Sunday, July 19, 2026
spot_imgspot_img
spot_imgspot_img

ಇಎನ್‌ಟಿ ಕ್ಲಿನಿಕ್‌ನ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣ- ಆರೋಪಿ ಪೊಲೀಸ್ ವಶಕ್ಕೆ

- Advertisement -
- Advertisement -

ಪುತ್ತೂರು: ಗಣೇಶ್‌ ಕಾಂಪ್ಲೆಕ್ಸ್‌ನಲ್ಲಿರುವ ಇಎನ್‌ಟಿ ಕ್ಲಿನಿಕ್‌ನ ಸಿಬ್ಬಂದಿ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿ, ಕ್ಲಿನಿಕ್‌ನ ಪೀಠೋಪಕರಣಗಳಿಗೆ ಹಾನಿ ಉಂಟು ಮಾಡಿದ ಘಟನೆ ಶನಿವಾರ ಬೆಳ್ಳಂಬೆಳಗ್ಗೆ ದರ್ಬೆಯಲ್ಲಿ ನಡೆದಿದ್ದು, ಡಾ| ರಾಮಮೋಹನ್ ಎಂಬವರ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಖ್ಯಾತ ವೈದ್ಯ ಡಾ.ರಾಮ್ ಮೋಹನ್ ನೇತೃತ್ವದ ಕ್ಲಿನಿಕ್ ಇದಾಗಿದ್ದು, ದಿನಂಪ್ರತಿ ನೂರಾರು ಮಂದಿ ಚಿಕಿತ್ಸೆಗೆ ಇಲ್ಲಿಗೆ ಬರುತ್ತಿದ್ದು ಮುಂಜಾನೆ 6 ಗಂಟೆಯಿಂದಲೇ ಕ್ಲಿನಿಕ್‌ಗೆ ಬಂದು ಟೋಕನ್ ಪಡೆಯುತ್ತಿದ್ದರು. ಇ.ಎನ್.ಟಿ ಕ್ಲಿನಿಕ್ ನಲ್ಲಿ ಸಲಹೆಗೆ ಬಂದ ವ್ಯಕ್ತಿಗಳು ಕ್ಯೂನಲ್ಲಿ ಕಾಯುತ್ತಿರುವಾಗ, ಹೊರಗಡೆ ಪಾರ್ಕಿಂಗ್ ಶುಲ್ಕ ಪಡೆದುಕೊಳ್ಳುವ ವ್ಯಕ್ತಿ ಕ್ಲಿನಿಕ್ ನ ಒಳಗೆ ಬಂದು ಆತನ ಪರಿಚಯದವರನ್ನು ಬೇಗನೆ ಒಳಗೆ ಕಳುಹಿಸಲಿಲ್ಲ ಎಂಬ ಕಾರಣವನ್ನು ನೆಪವಾಗಿಟ್ಟು ದಾಂಧಲೆ ಎಬ್ಬಿಸಿ, ಕ್ಲಿನಿಕ್ ನ ಸಿಬ್ಬಂದಿ ಶ್ರೀಕಾಂತ್ ಎಂಬಾತನಿಗೆ ಹಲ್ಲೆ ನಡೆಸಿ, ಅಲ್ಲಿನ ಪೀಠೋಪಕರಣಗಳಿಗೆ ಹಾನಿ ಉಂಟುಮಾಡಿದ್ದಾನೆ. ಬಳಿಕ ಹೊರಗಡೆ ತಮ್ಮ ಟೋಕನ್‌ ಗಾಗಿ ಕಾಯುತ್ತಿದ್ದ ಇತರ ರೋಗಿಗಳಿಗೆ ಭಯ ಉಂಟು ಮಾಡಿ, ಅವ್ಯಾಚವಾಗಿ ಬೈದು ಅಲ್ಲಿಂದ ಹೋಗಿರುತ್ತಾನೆ. ಸದ್ರಿ ಆರೋಪಿಯನ್ನು ಪುತ್ತೂರು ಬಪ್ಪಳಿಗೆ ನಿವಾಸಿ ಇಬ್ರಾಹಿಂ ಎಂದು ತಿಳಿದು ಬಂದಿದೆ. ಡಾ.ರಾಮ್‌ ಮೋಹನ್‌ ಅವರ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.

- Advertisement -

Related news

error: Content is protected !!