Tuesday, June 16, 2026
spot_imgspot_img
spot_imgspot_img

ಮುಖಕ್ಕೆ ಹಚ್ಚುವ ಫೇಸ್ ಕ್ರೀಂ ತಿಂದು ಮಗು ಸಾವು!

- Advertisement -
- Advertisement -

ಮೈಸೂರು: ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ಬೆಳಗನಹಳ್ಳಿಯಲ್ಲಿ ಮುಖಕ್ಕೆ ಹಚ್ಚುವ ಫೇಸ್ ಕ್ರೀಂ ತಿಂದು ಮಗುವೊಂದು ಸಾವನಪ್ಪಿರುವ ಘಟನೆ ನಡೆದಿದೆ. ಎಚ್.ಡಿ.ಕೋಟೆ ತಾಲ್ಲೂಕಿನ ಬೆಳಗನಹಳ್ಳಿ ಗ್ರಾಮದ ಮಹೇಶ್-ಕನ್ಯಾ ದಂಪತಿಯ ಪುತ್ರ ಮನ್ವಿಷ್ ಮೃತಪಟ್ಟ ಮಗು.

ಮನ್ವಿಷ್‌, ಬುಧವಾರ ಸಂಜೆ ವೇಳೆ ಮನೆಯಲ್ಲಿ ಆಟವಾಡುತ್ತಿದ್ದಾಗ ಮುಖಕ್ಕೆ ಹಚ್ಚುವ ಕ್ರೀಂ ತಿಂದಿದ್ದಾನೆ. ಇದು ಪೋಷಕರ ಗಮನಕ್ಕೆ ಬಂದಿಲ್ಲ. ರಾತ್ರಿ 10 ಗಂಟೆ ಸಮಯದಲ್ಲಿ ವಾಂತಿ ಮಾಡಿಕೊಂಡಿದ್ದಾನೆ. ಮಗುವನ್ನು ತಕ್ಷಣವೇ ಚಿಕಿತ್ಸೆಗಾಗಿ ಎಚ್.ಡಿ.ಕೋಟೆ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವೈದ್ಯರು ಊಟೋಪಚಾರದ ಬಗ್ಗೆ ಪ್ರಶ್ನಿಸಿದ್ದಾರೆ. ಮನೆಯಲ್ಲಿ ಪರಿಶೀಲನೆ ನಡೆಸಿದಾಗ ಫೇಸ್‌ ಕ್ರೀಂ ತಿಂದಿರುವುದು ತಿಳಿದು ಬಂದಿದೆ. ಗೊತ್ತಾಗಿದೆ. ಚಿಕಿತ್ಸೆಗೆ ಸ್ಪಂದಿಸದ ಮಗು ನಿನ್ನೆ ಮೃತಪಟ್ಟಿದೆ.

- Advertisement -

Related news

error: Content is protected !!