Monday, June 22, 2026
spot_imgspot_img
spot_imgspot_img

ಮೈಸೂರು: ಆನೆದಂತದ ಕಲಾಕೃತಿಗಳ ಮಾರಾಟ ಯತ್ನ- ಮೂವರ ಬಂಧನ!

- Advertisement -
- Advertisement -

ಮೈಸೂರು: ಆನೆ ದಂತದಲ್ಲಿ ಸುಂದರವಾದ ದೇವರ ಕಲಾಕೃತಿಗಳನ್ನು ಕೆತ್ತನೆ ಮಾಡಿ ಭಾರಿ ಮೊತ್ತಕ್ಕೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಅರಣ್ಯ ಸಂಚಾರಿ ದಳದ ಸಿಬ್ಬಂದಿ ಬಂಧಿಸಿ ಆರೋಪಿಗಳಿಂದ ಮೂರು ಆನೆ ದಂತದ ಕಲಾಕೃತಿಗಳನ್ನು ವಶಕ್ಕೆ ಪಡೆದಿದ್ದಾರೆ.

ನಾಯ್ಡು ನಗರ ನಿವಾಸಿ ಮನೋಹರ್‍, ಕೊಡಗು ಜಿಲ್ಲೆಯ ಸೋಮವಾರಪೇಟೆ ನಿವಾಸಿಗಳಾದ ಸುಮಂತ್‍ ಮತ್ತು ಶಿವದಾಸ್ ಬಂಧಿತ ಆರೋಪಿಗಳು. ಆರೋಪಿಗಳು ಕೃತ್ಯಕ್ಕೆ ಬಳಕೆ ಮಾಡಿದ ಕಾರು ಹಾಗೂ ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ.

ಆನೆ ದಂತದ ಕಲಾಕೃತಿಯನ್ನು ಮೈಸೂರಿನ ನಾಯ್ಡು ನಗರದಲ್ಲಿ ಮಾರಾಟ ಮಾಡಲು ಆರೋಪಿಗಳು ಹೊಂಚು ಹಾಕುತ್ತಿರುವ ವಿಚಾರ ತಿಳಿದ ಅರಣ‍್ಯ ಸಂಚಾರಿ ದಳದ ಸಿಬ್ಬಂದಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದರು. ಎರಡು ದೊಡ್ಡ ದಂತಗಳಲ್ಲಿ ದೇವರ ವಿವಿಧ ಕಲಾಕೃತಿಗಳನ್ನು ಕೆತ್ತನೆ ಮಾಡಲಾಗಿದ್ದು, ಸಣ್ಣ ದಂತದಲ್ಲಿ ಕೊಳಲನ್ನು ಊದುವ ಕೃಷ್ಣನ ಕಲಾಕೃತಿ ಕೆತ್ತನೆ ಮಾಡಲಾಗಿದೆ.

- Advertisement -

Related news

error: Content is protected !!