗುವುದಷ್ಟೇ ಅಲ್ಲದೆ ಶ್ರೀಮತಿ ರಾಧಾ ರಾಮಣ್ಣ ಶೆಟ್ಟಿಯ ನೆನಪಿನ ನೆರಳಿನ ಗೌರವವನ್ನು ಉಳಿಸುವ ಮಹತ್ವದ ಸಂಕೇತವನ್ನೂ ಹೊಂದಿದೆ ಎನ್ನಲಾಗಿದೆ.

- Advertisement -

Related news

error: Content is protected !!