Thursday, April 25, 2024
spot_imgspot_img
spot_imgspot_img

ಮೈಸೂರಿಗೆ ಆಗಮಿಸಿದ ವಿಶೇಷ ವಿದೇಶಿಗರು

- Advertisement -G L Acharya panikkar
- Advertisement -

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿಗೆ ವಿದೇಶಿಗರು ಬರೋದು ಹೋಗೋದು ಕಾಮನ್‌ ವಿಚಾರ. ನವೆಂಬರ್ ಡಿಸೆಂಬರ್‌ ನಲ್ಲಿ ಬರುವ ಕೆಲ ವಿದೇಶಿ ಅತಿಥಿಗಳು ಬರೋಬ್ಬರಿ ಮೂರ್ನಾಲ್ಕು ತಿಂಗಳು ಇಲ್ಲೆ ಇದ್ದು ವಾಪಸ್ಸು ಹೋಗ್ತಾರೆ. ಅವರು ಮೈಸೂರಿಗೆ ಬಂದ್ರೆ ಒಂದಿಬ್ಬರು ಬರೋದಿಲ್ಲ’ ಸಾವಿರಾರು ಸಂಖ್ಯೆಯಲ್ಲಿ ಬಂದು ಎಲ್ಲರಿಗು ದರ್ಶನ ನೀಡ್ತಾರೆ. ಅಷ್ಟಕ್ಕು ಆ ವಿದೇಶಿ ಅತಿಥಿಗಳು ಯಾರು ಅಂತ ಈ ವಿಶೇಷ ವರದಿ ಓದಿ. ಎತ್ತ ನೋಡಿದರು ಹಕ್ಕಿಗಳ ಚಿಲಿಪಿಲಿ, ಒಂದರ ಹಿಂದೊಂದು ಹಾರುವ ಚಿತ್ತಾರ. ನೀರಿನ ಮೇಲೆ ಆಟ ತುಂಟಾಟ.

ಈ ರಮಣೀಯ ದೃಶ್ಯಗಳು ಕಂಡು ಬರುವುದು ಮೈಸೂರಿನ ಕಬಿನಿ ಜಲಾಶಯದ ಹಿನ್ನಿರಿನಲ್ಲಿ.  ಹೌದು ಮೈಸೂರಿಗೆ ಇದೀಗಾ ದೂರದ ಊರಿನಿಂದ ಅತಿಥಿಗಳಾಗಿ ವಿದೇಶಿ ಪಕ್ಷಿಗಳು ಆಗಮಿಸಿವೆ. ಪ್ರತಿ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಆಗಮಿಸುವ ಈ ಬಾರ್‌ಹೆಡ್‌ ಗೂಸ್‌ ಪಕ್ಷಿ ಸಂಕೂಲ ಮೂರ್ನಾಲ್ಕು ತಿಂಗಳ ಕಾಲ ಮೈಸೂರಿನಲ್ಲೇ ಬೀಡು ಬಿಟ್ಟಿರ್ತಾವೆ.

ಅದರಲ್ಲೂ ಚಳಿಗಾಲದ ಸಂದರ್ಭದಲ್ಲಿ ಹೆಚ್.ಡಿ.ಕೋಟೆಯ ಬೀಚನಹಳ್ಳಿಯ ಕಬಿನಿ ಡ್ಯಾಂಗೆ ಆಗಮಿಸುವ ಸಾವಿರಾರು ಸಂಖ್ಯೆಯ ಈ ಬಾರ್ ಹೆಡ್ ಗೂಸ್ ಪಕ್ಷಿಗಳು ಜಲಾಶಯದ ಅಂದವನ್ನ ಮತ್ತಷ್ಟು ಹೆಚ್ಚಿಸುತ್ತವೆ. ಅಲ್ಲದೆ ಇವುಗಳು ಸಾವಿರಾರು‌ ಕಿ.ಮೀ‌ ದೂರದ‌ ಮಂಗೋಲಿಯ ದಿಂದ ಹಿಮಾಲಯ ಪರ್ವತ ದಾಟಿ ಇಲ್ಲಿ ತಮ್ಮ ಜೀವ ಉಳಿಸಿಕೊಳ್ಳಲು ಬರುತ್ತವೆ. ಕಾರಣ ಮಂಗೋಲಿಯಾದಲ್ಲಿ ಈ ವೇಳೆ ಹಿಮ ಬೀಳುವ ಪರಿಸ್ಥಿತಿಯಿಂದ ಮಂಜುಗಡ್ಡೆಯ ವಾತಾವರಣ ಇರಲಿದೆ. ಇದರಿಂದ ಅಲ್ಲಿಂದ ವಾತಾವರಣದ ಬದಲಾವಣೆಯಿಂದಾಗಿ ಈ‌ ಪಕ್ಷಿಗಳು ಭಾರತದತ್ತ ಮುಖ ಮಾಡುತ್ತವೆ ಅಂತಾರೆ ವನ್ಯಜೀವಿ ಛಾಯಾಗ್ರಾಹಕರು.

ಇನ್ನು ಈ ಬಾರ್ ಹೆಡ್ ಗೂಸ್ ಪಕ್ಷಿಗಳು ವಲಸೆ ಹಕ್ಕಿಗಳಾಗಿದ್ದು ನೇಪಾಳ, ಮಂಗೋಲಿಯಾ, ಸೈಬಿರಿಯಾ ದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಸ್ವಚ್ಚಂದವಾದ ವಾತವರಣ ಹುಡುಕುವ ಈ ಪಕ್ಷಿಗಳು ದೇಶದಿಂದ ದೇಶಕ್ಕೆ ವಲಸೆ ಹೋಗುತ್ತವೆ. ಮೂರ್ನಾಲ್ಕು ತಿಂಗಳಿಗೋಸ್ಕರ ಬರುವ ಈ ವಲಸೆ ಹಕ್ಕಿಗಳು ನೀರಿರುವ ಸ್ಥಳ ಹಾಗೂ ಡ್ಯಾಂ ಬಳಿಯೇ ಬೀಡು ಬಿಟ್ಟು ಹೊಲ ಗದ್ದೆಗಳಲ್ಲಿ ಆಹಾರ ಸೇವಿಸಿ ನಂತರ ವಾಪಸ್ಸಾಗುತ್ತವೆ. ನಂತರ ಆಗಮಿಸಿರುವ ಈ‌  ಬಾರ್ ಹೆಡ್ ಗೂಸ್ ಪಕ್ಷಿಗಳು ಪಕ್ಷಿ‌ ಪ್ರಿಯರಿಗೆ ಸಂತಸವಾಗಿದೆ.

- Advertisement -

Related news

error: Content is protected !!